ಮಲ್ಪೆ ಬೀಚ್: ಪಾರ್ಕಿಂಗ್ ಏರಿಯಾ ಕಾರುಗಳಲ್ಲಿ ಹೆಚ್ಚಿದ ಕಳ್ಳತನ
Team Udayavani, Apr 28, 2022, 1:07 PM IST
ಮಲ್ಪೆ: ಮಲ್ಪೆ ಬೀಚ್‌ನ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ ಕಾರುಗಳಲ್ಲಿ ಕಳ್ಳತನದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕಳ್ಳರು ಚಾಲಾಕಿತನದಲ್ಲಿ ಕಾರಿನ ಗಾಜನ್ನು ಒಡೆದು ಕಾರಿನೊಳಗಿದ್ದ ಹಣ, ಒಡವೆ, ಮೊಬೈಲ್ ಇನ್ನಿತರ ವಸ್ತುಗಳನ್ನು ದೋಚಿದ ಘಟನೆಗಳು ನಡೆದಿವೆ.
ಇದೀಗ ಮಕ್ಕಳಿಗೆ ರಜೆ, ಐಟಿ ಬಿಟಿ ಕಂಪೆನಿಯ ಮಂದಿ ರಜೆ ಹಾಕಿ ಪ್ರವಾಸಕ್ಕೆ ತೆರಳುವುದು ಸಾಮಾನ್ಯ. ಕಳೆದ ಎರಡು ವಾರಗಳಿಂದ ಪ್ರವಾಸಿ ತಾಣಗಳಿಗೆ ಜನರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ವಿಕೇಂಡ್‌ಗಳಲ್ಲಿ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು,ವಾಹನಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಪಾರ್ಕಿಂಗ್ ಏರಿಯಾಗಳು ಭರ್ತಿಯಾಗಿದ್ದು, ಇದನ್ನೇ ಅನುಕೂಲವೆಂದು ಕಂಡುಕೊಂಡ ಕಳ್ಳರು ನಿತ್ಯವೂ ಕಳ್ಳತನ ನಡೆಸುತ್ತಿದ್ದು ವಾಹನಗಳ ಮಾಲಿಕರಿಗೆ ನಿದ್ದೆಗೆಡಿಸಿದೆ.
ಈ ಕುರಿತು ಕೆಲವರು ಪೊಲೀಸರಿಗೆ ದೂರು ನೀಡಿದರೆ ಇನ್ನು ಕೆಲವರು ನೀಡುವುದಿಲ್ಲ. ಇತ್ತೀಚೆಗೆ ಪೊಲೀಸರ ಎದುರಲ್ಲೇ ಕಳ್ಳನೋರ್ವ ಕಾರಿನಿಂದ ಪರ್ಸ್ ಎಗರಿಸಿರುವ ಘಟನೆ ನಡೆದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಕಳೆದ ಎರಡು ವಾರಗಳಿಂದ ಕಳ್ಳರ ಹಾವಳಿ ಮಿತಿ ಮೀರುತ್ತಿದೆ. ಇರುವ ಪಾರ್ಕಿಂಗ್ ಏರಿಯಾದಲ್ಲಿ ಕಾರುಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ನಡೆಸುತ್ತಿದ್ದಾರೆ. ಕಳ್ಳತನ ಕೇಸ್‌ಗಳು ಹೆಚ್ಚುತ್ತಿರುವು ಜನರಲ್ಲಿ ಆತಂಕ ಉಂಟಾಗಿದೆ.
ಪೊಲೀಸ್ ನಿಯೋಜನೆ
ಮಧ್ಯಾಹ್ನ 2 ಗಂಟೆಯಿಂದ 6ಗಂಟೆಯವರೆಗೆ ಕಳ್ಳರ ಈ ಕೃತ್ಯ ನಡೆಯುತ್ತಿದೆ. ಪಾರ್ಕಿಂಗ್ ಏರಿಯಾ ಮತ್ತು ಕಡಲತೀರಕ್ಕೆ ಪುರುಷ ಮತ್ತು ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರವಾಸಿಗರು ಸಮುದ್ರವನ್ನು ನೋಡಿ ಮೈರೆತು ತಮ್ಮ ವಸ್ತುಗಳ ಬಗ್ಗೆ ಕಾಳಜಿ ವಹಿಸುವುದು ಕಡಿಮೆ. ಈ ಬಗ್ಗೆ ಆಗಾಗ ಮೈಕ್ ಮೂಲಕ (ವಾಚ್ ಟವರ್) ಪ್ರವಾಸಿಗರಿಗೆ ಎಚ್ಚರಿಕೆಯನ್ನು ನೀಡಲಾಗುತ್ತದೆ. – ಶಕ್ತಿವೇಲು, ಸಬ್ ಇನ್ಸ್‌ಪೆಕ್ಟರ್, ಮಲ್ಪೆ ಆರಕ್ಷಕ ಠಾಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.