ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ ಮಲ್ಪೆ ಬೀಚ್
ವಾರಾಂತ್ಯದಲ್ಲಿ 16 ಸಾವಿರಕ್ಕೂ ಅಧಿಕ ಪ್ರವಾಸಿಗರ ಭೇಟಿ
Team Udayavani, May 20, 2019, 6:00 AM IST
ಮಲ್ಪೆ: ಬಿಸಿಲ ಬೇಗೆಗೆ ಬಸವಳಿದು ಹೋಗಿರುವ ಪ್ರವಾಸಿಗರು ಸೇರಿದಂತೆ ಸ್ಥಳೀಯರು ಒಂದಷ್ಟು ಮೈಮನ ತಂಪಾಗಿಸಲು ಕಡಲ ಕಿನಾರೆಯತ್ತ ಮುಖ ಮಾಡಿದ್ದಾರೆ. ಕಳೆದ ಮೂರ್‍ನಾಲ್ಕು ವಾರಗಳ ಅವಧಿಯಲ್ಲಿ ಮಲ್ಪೆ ಬೀಚ್‌ಗೆ ಜನಸಾಗರವೇ ಹರಿದು ಬರುತ್ತಿದೆ. ವೀಕೆಂಡ್‌ನಲ್ಲಂತೂ ಸಂಜೆ ವೇಳೆ ಮಲ್ಪೆ ಬೀಚ್ ಜನಜಂಗುಳಿ ಯಾಗಿದೆ.
ವೀಕೆಂಡ್‌ನಲ್ಲಿ 16000ಕ್ಕೂ ಅಧಿಕ
ಕಳೆದ ಮೂರ್‍ನಾಲು ವಾರಗಳಿಂದ ಹೆಚ್ಚಿನ ಪ್ರವಾಸಿಗರು ಮಲ್ಪೆ ಬೀಚ್‌ಗೆ ಆಗಮಿಸುತ್ತಿದ್ದಾರೆ. ಪರೀಕ್ಷಾ ಸಮಯ ದಲ್ಲೂ ಸಾಕಷ್ಟು ಸಂಖ್ಯೆಯಲ್ಲಿತ್ತು. ಇದೀಗ ಪ್ರತಿನಿತ್ಯ ಸ್ಥಳೀಯರು ಸೇರಿದಂತೆ ಇಲ್ಲಿಗಾಗಮಿಸುವ ಪ್ರವಾಸಿಗರ ಸಂಖ್ಯೆ 10ರಿಂದ 12 ಸಾವಿರ, ಶನಿವಾರ ಮತ್ತು ರವಿವಾರ 16ರಿಂದ 18 ಸಾವಿರ ಗಡಿ ದಾಟುತ್ತಿದೆ ಧರ್ಮಸ್ಥಳ, ಕೊಲ್ಲೂರು, ಶ್ರೀಕೃಷ್ಣ ಮಠಕ್ಕೆ ಬಂದ ಯಾತ್ರಾರ್ಥಿಗಳು ಮಲ್ಪೆ ಬೀಚ್‌ಗೆ ಲಗ್ಗೆ ಇಡುತ್ತಿದ್ದಾರೆ.
ಇರಲಿ ಎಚ್ಚರ
ಹೊರರಾಜ್ಯ, ಹೊರಜಿಲ್ಲೆಯ ಪ್ರವಾಸಿಗರು ಸಮುದ್ರ ಕಂಡೊಡನೆ ಓಡಿ ಬಂದು ನೀರಿಗಿಳಿದು ಮೈಮರೆತು ಅಪಾಯ ತಂದುಕೊಳ್ಳುತ್ತಾರೆ. ಈ ವೇಳೆ ಇಲ್ಲಿ ಜೀವರಕ್ಷಕ ತಂಡ ದವರು ಎಷ್ಟೆ ಎಚ್ಚರಿಕೆ ನೀಡಿದರೂ ಧಿಕ್ಕರಿಸಿ ಹೋಗಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವ ಪ್ರಮೇಯ ಜಾಸ್ತಿಯಾಗಿದೆ. ಮೋಜಿ ನಾಟದ ಉತ್ಸಾಹ ದಲ್ಲಿರುವ ಪ್ರವಾಸಿಗರು ಎಚ್ಚರಿಕೆಯನ್ನು ವಹಿಸುವುದು ಅಗತ್ಯ.
ಪಾರ್ಕಿಂಗ್ ಸಮಸ್ಯೆ
ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ ವಾಹನ ಪಾರ್ಕಿಂಗ್ ಸಮಸ್ಯೆ ಉದ್ಭºವಿಸಿದೆ. ವಾಹನವನ್ನು ಪಾರ್ಕ್ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಶನಿವಾರ ಮತ್ತು ರವಿವಾರ ಕಿ.ಮೀ.ಗಳಷ್ಟು ದೂರ ವಾಹನಗಳ ಸಾಲು ಇರುತ್ತದೆ. ಈಗಿರುವ ಪಾರ್ಕಿಂಗ್ ವ್ಯವಸ್ಥೆಗೆ ಜಾಗ ಸಾಕಾಗುತ್ತಿಲ್ಲ. ಬಹುತೇಕ ವಾಹನಗಳು ಬೀಚ್‌ನ ಮುಖ್ಯ ಭಾಗಕ್ಕೆ ಬರಲು ಸಾಧ್ಯವಾಗದೇ ಅರ್ಧದಲ್ಲೇ ನಿಂತು ಹಿಂದಿರುಗುತ್ತವೆ. ಪಾರ್ಕ್ ಮಾಡಿದ ವಾಹನ ತೆರವು ಕೂಡ ಕಷ್ಟವಾಗಿದೆ.
ಶೌಚಾಲಯ ಸಾಲದು
ಪ್ರಸ್ತುತ ಮಲ್ಪೆ ಬೀಚ್‌ನಲ್ಲಿ ಒಟ್ಟು ಎರಡು ಸುಸಜ್ಜಿತವಾದ ಶೌಚಾಲಯಗಳು ಮತ್ತು ಸ್ನಾನಗೃಹಗಳು ಇದ್ದರೂ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಗೆ ಪೂರಕವಾಗಿ ಈಗಿರುವ ಶೌಚಾಲಯ ಸಾಲದಾಗಿದೆ. ಇದ ರಿಂದಾಗಿ ಪ್ರವಾಸಿಗರು ಗಂಟೆಗಟ್ಟಲೆ ಶೌಚಾಲಯದ ಮುಂದೆ ಕಾಯುವ ಪರಿಸ್ಥಿತಿ ಇದೆ. ಹೆಚ್ಚುವರಿ ಶೌಚಾಲಯ ಅಗತ್ಯ ಆಗಬೇಕಿದೆ.
ಬ್ಯಾಕ್ಟೀರಿಯ ರಹಿತ ಬೀಚ್
ಪ್ರತಿನಿತ್ಯ 8 ಮಂದಿ ಸಿಬಂದಿಗಳಿಂದ ಸ್ವತ್ಛತೆಯ ಕಾರ್ಯ ನಡೆಸಲಾಗುತ್ತಿದೆ. ವಾರಕ್ಕೊಂದು ಬಾರಿ ಬೀಚ್ ಕ್ಲೀನಿಂಗ್ ಮೆಷಿನ್ ಉಪಯೋಗಿಸಲಾಗುತ್ತದೆ. ಇದರಿಂದ ಸುಮಾರು ಅರ್ಧ ಅಡಿಗಳಷ್ಟು ಮರಳು ಸ್ವತ್ಛವಾಗಿರುತ್ತದೆ. ಮರಳಿನಲ್ಲಿ ಮಲಗಬಹುದು, ಮಕ್ಕಳು ಹೊರಳಾಡಬಹುದು ಯಾವುದೇ ಬ್ಯಾಕ್ಟೀರಿಯ, ಸೋಂಕು ಉಂಟಾಗುವುದಿಲ್ಲ.
– ಸುದೇಶ್ ಶೆಟ್ಟಿ,,ಬೀಚ್ ನಿರ್ವಾಹಕರು
– ನಟರಾಜ್ ಮಲ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.