Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
Team Udayavani, Apr 18, 2024, 8:59 PM IST
ಮಲ್ಪೆ: ಮಲ್ಪೆ ಬೀಚ್‌ಗೆ ಬಂದು ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಮೂವರು ಸಮುದ್ರದ ಅಲೆಗಳ ಸೆಳೆತಕ್ಕೆ ಕೊಚ್ಚಿ ಹೋಗಿದ್ದು, ಈ ಪೈಕಿ ಓರ್ವ ಮೃತಪಟ್ಟಿದ್ದು, ಮತ್ತಿಬ್ಬರನ್ನು ರಕ್ಷಣೆ ಮಾಡಿದ ಘಟನೆ ಬುಧವಾರ ಮದ್ಯಾಹ್ನ ಮಲ್ಪೆ ಬೀಚ್‌ನಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಬೇಲೂರು ನಿವಾಸಿ ಗಿರೀಶ್ (26) ಮೃತಪಟ್ಟವರು. ಸಂತೋಷ್ (24) ಮತ್ತು ಹರೀಶ್ (30) ಅವರನ್ನು ರಕ್ಷಿಸಲಾಗಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾಸನ ದಾಬೆ ಬೇಲೂರಿನಿಂದ 20 ಜನರ ತಂಡ ಮಲ್ಪೆ ಬೀಚ್‌ಗೆ ಪ್ರವಾಸಕ್ಕೆ ಬಂದಿದ್ದರು. ಶೃಂಗೇರಿ, ಆಗುಂಬೆ ನೋಡಿ ಮಧ್ಯಾಹ್ನ ಮಲ್ಪೆಗೆ ಬಂದಿದ್ದರು, ಮಲ್ಪೆ ಬೀಚ್‌ನಲ್ಲಿ ಈ ಮೂವರು ಸಮುದ್ರಕ್ಕಿಳಿದು ಸ್ನಾನ ಮಾಡುತ್ತಿದ್ದಾಗ ಅಲೆಗಳ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾರೆ. ತತ್‌ಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ತಂಡದವರು ಮೂವರನ್ನು ರಕ್ಷಿಸಿ ದಡಕ್ಕೆ ತಂದಿದ್ದಾರೆ.
ಈ ಮೂವರ ಪೈಕಿ ಗಂಭೀರ ಸ್ಥಿತಿಯಲ್ಲಿದ್ದ ಗಿರೀಶ್ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಉಳಿದಿಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರಿಯ ನೀರಿನ ಸೆಳೆತ :
ಪ್ರಸ್ತುತ ಸಮಯ ಸಮುದ್ರದ ಅಲೆಗಳ ಆಬ್ಬರವೂ ತುಸು ಜಾಸ್ತಿಯಾಗಿದೆ. ಬೀಚ್‌ನ ಸಮುದ್ರ ತೀರದ ಅಡಿಯಲ್ಲಿ ಅಲ್ಲಲ್ಲಿ ಮಾರಿಯ ನೀರಿನ ಸೆಳೆತ (ತೋಡಿನ ಆಕಾರದಲ್ಲಿರುವ ನೀರಿನ ಸೆಳೆತ) ಇರುತ್ತದೆ. ಇದರಲ್ಲಿ ಸಿಲುಕಿಕೊಂಡವರಿಗೆ ದಡ ಸೇರಲು ಅಸಾಧ್ಯವಾಗುತ್ತದೆ. ಇದರಲ್ಲಿ ಸಿಕ್ಕಿಹಾಕಿ ಬಹುತೇಕ ಮಂದಿ ಮೇಲೆ ಬಾರದೆ ಸಮುದ್ರ ಪಾಲಾಗುವ ಪ್ರಸಂಗ ಎದುರಾಗುತ್ತದೆ. ಇದು ಹೆಚ್ಚಿನ ಊರಿನವರಿಗೇ ಗೊತ್ತಿರುವುದಿಲ್ಲ. ಅಂತಹದರಲ್ಲಿ ಅನ್ಯ ಜಿಲ್ಲೆ/ರಾಜ್ಯದ ಪ್ರವಾಸಿಗರು ಸಮುದ್ರಕ್ಕೆ ಇಳಿಯುವಾಗ ಎಚ್ಚರ ವಹಿಸಬೇಕಾಗಿದೆ ಎನ್ನುತ್ತಾರೆ ಈಶ್ವರ್ ಮಲ್ಪೆ ಅವರು.
ಪ್ರವಾಸಿಗರ ಜೀವಕ್ಕೆ ರಕ್ಷಣೆ ಇಲ್ಲ:
ಮಲ್ಪೆ ಬೀಚ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರರಿಗೆ ಸೂಕ್ತ ರಕ್ಷಣೆಯೇ ಇಲ್ಲ. ಸಮುದ್ರ ಪಾಲಾಗುವ ಪ್ರವಾಸಿಗರ ಜೀವವನ್ನು ರಕ್ಷಣೆ ಮಾಡಲು ಜೀವರಕ್ಷಕರ ತಂಡ ಕಾರ್ಯಾಚರಣೆಯಲ್ಲಿ ಇಲ್ಲ ಎಂದು ಸ್ಥಳೀಯರಾದ ಅನಿಲ್ ಬೀಚ್ ಆರೋಪಿಸಿದ್ದಾರೆ. ಪಾರ್ಕಿಂಗ್ ಚಾರ್ಚ್ ಸೇರಿದಂತೆ ಇತರ ಶುಲ್ಕವನ್ನು ವಸೂಲು ಮಾಡುತ್ತಾರೆ. ಆದರೆ ಪ್ರವಾಸಿಗರ ಜೀವಕ್ಕೆ ಇಲ್ಲಿ ಸೂಕ್ತ ರಕ್ಷಣೆ ನೀಡುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಆಡಳಿತ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.