ಮಲ್ಪೆ ಬೀಚ್ ಪ್ಲಾಸ್ಟಿಕ್ ಮುಕ್ತಗೊಳಿಸಿ
Team Udayavani, Mar 26, 2017, 12:25 PM IST
ಉಡುಪಿ: ಸೈಂಟ್ ಮೇರೀಸ್ ದ್ವೀಪ, ಮಲ್ಪೆ ಬೀಚ್‌ಗಳನ್ನು ಸ್ವತ್ಛತೆ ಮತ್ತು ಝೀರೋ ವೇಸ್ಟ್ ಪ್ರದೇಶ ಎಂದು ಘೋಷಿಸಿದ್ದು ಅನುಷ್ಠಾನದಲ್ಲಿ ಯಾವುದೇ ಲೋಪ ಸಲ್ಲದು. ಕಸ ವಿಲೇ ನಿರಂತರವಾಗಿ ನಡೆಯಬೇಕು ಎಂದು ಸಚಿವ
ಪ್ರಮೋದ್ ಮಧ್ವರಾಜ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಸಚಿವರು, ಸ್ವತ್ಛತೆ ಬಗ್ಗೆ ದೂರುಗಳು ಬರುತ್ತಿದ್ದು, ಬೀಚ್‌ನಲ್ಲಿ ಸ್ವತ್ಛತೆಗೆ ಆದ್ಯತೆ ನೀಡಬೇಕು. ಈ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡಲು ಧ್ವನಿ ಮುದ್ರಿತ ಸಂದೇಶಗಳನ್ನು ಬೋಟ್‌ಗಳಲ್ಲಿ ಅಳವಡಿಸಬೇಕು ಎಂದರು.
ತೇಲುವ ದೋಣಿಮನೆ
ಪಡುತೋನ್ಸೆಯಿಂದ ಪಡುಕರೆ ವರೆಗೆ ಬೀಚ್ ಅಭಿವೃದ್ಧಿ ಜತೆಗೆ ಪ್ರವಾಸೋದ್ಯಮವನ್ನು ಆಕರ್ಷಣೀಯವಾಗಿಸಲು ತೇಲುವ ದೋಣಿ ಮನೆಗಳನ್ನು ಇಲ್ಲಿ ಪರಿಚಯಿಸಲು ಸಚಿವರು ಸೂಚಿಸಿದರು. ಸ್ವದೇಶ ದರ್ಶನ ಯೋಜನೆಯಡಿ 15 ಕೋ. ರೂ.ಗಳು ಜಿಲ್ಲೆಯ ಪ್ರವಾಸೋದ್ಯ ಮಕ್ಕೆ ಬಂದಿದ್ದು ಇದರಲ್ಲಿ ಮಲ್ಪೆ, ತ್ರಾಸಿ, ಮರವಂತೆಯಲ್ಲಿ ವಾಟರ್ ನ್ಪೋರ್ಟ್ಸ್, ರೆಸ್ಕೂ ಬೋಟ್ಸ್, ಫ್ಲೋಟಿಂಗ್ ರೆಸ್ಟೋರೆಂಟ್ ಜತೆಗೆ ಮೂಲಸೌಕರ್ಯ ಅಭಿವೃದ್ಧಿಗೆ ಪೂರಕ ವಸ್ತುಗಳ ಖರೀದಿಗೆ ಅವಕಾಶವಿದೆ ಎಂದರು.
ಬೀಚ್‌ನಲ್ಲಿ ಬಂದರು ಇಲಾಖೆಯಿಂದ ನಡೆಯುತ್ತಿರುವ ತಡೆಗೋಡೆ ಕಾಮಗಾರಿಯಿಂದ ಬೀಚ್ ಸೌಂದರ್ಯಕ್ಕೆ ಧಕ್ಕೆ ಬಾರದಂತೆ ನವೀನ ಮಾದರಿ ಬಳಸಲು ಸೂಚಿಸಿದರು. ಬೀಚ್‌ನ ಪಾರ್ಕಿಂಗ್ ಪ್ರದೇಶದಲ್ಲಿ ಎಲ್‌ಇಡಿ ಲೈಟ್ ಅಳವಡಿಸಲು, ಬ್ಯಾರಿಕೇಡ್, ರಂಬ್ಲಿರ್ ಹಾಕಲು ನಿರ್ಧರಿಸಲಾಯಿತು.
ಬೀಚ್‌ನಲ್ಲಿ ವೈಫೈ ಸೌಲಭ್ಯದ ಕುರಿತು ಬಂದ ದೂರುಗಳನ್ನು ಪರಿಶೀಲಿಸಿ ಉತ್ತಮ ಸೇವೆ ಕೊಡುವ ಕಂಪೆನಿಗಳಿಂದ ಕನೆಕ್ಷನ್ ಪಡೆದುಕೊಳ್ಳುವ ಬಗ್ಗೆಯೂ ನಿರ್ಧರಿಸಲಾಯಿತು. ಚರಂಡಿ ನಿರ್ಮಾಣ, ಇಂಟರ್‌ಲಾಕ್ ವ್ಯವಸ್ಥೆ ಬಗ್ಗೆ ನಗರಸಭೆ
ಸದಸ್ಯ ಪ್ರಶಾಂತ ಅಮೀನ್ ಗಮನ ಸೆಳೆದರು. ನಗರಸಭೆ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಪ್ರಶಾಂತ್ ಅಮೀನ್, ವಿಜಯ್ ಕುಂದರ್, ನಾರಾಯಣ ಕುಂದರ್ ಬೀಚ್ ಅಭಿವೃದ್ಧಿ ಬಗ್ಗೆ ಸಲಹೆಗಳನ್ನು ನೀಡಿದರು.
ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಉಪಅರಣ್ಯ ಸಂರಕ್ಷ ಣಾಧಿಕಾರಿ ಅಮರನಾಥ್, ನಗರಸಭೆ ಆಯುಕ್ತ ಮಂಜುನಾಥಯ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜನಾರ್ದನ್, ಪ್ರವಾಸೋದ್ಯಮ ಇಲಾಖೆ ಸ. ನಿರ್ದೇಶಕಿ ಅನಿತಾ ಬಿ.ಆರ್., ನಿರ್ಮಿತಿಯ ಅರುಣ್ ಸಭೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಪಾಳು ಬಿದ್ದ ಸರಕಾರಿ ಕಟ್ಟಡಗಳು; ಲಕ್ಷಾಂತರ ಅನುದಾನ ವ್ಯರ್ಥ
Network Problem: ಇಲ್ಲಿ ಟವರ್ ಇದೆ, ಆದರೆ ನೆಟ್ವರ್ಕ್ ಸಿಗಲ್ಲ!
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.