ಮಲ್ಪೆ ಬೀಚ್ ಸಮುದ್ರ ತೀರಕ್ಕೆ ಬಿತ್ತು ತಡೆಬೇಲಿ
ಪ್ರವಾಸಿಗರು ಇನ್ನು ಎರಡೂವರೆ ತಿಂಗಳು ನೀರಿಗಿಳಿಯುವಂತಿಲ್ಲ
Team Udayavani, Jun 15, 2019, 6:00 AM IST
ಮಲ್ಪೆ: ಆಕರ್ಷಣೀಯ ತಾಣ ಮಲ್ಪೆ ಬೀಚ್. ಈ ಕಾರಣಕ್ಕೆ ಇಲ್ಲಿಗೆ ಮಳೆಗಾಲದಲ್ಲೂ ಹೊರರಾಜ್ಯ, ಹೊರಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಮಳೆಗಾಲದಲ್ಲಿ ತೆರೆಗಳ ಅಬ್ಬರ ಜೋರಾಗಿದ್ದು ಸಮುದ್ರಕ್ಕೆ ಇಳಿಯುವುದು, ನೀರಿನಲ್ಲಿ ಆಟವಾಡುವುದು ಹೆಚ್ಚು ಅಪಾಯಕಾರಿ.
ಎಚ್ಚರಿಕೆಯ ನಡುವೆಯೂ ಪ್ರವಾಸಿಗರು ನೀರಿಗಿಳಿಯಲು ಮುಂದಾಗುತ್ತಾರೆ. ಅವರನ್ನುತಡೆಯಲು ಬೀಚ್ ಸಿಬಂದಿ ಹರಸಾಹಸ ಪಡುವ ಸ್ಥಿತಿ ಇದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಸಿದ್ಧತೆ ನಡೆಸಲಾಗುತ್ತಿದೆ.
ಕೆಂಪು ಬಾವುಟ, ತಡೆಬೇಲಿ
ಬೀಚ್ ಅಭಿವೃದ್ಧಿ ಸಮಿತಿಯ ವತಿಯಿಂದ ಕೆಂಪು ಬಾವುಟ, ಬಲೆಯ ತಡೆಬೇಲಿಯನ್ನು ಕಟ್ಟಿ ಪ್ರವಾಸಿಗರು ನೀರಿಗಿಳಿಯದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ಸಮುದ್ರ ತೀರದಿಂದ ಸುಮಾರು 15 ಅಡಿಗಳಷ್ಟು ದೂರದಲ್ಲಿ ಬೀಚ್‌ನ ಉದ್ದಕ್ಕೂ 7ಅಡಿ ಎತ್ತರದಲ್ಲಿ ನೆಟ್ ಬಳಸಿ ತಡೆಬೇಲಿ ಹಾಕಲಾಗಿದೆ. ಸಮುದ್ರದ ವಾತಾವರಣವನ್ನು ನೋಡಿಕೊಂಡು ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟಂಬರ್ ಪ್ರಥಮ ವಾರ ತಡೆಬೇಲಿತೆರವುಗೊಳಿಸಿ ಹಳದಿ ಬಾವುಟವನ್ನು ಹಾಕಲಾಗುತ್ತದೆ. ಆ ಬಳಿಕ ಸಮುದ್ರಕ್ಕೆ ಇಳಿಯಬಹುದಾಗಿದೆ.
ಹೆಚ್ಚುವರಿ ಸಿಬಂದಿ ಪ್ರಸ್ತುತ ಮಲ್ಪೆ ಬೀಚ್‌ನಲ್ಲಿ 6 ಮಂದಿ ಜೀವರಕ್ಷಕರು, 3 ಮಂದಿ ಹೋಮ್‌ಗಾರ್ಡ್ ಇದ್ದು ಮಳೆಗಾಲದಲ್ಲಿ 8 ಮಂದಿ ಜೀವರಕ್ಷಕರು, 6 ಮಂದಿ ಹೋಮ್ ಗಾರ್ಡ್‌ಗಳು ಕಾರ್ಯಚರಿಸಲಿದ್ದಾರೆ. ರಕ್ಷಣೆ ಪರಿಕರಗಳನ್ನು ಹೆಚ್ಚಿಸಲಾಗಿದೆ. ಮಳೆಗಾಲ ಸಮುದ್ರಕ್ಕೆ ಇಳಿಯದಂತೆ ಪ್ರವಾಸಿಗರಿಗೆ ಪದೇ ಪದೇ ಸೂಚನೆ ನೀಡಲಾಗುತ್ತಿದೆ. ಸೂಚನೆಯನ್ನು ಮೀರಿ ನೀರಿಗಿಳಿದು ಪ್ರವಾಸಿಗರು ಅಪಾಯಕ್ಕೆ ಸಿಲುಕುತ್ತಾರೆ ಎನ್ನುತ್ತಾರೆ ಇಲ್ಲಿನ ಜೀವರಕ್ಷಕ ತಂಡದವರು.
ಪ್ರವಾಸಿಗರ ಸಹಕಾರ ಬೇಕು
ಮಳೆಗಾಲ ಬಳಿಕ ಸಮುದ್ರ ಸಹಜ ಸ್ಥಿತಿಗೆ ಬರುವವರೆಗೆ ಪ್ರವಾಸಿಗರು ಸಮುದ್ರ ತೀರದತ್ತ ತೆರಳಲು ಅವಕಾಶ ಇದ್ದರೂ ನೀರಿಗಿಳಿಯುವಂತಿಲ್ಲ. ಯಾವುದೇ ಅಫಘಾತಗಳು ಸಂಭವಿಸದಂತೆ ಎಚ್ಚರಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರವಾಸಿಗರು ನಮ್ಮೊಂದಿಗೆ ಕೈ ಜೋಡಿಸಬೇಕಾಗಿದೆ.
–ಸುದೇಶ್ ಶೆಟ್ಟಿ,
ಬೀಚ್ ನಿರ್ವಾಹಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.