Malpe Beach: ಪ್ರವಾಸಿಗನಿಂದ ಗೃಹರಕ್ಷಕ ಸಿಬಂದಿಗೆ ಹಲ್ಲೆ
Team Udayavani, Dec 9, 2024, 10:34 PM IST
ಮಲ್ಪೆ: ಆಳಸಮುದ್ರದಲ್ಲಿ ಈಜಾಡಬಾರದಾಗಿ ಎಚ್ಚರಿಕೆ ನೀಡಿದ್ದಕ್ಕೆ ಗೃಹರಕ್ಷಕ ಸಿಬಂದಿ ಅಕ್ಷಯ ಕುಮಾರ್ ಮೇಲೆ ಪ್ರವಾಸಿಗನೋರ್ವ ಹಲ್ಲೆ ನಡೆಸಿದ ಘಟನೆ ಸೋಮವಾರ ಮಲ್ಪೆ ಬೀಚ್ ನಡೆದಿದೆ.
ಸೋಮವಾರ ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ 4-5 ಜನರ ತಂಡ ಸಮುದ್ರದ ನೀರಿನಲ್ಲಿ ಅಪಾಯಕಾರಿಯಾಗಿ ಆಡುತ್ತಿತ್ತು. ಭದ್ರತೆ ದೃಷ್ಟಿಯಿಂದ ಅವರನ್ನು ಮೇಲೆ ಬರಲು ತಿಳಿಸಿದಾಗ ನೀರಿನಲ್ಲಿದ್ದ ಸಾಗರ್ ಎಂಬಾತನು ಅಕ್ಷಯ್ ಕುಮಾರ್‌ಗೆ ಬೈದು ಮತ್ತೆ ನೀರಿಗೆ ಇಳಿದಿದ್ದ. ನೀವು ಮತ್ತೆ ನೀರಿಗೆ ಹೋದರೆ ಪೊಲೀಸ್ ನಿರೀಕ್ಷಕರಿಗೆ ತಿಳಿಸುವುದಾಗಿ ಹೇಳಿದಾಗ, ಆ ವ್ಯಕ್ತಿ ಸಿಟ್ಟಿನಿಂದ ಅಕ್ಷಯ್ ಕುಮಾರನನ್ನು ಮರಳಿನಲ್ಲಿ ಉರುಳಾಡಿಸಿ ಹಲ್ಲೆ ನಡೆಸಿದ್ದಾನೆ. ತತ್‌ಕ್ಷಣ ಅಲ್ಲಿದ್ದ ಸಾರ್ವಜನಿಕರು ಮತ್ತು ಇತರ ಗೃಹರಕ್ಷಕ ಸಿಬಂದಿ ಆಗಮಿಸಿ ಅಕ್ಷಯ್‌ನನ್ನು ರಕ್ಷಿಸಿದ್ದಾರೆ. ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಲ್ಪೆ ಬೀಚ್: ಮರಳಿನಲ್ಲಿ ಬೈಕ್ ಓಡಿಸಿ ಸಾರ್ವಜನಿಕರಿಗೆ ತೊಂದರೆ
ಮಲ್ಪೆ: ಇಲ್ಲಿನ ಪಡುಕರೆ ಬೀಚ್‌ನಲ್ಲಿ ಜನರಿಗೆ ತೊಂದರೆಯಾಗುತ್ತಿರುವ ರೀತಿಯಲ್ಲಿ ಮರಳಿನಲ್ಲಿ ಅತ್ತಿಂದಿತ್ತ ಬೈಕ್ ಓಡಿಸಿದ್ದ ಆರೋಪದಲ್ಲಿ ಎಸ್. ಎಂ. ಶಫಿ (50) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೀಚ್‌ನಲ್ಲಿ ಜನರು ಓಡಾಡುವ ಮರಳಿನ ಜಾಗದಲ್ಲಿ ಡಿ. 8ರಂದು ಈತ ನಂಬರ್‌ಪ್ಲೇಟ್ ಇಲ್ಲದ ಬೈಕನ್ನು ಓಡಿಸಿ ತೊಂದರೆ ಉಂಟು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.