ಮಲ್ಪೆ ಬೀಚ್‌ನಲ್ಲಿ ಜನಜಂಗುಳಿ
Team Udayavani, Oct 20, 2018, 12:48 PM IST
ಮಲ್ಪೆ : ಮಕ್ಕಳಿಗೆ ದಸರಾ ರಜೆ, ಈ ಮಧ್ಯೆ ಸರಕಾರಿ, ಕಚೇರಿಗಳಿಗೂ ರಜೆ. ಒತ್ತಡದ ಜೀವನ ಮರೆತು ವಿಹರಿಸಲು ನಗರದ ಮಂದಿ ಹಾತೊರೆಯುತ್ತಿರುವುದರಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬೀಚ್‌ಗಳಿಗೆ ಪ್ರವಾಸಿಗರ ದಂಡು ಹರಿದು ಬಂದಿದೆ.
ಮಲ್ಪೆ ಬೀಚ್‌ಗೆ ನಾಲ್ಕು ದಿನಗಳಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಶುಕ್ರವಾರ ವಿಜಯ ದಶಮಿಯಂದು ಬೆಳಗ್ಗಿನಿಂದಲೇ ಪ್ರವಾಸಿಗರು ಲಗ್ಗೆ ಇಡುತ್ತಿದ್ದು, ನೂರಾರು ವಾಹನಗಳು ಆಗಮಿಸುತ್ತಿವೆ. ಬೆಳಗ್ಗಿನಿಂದಲೇ ಜನದಟ್ಟಣೆ ಕಂಡು ಬರುತ್ತಿದ್ದು, ವಾಹನ ನಿಲುಗಡೆಗೆ ಜಾಗದ ಸಮಸ್ಯೆ ಉಂಟಾಗಿದೆ.
ಆದರೆ ಚಂಡಮಾರುತ ಭೀತಿಯಿಂದಲೋ ಏನೋ; ಸೈಂಟ್ ಮೇರಿಸ್ ದ್ವೀಪದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು. ಕೇರಳ, ಕೊಡಗುಗಳಲ್ಲಿ ಮಳೆ ಹಾನಿ ಇಲ್ಲದಿದ್ದಲ್ಲಿ ಇನ್ನಷ್ಟು ಪ್ರವಾಸಿಗರು ಬರುತ್ತಿದ್ದರು ಎನ್ನಲಾಗಿದೆ.
ಟ್ರಾಫಿಕ್ ಜಾಮ್
ಪ್ರವಾಸಿಗರು ಹೆಚ್ಚಾದಂತೆ ವಾಹನಗಳ ಸಂಖ್ಯೆಯೂ ಹೆಚ್ಚಾಗಿತ್ತು. ಪ್ರವಾಸಿ ಮತ್ತು ಸ್ಥಳೀಯ ವಾಹನಗಳ ದಟ್ಟಣೆಯಿಂದಾಗಿ ಮಲ್ಪೆಯ ಮುಖ್ಯ ರಸ್ತೆಯಲ್ಲಿ ಮೂರು ದಿನಗಳಿಂದ ಸಂಜೆ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು. ಶುಕ್ರವಾರ ಸಂಜೆ ಸಮಸ್ಯೆ ತೀವ್ರವಾಗಿತ್ತು. ಬೀಚ್‌ನ ಪಾರ್ಕಿಂಗ್ ಏರಿಯಾ ಭರ್ತಿಯಾಗಿ, ಕಡಲತೀರ ಇಂಟರ್‌ಲಾಕ್ ರಸ್ತೆಯಲ್ಲಿ ಬಾಲಕರ ರಾಮ ಭಜನಾ ಮಂದಿರದ ವರೆಗೆ ವಾಹನಗಳ ಸಾಲು ಕಂಡು ಬಂದಿದೆ. ದಕ್ಷಿಣ ಕನ್ನಡದ ಉಳ್ಳಾಲ, ಸೋಮೇಶ್ವರ, ಪಣಂಬೂರು, ಚಿತ್ರಾಪುರ, ಉಡುಪಿಯ ಕಾಪು, ಮರವಂತೆ ತ್ರಾಸಿ ಬೀಚ್‌ಗಳಲ್ಲಿಯೂ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.