ತಿಂಗಳು ಕಳೆದರೂ ಏಳು ಮೀನುಗಾರರ ಸುಳಿವಿಲ್ಲ !


Team Udayavani, Jan 14, 2019, 4:20 AM IST

swarna.jpg

ಮಲ್ಪೆ: ಉಡುಪಿ ಜಿಲ್ಲೆಯ ಇಬ್ಬರು, ಉತ್ತರ ಕನ್ನಡದ ಐವರು ಮೀನುಗಾರರು ಬೋಟ್‌ ಸಹಿತ ಕಣ್ಮರೆಯಾಗಿ 30 ದಿನ ಕಳೆದರೂ ಯಾವುದೇ ಸುಳಿವು ಸಿಗದಿರುವುದು ಪಶ್ಚಿಮ ಕರಾವಳಿ ಮೀನುಗಾರಿಕೆಯ ಇತಿಹಾಸದಲ್ಲಿಯೇ ಕರಾಳ ಘಟನೆ ಎನ್ನಲಾಗುತ್ತಿದೆ.

ನೌಕಾಸೇನೆ, ಕರಾವಳಿ ರಕ್ಷಣಾ ಪಡೆ, ಹೆಲಿಕಾಪ್ಟರ್‌, ಸುಸಜ್ಜಿತ ಬೋಟ್‌ಗಳನ್ನು ಬಳಸಿ ಎಷ್ಟೇ ಹುಡುಕಾಡಿದರೂ ಪ್ರಯೋಜನ ವಾಗಿಲ್ಲ. ಡಿ. 13ರಂದು ರಾತ್ರಿ ಮೀನುಗಾರಿಕೆಗೆ ತೆರಳಿ ಎರಡೇ ದಿನಗಳಲ್ಲಿ ಹೊರಜಗತ್ತಿನ ಸಂಪರ್ಕ ಕಳೆದುಕೊಂಡಿದ್ದರು.

ಸೇನೆ ಬರಲಿ
ಸಿಂಧುದುರ್ಗ ಜಿಲ್ಲೆಯ ದೇವಗಢ, ಮಾಲ್ವಣ್‌ ಬಳಿ ಬೋಟ್‌ ಮತ್ತು ಮೀನುಗಾರ ರನ್ನು ಬಚ್ಚಿಟ್ಟಿರುವ ಸಾಧ್ಯತೆ ಹೆಚ್ಚು ಎಂಬುದು ಬಹುತೇಕ ಮೀನುಗಾರರ ಅಭಿಪ್ರಾಯ. ಗುಡ್ಡಗಾಡುಗಳಿಂದ ಸುತ್ತುವರಿದ ಈ ಭಾಗ ದುರ್ಗಮ ಪ್ರದೇಶವಾಗಿದ್ದು, ಜನಸಾಮಾನ್ಯರು ತೆರಳಲು ಆಸಾಧ್ಯ. ಕೇಂದ್ರ ಸರಕಾರ ಸೇನೆಯನ್ನು ಕಳುಹಿಸಿ ತ್ವರಿತವಾಗಿ ಕಾರ್ಯಾಚರಣೆ ನಡೆಸಬೇಕು ಎಂದು ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌ ಆಗ್ರಹಿಸಿದ್ದಾರೆ.

ಉಗ್ರ ಹೋರಾಟ
ರಾಜ್ಯದ ಗೃಹ ಸಚಿವರು ಮೀನುಗಾರರ ಬಾಯಿ ಮುಚ್ಚಿಸಲು ಸಭೆ ನಡೆಸಿದ್ದಾರೆ ವಿನಾ ಶೋಧ ಕಾರ್ಯದಲ್ಲಿ ಅದು ಯಾವುದೇ ಪರಿಣಾಮ ಬೀರಿಲ್ಲ. ಆವರ ಹೇಳಿಕೆಯಂತೆ ಮೂರು ರಾಜ್ಯಗಳ ಗೃಹ ಕಾರ್ಯದರ್ಶಿಗಳ ಸಭೆಯೂ ಆಗಿಲ್ಲ ಎಂದು ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಎ. ಸುವರ್ಣ ಆರೋಪಿಸಿದ್ದಾರೆ. ಪತ್ತೆ ಕಾರ್ಯದಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಇಸ್ರೋ ಅಧ್ಯಕ್ಷರೇ ಹೇಳಿರುವಂತೆ ಈ ವರೆಗೆ ಅವರನ್ನು ಯಾರೂ ಸಂಪರ್ಕಿಸಿಲ್ಲ. ಮೀನುಗಾರರ ಬದುಕಿನಲ್ಲಿ ಸರಕಾರದ ಚೆಲ್ಲಾಟ ಮುಂದುವರಿದಿದೆ. ರಾಜ್ಯ ಸರಕಾರ ತತ್‌ಕ್ಷಣ ಕೇಂದ್ರದ ನೆರವು ಪಡೆದು ಪತ್ತೆ ಹಚ್ಚಬೇಕು, ಇಲ್ಲವೇ ರಾಜ್ಯದ ಮೀನುಗಾರಿಕೆ ಮತ್ತು ಗೃಹಸಚಿವರಿಬ್ಬರೂ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು. ಮುಂದಿನ ದಿನಗಳಲ್ಲಿ ಮೀನುಗಾರರು ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಯಶ್‌ಪಾಲ್‌ ಎಚ್ಚರಿಸಿದ್ದಾರೆ.

ಬೊಬ್ಬರ್ಯ ನೇಮದಲ್ಲೂ ಅದೇ ಅಭಯ
ಕಲ್ಮಾಡಿ ಬೊಬ್ಬರ್ಯ ಪಾದೆಯಲ್ಲಿ ಶನಿವಾರ ರಾತ್ರಿ ನಡೆದ ಗಡುವಾಡು ಇಳಿಯುವ ಬೊಬ್ಬರ್ಯನ ಸಿರಿಸಿಂಗಾರದ ನೇಮದಲ್ಲೂ ಬೊಬ್ಬರ್ಯನಿಂದ ಮೀನುಗಾರರು ಗೌಪ್ಯ ಸ್ಥಳದಲ್ಲಿ ಇದ್ದಾರೆ. ನಿಮ್ಮ ಪ್ರಯತ್ನದ ಹಿಂದೆ ನಾನಿದ್ದು ಬರಮಾಡಿಕೊಳ್ಳುತ್ತೇನೆ ಎಂಬ ಅಭಯ ಲಭಿಸಿದೆ ಎನ್ನಲಾಗಿದೆ.

ಮನೆಗಳಲ್ಲಿ  ಕಣ್ಣೀರೇ ಮಾತು… 
ಮಲ್ಪೆ: ಮಾತು ಹೊರಡದೆ ದುಃಖ ಉಮ್ಮಳಿಸಿ ಕೆನ್ನೆ ಸವರುವ ಅಶ್ರುಧಾರೆ. ಸಾಂತ್ವನ ಹೇಳುವ ಮನಸ್ಸುಗಳು, ಕಣ್ಣೀರು ಒರೆಸುವ ಕೈಗಳಿಗೆ ವಿರಾಮವೇ ಇಲ್ಲ. ಮನಸ್ಸು ಭಾರ, ಮೌನ. ಏನಾಗುವುದೋ ಎಂಬ ದುಗುಡ ದುಮ್ಮಾನ, ನೀರವ ಮೌನ. ಇದು ನಾಪತ್ತೆಯಾಗಿರುವ ಮೀನುಗಾರರಾದ ಬಡಾನಿಡಿಯೂರು ಪಾವಂಜಿಗುಡ್ಡೆಯ ಚಂದ್ರಶೇಖರ ಕೋಟ್ಯಾನ್‌ ಮತ್ತು ದಾಮೋದರ ಸಾಲ್ಯಾನ್‌ ಅವರ ಮನೆಯ ವಾತಾವರಣ. ಪ್ರತೀ ಕ್ಷಣ ತಮ್ಮವರ ಇರುವಿಕೆ ಬಗ್ಗೆ ಸುಳಿವು, ಶುಭಸುದ್ದಿ ಕೇಳಿಬಂದೀತು ಎಂಬ ಆಶಾವಾದವೊಂದೇ ಭರವಸೆಯ ಎಳೆಯಾಗಿ ಬದುಕನ್ನು ಹಿಡಿದಿರಿಸಿದೆ.

ನನ್ನವರು ಸಿಕ್ಕಿದರೇ?
ನಾಪತ್ತೆ ಬಗ್ಗೆ ಡಿ. 21ರ ರಾತ್ರಿಯೇ ಮಾಹಿತಿ ಬಂದಿದ್ದರೂ ಚಂದ್ರಶೇಖರ್‌ ಪತ್ನಿಗೆ ವಿಷಯ ತಿಳಿದದ್ದು ಡಿ. 24ರಂದು. ಅದೂ ಬೋಟನ್ನು ಹಿಡಿದಿರಿಸಿದ್ದಾರೆ ಎಂದಷ್ಟೇ. ಡಿ. 25ರ ಬೆಳಗ್ಗೆ ಪತ್ರಿಕೆಯಲ್ಲಿ ನಾಪತ್ತೆ ಸುದ್ದಿಯನ್ನು ಓದಿ ತಿಳಿದ ಶ್ಯಾಮಲಾ ಆಘಾತಗೊಂಡರು. ಗಂಡನ ಧ್ವನಿ ಕೇಳದೆ ತಿಂಗಳಾಗಿದೆ. ಆಕೆ ಮನೆಯಿಂದ ಹೊರಗೆ ಬರುತ್ತಿಲ್ಲ. ಸಂತೈಸುವ ಸಂಬಂಧಿಕರು, ಆಪ್ತರಲ್ಲಿ ನನ್ನವರು ಸಿಕ್ಕಿದರೇ, ಆದಷ್ಟು ಬೇಗ ಹುಡುಕಿಕೊಡಿ ಎಂದು ಮುಖ ಮುಚ್ಚಿ ಅಳುತ್ತಾರೆ ಆಕೆ.

ಮೌನಕ್ಕೆ ಶರಣು
ದಾಮೋದರ ಸಾಲ್ಯಾನ್‌ ಪತ್ನಿ ಮೋಹಿನಿ ಅವರಿಗೆ ವಿಷಯ ತಿಳಿದದ್ದು ಶ್ಯಾಮಲಾರಿಗಿಂತಲೂ ನಾಲ್ಕು ದಿನ ತಡವಾಗಿ. ನಾಪತ್ತೆ ವಿಚಾರ ಗೊತ್ತಾದಲ್ಲಿಂದ ಆಕೆ ಆಘಾತದಿಂದ ಮಾತೇ ಆಡುತ್ತಿಲ್ಲ. ಮೊದಲ ಕೆಲವು ದಿನ ಊಟ, ನಿದ್ದೆ ಮಾಡದೆ ಕಾಲ ಕಳೆಯುತ್ತಿದ್ದರು. ದಾಮೋದರ ಅವರ ತಾಯಿ ಸೀತಾ ಸಾಲ್ಯಾನ್‌ ಕೊರಗಿನಲ್ಲಿ ಹಾಸಿಗೆ ಹಿಡಿದಿದ್ದಾರೆ. ಅನಾರೋಗ್ಯದಿಂದಿರುವ ತಂದೆ ಸುವರ್ಣ ತಿಂಗಳಾಯ ಈಗ ಇನ್ನಷ್ಟು ಹೈರಾಣಾಗಿದ್ದಾರೆ. ಮನೆಯಲ್ಲಿ ಟಿವಿ ಹಚ್ಚುತ್ತಿಲ್ಲ, ಪತ್ರಿಕೆಗಳನ್ನು ಓದಲು ಕೊಡುತ್ತಿಲ್ಲ. ಬೊಬ್ಬರ್ಯ ದೈವದ ಅಭಯವೊಂದೇ ಕುಟುಂಬಕ್ಕೆ ಶ್ರೀರಕ್ಷೆಯಾಗಿದೆ.

ದೈವ ದೇವರಿಗೆ ಮೊರೆ
ಕುಟುಂಬದವರು ಮಾತ್ರವಲ್ಲ, ಗ್ರಾಮಸ್ಥರೆ ಲ್ಲರೂ ದೈವ ದೇವರಿಗೆ ಮೊರೆ ಹೋಗಿದ್ದಾರೆ. ಎಲ್ಲ ದೇವಸ್ಥಾನಗಳಲ್ಲೂ ಸಾಮೂಹಿಕ ಪ್ರಾರ್ಥನೆ ನಡೆದಿದೆ. ಅಂಜನ, ಆರೂಢ ಪ್ರಶ್ನೆಗಳನ್ನು ಇರಿಸಿ ಚಿಂತನೆ ನಡೆಸಿದ್ದಾರೆ. ಎಲ್ಲೆಡೆಯ ಉತ್ತರ ಒಂದೇ – “ಜೀವಂತವಾಗಿದ್ದಾರೆ, ಬಂಧನದಲ್ಲಿ ಇದ್ದಾರೆ’.

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

7

Malpe: ಫಿಶರೀಸ್‌ ಕಾಲೇಜು ಆವರಣ ಕೊಳಚೆ ಮುಕ್ತಿ

6

Kaup ತಾಲೂಕಿನಲ್ಲಿ ತಹಶೀಲ್ದಾರ್‌ ನೇತೃತ್ವದಲ್ಲಿ ಬೆಳೆ ಕಟಾವು

ಮಣಿಪಾಲ ಎನರ್ಜಿ ಪ್ರೈ.ಲಿ. ಮತ್ತು ಲಯನ್ಸ್ ಸಹಯೋಗ: ರಜತ ಸಂಭ್ರಮ ಸಭಾಂಗಣ ಉದ್ಘಾಟನೆ

ಮಣಿಪಾಲ ಎನರ್ಜಿ ಪ್ರೈ.ಲಿ. ಮತ್ತು ಲಯನ್ಸ್ ಸಹಯೋಗ: ರಜತ ಸಂಭ್ರಮ ಸಭಾಂಗಣ ಉದ್ಘಾಟನೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.