Malpe ಬೊಂಡಾಸ್ ಯಥೇಚ್ಛ; ದರ ಮಾತ್ರ ಕನಿಷ್ಠ
ಯಾಂತ್ರಿಕ ಮೀನುಗಾರಿಕೆ ಋತು ಆರಂಭದಲ್ಲೇ ಹೊಡೆತ
Team Udayavani, Aug 19, 2023, 6:45 AM IST
ಮಲ್ಪೆ: ಯಾಂತ್ರಿಕ ಮೀನುಗಾರಿಕೆ ಆರಂಭದ ದಿನದಲ್ಲೇ ಆಳಸಮುದ್ರ ಬೋಟುಗಳಿಗೆ ಹೇರಳ ಪ್ರಮಾಣದಲ್ಲಿ ಬೊಂಡಾಸ್ ಮೀನು ದೊರೆತಿದ್ದು ವಿದೇಶದಲ್ಲಿ ಬೇಡಿಕೆ ದೊರೆಯದ ಕಾರಣ ಸಮರ್ಪಕವಾದ ದರ ಸಿಗದೆ ಬೋಟು ಮಾಲಕರು ನಷ್ಟವನ್ನು ಅನುಭವಿಸುವಂತಾಗಿದೆ.
ಒಂದು ವಾರದಿಂದ ಬಹುತೇಕ ಎಲ್ಲ ಆಳಸಮುದ್ರ ಬೋಟುಗಳಿಗೆ ಬೊಂಡಾಸ್ ಬಿಟ್ಟರೆ ಇತರ ಯಾವುದೇ ಮೀನು ಸಿಕ್ಕಿಲ್ಲ.
ವಿದೇಶದಲ್ಲಿ ಬೇಡಿಕೆ ಕುಸಿತ
ಬೊಂಡಾಸ್ ಹೆಚ್ಚಾಗಿ ಯೂರೋಪ್ ದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಆಗುತ್ತಿತ್ತು. ಉಳಿದಂತೆ ಜಪಾನ್ ಮತ್ತು ಕೊರಿಯಾ ದೇಶದಲ್ಲೂ ಸಾಮಾನ್ಯ ಬೇಡಿಕೆ ಇತ್ತು. ಈಗ ಯುರೋಪ್‌ನಲ್ಲಿ ಅರ್ಥಿಕ ಹಿಂಜರಿತ ಕಂಡು ಬಂದಿದ್ದರಿಂದ ಈ ಮೀನಿಗೆ ಬೇಡಿಕೆ ಇಲ್ಲವಾಗಿದೆ.
ಆರಂಭದಲ್ಲೇ ಹೊಡೆತ
ಸಾಮಾನ್ಯವಾಗಿ ಈ ಅವಧಿಯಲ್ಲಿ ಬಂಗುಡೆ, ಅಂಜಲ್, ರಾಣಿಮೀನು, ಪಾಂಪ್ರಟ್ ದೊರೆಯುತ್ತಿ ದ್ದವು. ಈಗ ಯಥೇತ್ಛವಾಗಿ ಒಂದೇ ಜಾತಿಯ ಮೀನು ಮಾತ್ರ ಸಿಗುತ್ತಿರುವುದು ನಿರಾಶೆ ಮೂಡಿಸಿದೆ.
ಕಾರ್ಮಿಕರ ಕೊರತೆ
ಬೊಂಡಾಸ್ ಮೀನನ್ನು ಮೂರು -ನಾಲ್ಕು ದರ್ಜೆಯದಾಗಿ ವರ್ಗೀಕರಿಸಲಾಗುತ್ತದೆ. ಈ ಹಿಂದೆ 400-500 ರೂ. ಇದ್ದ ಫಸ್ಟ್ ಗ್ರೇಡ್ ಬೊಂಡಾಸ್ ಮೀನು 80-90 ರೂ. ಕುಸಿತ ಕಂಡಿದೆ. ಅದೇ ರೀತಿ ಸೆಕೆಂಡ್ 50 ರೂ, ಥರ್ಡ್ 15 ರೂ.ಗೆ ಕುಸಿತವಾಗಿದೆ. ಗ್ರೇಡಿಂಗ್ ಮಾಡಲು ಕಾರ್ಮಿಕರ ಕೊರತೆ ಇದೆ.
ಶೀತಲಿಕರಣ ಘಟಕ ಅಗತ್ಯ
ಮೀನು ಹೇರಳವಾಗಿ ಸಿಕ್ಕಾಗ ಅದನ್ನು ದಾಸ್ತಾನು ಇಡಲು ರಾಜ್ಯದ ಯಾವ ಬಂದರಿನಲ್ಲೂ ಸರಕಾರದ ನೆಲೆಯಲ್ಲಿ ಶೀತಲಿಕರಣ ಘಟಕ ಇಲ್ಲ. ಇಂತಹ ಸಂದರ್ಭ ಸರಕಾರ ಮಧ್ಯೆ ಪ್ರವೇಶಿಸಿ ಎಲ್ಲ ಬಂದರುಗಳಲ್ಲಿ ಮೀನುಗಳು ಕೆಡದಂತೆ ಶೀತಲಿಕರಣ ಘಟಕವನ್ನು ಸ್ಥಾಪಿಸಬೇಕು, ಮೀನಿಗೆ ಬೆಂಬಲ ಬೆಲೆ ನೀಡುವ ಮೂಲಕ ಮೀನುಗಾರರ ಹಿತ ಕಾಪಾಡಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.