ಸಾಧನೆಯ ಹಾದಿಯಲ್ಲಿ ಮಲ್ಪೆ ಮೀನುಗಾರರ ಸಂಘ


Team Udayavani, Jul 2, 2017, 3:45 AM IST

malpe.jpg

ಮಲ್ಪೆ: ಮೂರುವರೆ ದಶಕಗಳಿಂದ ಮೀನುಗಾರರ ಯಶೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮಲ್ಪೆ ಮೀನುಗಾರರ ಸಂಘವು ಇದೀಗ ತನ್ನ 34ನೇ ವರ್ಷದ ವಾರ್ಷಿಕ ಮಹಾಸಭೆಗೆ ಸಜ್ಜಾಗಿದೆ. ಸಂಘದ ಸಭೆಯು ಜು. 2 ರಂದು 9.30ಕ್ಕೆ ಸಮುದಾಯ ಭವನದಲ್ಲಿ ನಡೆಯಲಿದೆ.

ಪ್ರಸುತ್ತ ಸಾಲಿನಲ್ಲಿ ಸಂಘವು ಒಟ್ಟು 17 ಬಾರಿ ಆಡಳಿತ ಮಂಡಳಿ ಮತ್ತು ಮಲ್ಪೆ ಮೀನುಗಾರಿಕಾ ಬಂದರಿನ ಇನ್ನಿತರ ಸಂಘ- ಸಂಸ್ಥೆಗಳ ಸಹಭಾಗಿತ್ವದಲ್ಲಿ ಜಂಟಿ ಸಭೆ ನಡೆಸಿ ಮೀನುಗಾರರ, ಮೀನುಗಾರಿಕೆಯ, ಮೀನುಗಾರಿಕಾ ಬಂದರಿನ ಅಭಿವೃದ್ಧಿಯ ಸಾಕಷ್ಟು  ಚರ್ಚೆ ಮಾಡಲಾಗಿತ್ತು.

ಜನಪ್ರತಿನಿಧಿಗಳ  ಭೇಟಿ:
ಬಂದರಿನಲ್ಲಿ ಬೋಟ್‌ಗಳು ತಂಗಲು ಸ್ಥಳಾವಕಾಶದ ಕೊರತೆ ನೀಗಿಸಲು 4ನೇ ಹಂತಕ್ಕೆ ವಿಸ್ತರಣೆ, 3ನೇ ಹಂತದಲ್ಲಿ ನಿರ್ಮಾಣಗೊಂಡ ಸ್ಲಿಪ್‌ವೇ ನಿರ್ವಹಣೆಯನ್ನು  ಮೀನುಗಾರಿಕಾ ದೋಣಿಗಳಿಗೆ ಅತೀ ಕಡಿಮೆ ದರ ಮತ್ತು ಹೆಚ್ಚಿನ ಸೌಲಭ್ಯ ಸಿಗುವಂತಾಗಲು ಮೀನುಗಾರ ಸಂಘಕ್ಕೆ 10 ವರ್ಷಗಳ ಅವಧಿಗೆ ನೀಡುವುದು,  ಬಂದರಿನ 1 ಮತ್ತು 2ನೇ ಹಂತದ ಬೇಸಿನ್‌ನಲ್ಲಿ  ಡ್ರಜ್ಜಿಂಗ್‌ ನಡೆಸುವುದು, ಕೃಷಿಗೆ ಸಿಗುವ ಸವಲತ್ತುಗಳನ್ನು ಮೀನುಗಾರಿಕೆಗೂ ನೀಡುವುದು ಮೊದಲಾದ ಹಲವಾರು ಬೇಡಿಕೆಗಳನ್ನು ಮೀನುಗಾರಿಕಾ ಸಂಘದ ನೇತೃತ್ವದಲ್ಲಿ ಬಂದರಿನ ವಿವಿಧ ಸಂಘಟನೆಗಳ ಮೂಲಕ ಸಚಿವ ಪ್ರಮೋದ್‌ ಮಧ್ವರಾಜ್‌ ಸೇರಿದಂತೆ ಮುಖ್ಯಮಂತ್ರಿಗಳು, ಸಂಸದರು ಹಾಗೂ ವಿವಿಧ ಅಧಿಕಾರಿಗಳನ್ನು ಭೇಟಿಯಾಗಿ ಒತ್ತಾಯಿಸಲಾಗಿದೆ.  ಮೀನುಗಾರ ಸಂಘದ ಬಹುದಿನದ ಬೇಡಿಕೆಯಾದ ಮಲ್ಪೆಯಲ್ಲಿ ನೂತನ ಮೀನುಗಾರಿಕಾ ಉಪನಿರ್ದೇಶಕರ ಕಚೇರಿ  ಕನಸು ನನಸಾಗಿದೆ. 

ಪಡುಕರೆಯಲ್ಲಿ ಬೋಟ್‌ಗಳ ತಂಗುದಾಣಕ್ಕೆ ಜಟ್ಟಿ ನಿರ್ಮಾಣಕ್ಕೆ ಸಚಿವ ಪ್ರಮೋದ್‌ ಮಧ್ವರಾಜ್‌ ಅವರಿಗೆ ಸಲ್ಲಿಸಿದ ಮನವಿಗೆ 500 ಮೀ. ಪ್ರಸ್ತಾವನೆಯಲ್ಲಿ 250 ಮೀ. ಈಗಾಗಲೇ ನಬಾರ್ಡ್‌ ಯೋಜನೆಯಲ್ಲಿ ಮಂಜೂರಾತಿಯಾಗಿದೆ.

ಮೀನುಗಾರರ ಮಕ್ಕಳ ಶಿಕ್ಷಣಕ್ಕೆ ಆದ್ಯತೆ
ಸಂಘವು ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾವಂತ  ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡುತ್ತ ಬಂದಿದೆ. ಮೀನುಗಾರಿಕೆಗೆ ತೆರಳಿದ್ದಾಗ ನಡೆದ ಅವಘಡದಲ್ಲಿ ಮೃತರಾದ ಕುಟಂಬಕ್ಕೆ ದುರಂತ ಪರಿಹಾರ ನಿಧಿ ನೀಡುತ್ತಿದೆ.

ಧಾರ್ಮಿಕ  ಕಾರ್ಯಕ್ಕೆ  ನೆರವು
ಉಡುಪಿ ಶ್ರೀ ಕೃಷ್ಣ ಮುಖ್ಯ ಪ್ರಾಣದೇವರಿಗೆ ಬ್ರಹ್ಮರಥೋತ್ಸವ ಸೇವೆ ಸಮರ್ಪಣೆ, ಮೀನುಗಾರರ ಕುಲದೇವರಾದ ಬೆಣ್ಣೆಕುದ್ರು ಶ್ರೀ ಕುಲಮಾಸ್ತಿಯಮ್ಮನವರ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ರಥೋತ್ಸವದ ಅನ್ನಸಂತರ್ಪಣೆಗೆ ದೇಣಿಗೆಯನ್ನು ನೀಡಲಾಗುತ್ತಿದೆ. ಮೀನುಗಾರರ ಶ್ರೇಯೋಭಿವೃದ್ದಿಗಾಗಿ ಋತು ಆರಂಭದಲ್ಲಿ ಬಂದರಿನಲ್ಲಿ ಸಂಜೀವಿನಿ ಮೃತ್ಯುಂಜಯ ಹೋಮ ಮತ್ತು ಗಣಪತಿಹೋಮವನ್ನು ನಡೆಸಲಾಗುತ್ತಿದೆ.

ಸಂಘವು ಕಳೆದ ಹಲವಾರು ವರ್ಷಗಳಿಂದ ಮೀನುಗಾರಿಕೆ ಮತ್ತು ಮೀನುಗಾರರ ಸಮಸ್ಯೆಗಳನ್ನು ಸರಕಾರ ಮತ್ತು ಅಧಿಕಾರಿಗಳ ಗಮನಕ್ಕೆ ತರುವಲ್ಲಿ ಬಂದರಿನ ಇತರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಒಂದೇ ಮನಸ್ಸಿನಿಂದ ಒಗ್ಗಟ್ಟಾಗಿ ಬಲವಾದ ಸಂಘಟನೆಯ ಮುಖೇನ  ಹೋರಾಡಿದ್ದರಿಂದ ಇಂದು ಹಲವಾರು ಬೇಡಿಕೆಗಳು ಈಡೇರಲು ಸಹಕಾರಿಯಾಗಿವೆ. ಮಲ್ಪೆ ಮೀನುಗಾರ ಸಂಘದ ಈ ಒಂದು ಹೋರಾಟದಿಂದಾಗಿ ರಾಜ್ಯದ ಎಲ್ಲ ಬಂದರುಗಳ ಮೀನುಗಾರರಿಗೂ ಅನುಕೂಲವಾಗಿದೆ ಎಂದು ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಹಿರಿಯಣ್ಣ ಟಿ. ಕಿದಿಯೂರು ತಿಳಿಸಿದ್ದಾರೆ.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

byndoor

Udupi: ಸ್ಕೂಟರ್‌ ಢಿಕ್ಕಿ; ಪಾದಚಾರಿಗೆ ಗಾಯ

8

Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ

5-thekkatte

Thekkatte: ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.