ಯಾಂತ್ರಿಕ ಮೀನುಗಾರಿಕೆ ಅವಧಿ: ಈ ಬಾರಿ ಮೀನಿನ ಬರದಲ್ಲೇ ಮುಕ್ತಾಯ ?


Team Udayavani, Mar 23, 2017, 4:35 PM IST

malpe-1.jpg

ಮಲ್ಪೆ: ರಾಜ್ಯದ ಪ್ರಮುಖ ಮೀನುಗಾರಿಕಾ ಬಂದರು ಮಲ್ಪೆಯಲ್ಲಿ ತೀವ್ರ ಮೀನಿನ ಕ್ಷಾಮ ಉಂಟಾಗಿದ್ದು ಮೀನುಗಾರರು ತತ್ತರಿಸಿದ್ದಾರೆ. ಒಂದೆಡೆ ಡಿಸೇಲ್‌ ದರ ಹೆಚ್ಚಳ ಮತ್ತೂಂದಡೆ ಮೀನಿಗೆ ಬರಗಾಲ. ಇದರಿಂದಾಗಿ ಮೀನುಗಾರಿಕಾ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.

ಈ ಬಾರಿ ಯಾಂತ್ರಿಕ ಮೀನುಗಾರಿಕಾ ಅವಧಿ ಪೂರ್ತಿ ಮೀನಿನ ಕ್ಷಾಮದಿಂದಲೇ ಮುಗಿದು ಹೋಗುವಂತಾಗಿದೆ. ಯಾಂತ್ರಿಕ ಮೀನುಗಾರಿಕಾ ಋತು ಆರಂಭಗೊಂಡ ದಿನದಿಂದ ಹಿಡಿದು ಇದುವರೆಗೂ ಮೀನುಗಾರರಿಗೆ ಸರಿಯಾದ ಪ್ರಮಾಣದ ಮೀನು ಸಿಗದೇ ಅಕ್ಷರಶಃ ಬರಗಾಲದ ಅವಧಿಯನ್ನು ಕಳೆಯುವಂತಾಗಿದೆ. ಋತು ಆರಂಭದ ಮೂರು ಮತ್ತು ಅಂತ್ಯದ ಮೂರ್‍ನಾಲ್ಕು ತಿಂಗಳು ಭರ್ಜರಿ ಕಮಾಯಿ ಮಾಡಿಕೊಳ್ಳುತ್ತಿದ್ದ ಯಾಂತ್ರಿಕ ಮೀನುಗಾರರಿಗೆ ಬೋಟನ್ನು ಮೀನು ಗಾರಿಕೆಗೆ ಕಳುಹಿಸಲು ಸಾಧ್ಯವಾಗದೆ ಈ ಬಾರಿ ದಡದಲ್ಲೇ ಕಾಲ ಕಳೆದದ್ದು ಹೆಚ್ಚು.

ವಿವಿಧ ಬಗೆಯ ಮೀನುಗಳನ್ನು ಹಿಡಿದು ಉತ್ತಮ ಆದಾಯ ಪಡೆಯ ಬೇಕಾಗಿದ್ದ ಈ ಸಮಯದಲ್ಲಿ ಸಮುದ್ರದಲ್ಲಿ ಮೀನು ಸಿಗದೆ ಕ್ಷಾಮ ಉಂಟಾಗಿರುವುದು ಸಂಕಷ್ಟಕ್ಕೆ ಸಿಲುಕುವಂತಾಗಿದೆ.  ಇನ್ನೇನು ಯಾಂತ್ರಿಕ ಮೀನುಗಾರಿಕೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು ಮಳೆಗಾಲದಲ್ಲಿ ಯಾಂತ್ರಿಕ ದೋಣಿಗಳನ್ನು ಸಮುದ್ರಕ್ಕೆ ಇಳಿಸು ವಂತಿಲ್ಲ. ಉಳಿದ ಎರಡು ತಿಂಗಳುಗಳ ಕಾಲ ಸಾಕಷ್ಟು ಮೀನುಗಾರಿಕೆ ನಡೆಸಿ ಲಾಭ ಪಡೆದು ಕೊಳ್ಳಬೇಕಾದ ಮೀನುಗಾರರು ಮೀನಿಲ್ಲದೆ ಕಂಗಾಲಾಗಿದ್ದಾರೆ.

ಪ್ರಸ್ತುತ ಮಲ್ಪೆ ಬಂದರಿನಲ್ಲಿ  ಸುಮಾರು 1200 ಆಳಸಮುದ್ರ (ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ನಡೆಸುವ ಗಂಗೊಳ್ಳಿ, ಹೊನ್ನಾವರ, ಕಾರಾವಾರ, ಭಟ್ಕಳ ಬಂದರಿನ ಕೆಲವು ಬೋಟುಗಳು ಸೇರಿ) ಬೋಟ್‌ಗಳಿದ್ದು ಶೇ. 30 ರಷ್ಟು ಮೀನುಗಾರಿಕೆ ನಡೆಸುತ್ತಿದ್ದರೆ ಉಳಿದ ಶೇ. 70 ಆಳಸಮುದ್ರ ಬೋಟ್‌ಗಳು ಈಗಾಗಲೇ ಬಂದರಿನಲ್ಲಿ ಲಂಗರು ಹಾಕಿವೆ.

ಡಿಸೇಲ್‌ ದರ ಹೆಚ್ಚಳ ಮೀನುಗಾರಿಕೆಗೆ ಹೊಡೆತ
ಸಮುದ್ರದಲ್ಲಿ ಮೀನಿನ ಕ್ಷಾಮದ ಜತೆಗೆ ಡೀಸೆಲ್‌ ದರ ಹೆಚ್ಚಳವಾಗಿರುವುದು ಮೀನುಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬ್ಯಾರಲ್‌ಗೆ ಕಡಿಮೆಯಾಗಿದ್ದರೂ ಕೇಂದ್ರ ಸರಕಾರ ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡುವ ಅವಕಾಶ ಇದೆ. ಆದರೆ ಸರಕಾರ ದರ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಿದ್ದರೆ ಮೀನುಗಾರಿಕೆಗೆ ಇಷ್ಟೊಂದು ದೊಡ್ಡ ಪ್ರಮಾಣದ ಹೊಡೆತ ಬೀಳುವ ಸಾಧ್ಯತೆ ಇಲ್ಲವಾಗಿತ್ತು ಎಂಬ ಅಭಿಪ್ರಾಯ ಮೀನುಗಾರರದ್ದು ಕಳೆದ ಸಾಲಿನಲ್ಲಿ ಲೀಟರಿಗೆ 54 ರೂ. ಇದ್ದ ಡೀಸೆಲ್‌ ದರ ಈ ಬಾರಿ 63ಕ್ಕೆ ಏರಿಕೆಯಾಗಿದೆ. 9 ರೂ. ಹೆಚ್ಚಳದಿಂದಾಗಿ ಪ್ರತಿ ಟ್ರಿಪ್‌ಗೆ ರೂ. 54 ಸಾವಿರ ಈ ವರ್ಷ ಹೆಚ್ಚುವರಿ ಭರಿಸುವಂತಾಗಿದೆ. ಆಳ ಸಮುದ್ರ ಮೀನುಗಾರಿಕೆಗೆ 10 ದಿನಕ್ಕೆ 6,000 ಲೀ ಡಿಸೇಲ್‌ ತುಂಬಬೇಕು. ಕನಿಷ್ಠ 4 ಲಕ್ಷ ಡೀಸೆಲ್‌ಗೆ ತೆಗೆದಿರಿಸಬೇಕು ಇನ್ನು ದುಡಿಯುವವರ ಪಾಲು, ಬಲೆ, ಮಂಜುಗಡ್ಡೆ ಹಾಗೂ ಇನ್ನಿತರ ಖರ್ಚು ಬೇರೆ. ಒಟ್ಟು 5.5 ಲಕ್ಷ ರೂಪಾಯಿ ಮೀನು ಹಿಡಿದರೂ ಬೋಟ್‌ ಮಾಲಕರಿಗೆ ಇದರಲ್ಲಿ ಲಾಭ ಇರುವುದಿಲ್ಲ. ಪ್ರಸ್ತುತ ದಿನಗಳಲ್ಲಿ ಮೀನುಗಾರಿಕೆಗೆ ತೆರಳಿದ ಬೋಟ್‌ಗಳಿಗೆ ಗರಿಷ್ಠ 3ರಿಂದ 4 ಲಕ್ಷ ರೂ. ಮೌಲ್ಯದ ಮೀನು ದೊರೆಯುತ್ತದೆ. 

ಹೆಚ್ಚುವರಿ ಒಂದೂವರೆ ಲಕ್ಷ ರೂ. ನಷ್ಟವನ್ನು ಮುಂದಿನ ಟ್ರಿಪ್‌ನಲ್ಲಾದರೂ ಭರಿಸ‌ಬಹುದೆಂಬ ನಿರೀಕ್ಷೆಯಲ್ಲಿ ಮೀನು  ವ್ಯಾಪಾರಸ್ಥರಿಂದ ಮುಂಗಡ ಹಣ ಪಡೆದು ಬೋಟನ್ನು ಮೀನುಗಾರಿಕೆಗೆ ಬಳಸಿದರೆ ತೀರಾ ನಷ್ಟವನ್ನು ಹೊಂದಿದ ಹೆಚ್ಚಿನ ಆಳ ಸಮುದ್ರ ಬೋಟನ್ನು ಲಂಗರು ಹಾಕಲಾಗಿದೆ.

ಉತ್ತಮ ಜಾತಿಯ ಮೀನು ಕಡಿಮೆ
ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದುವರೆಗೆ ಸಿಕ್ಕಿರುವ ಎಲ್ಲ ತರದ ಮೀನಿನ ಪ್ರಮಾಣ ಭಾರೀ ಕುಸಿತ ಕಂಡಿದೆ. ಹೆಚ್ಚು ಲಾಭ ತಂದು ಕೊಡುತ್ತಿದ್ದ ಉತ್ತಮ ಜಾತಿಯ ಮೀನುಗಳಾದ ಪಾಪ್ಲೆಟ್‌, ಅಂಜಲ್‌, ಕೋಲು ಬೊಂಡಸ, ಅಡೆಮೀನು, ಬಂಗುಡೆ, ರಾಣಿಮೀನಿನ ಪ್ರಮಾಣ ತೀರ ಕುಸಿದಿದೆ. ಒಂದು ಬೋಟಿನಲ್ಲಿ 2-3 ಟನ್‌ಗಳಷ್ಟು ಸಿಗುತ್ತಿದ್ದ ಬಂಗುಡೆ, ರಾಣಿಮೀನುಗಳ ಪ್ರಮಾಣ 400-500 ಕೆ ಜಿ. ಗೆ ಇಳಿದರೆ, ಉತ್ತಮ ದರ ಕೋಲು ಬೊಂಡಾಸ (ಸ್ಕಾಡ್‌) ಒಂದು ಟನ್‌ನಿಂದ 200-300 ಕೆಜಿಗೆ ಕುಸಿದಿದೆ.

ಮೀನಿನ ಬರಕ್ಕೆ ಕಾರಣ ?
ಕೆಲವು ಮೀನುಗಾರರ ಪ್ರಕಾರ ಆರಂಭದಲ್ಲಿ ಸರಿಯಾದ ತೂಫಾನ್‌ ಆಗದಿರುವುದೇ ಕ್ಷಾಮ ಉಂಟಾಗಲು ಕಾರಣ ಎಂದು ಹೇಳಲಾಗುತ್ತದೆ. ಇನ್ನೊಂದು ಕಡೆ ಸಮುದ್ರದಲ್ಲಿ ಬೋಟಿನ ಸಂಖ್ಯೆ ಹೆಚ್ಚಾಗಿದ್ದರಿಂದ ಮೀನಿನ ಸಂತಾನೋತ್ಪತ್ತಿ ಆಗುತ್ತಿಲ್ಲ. ಮೀನುಗಳ ಸಂತತಿ ನಶಿಸಿ ಹೋಗುತ್ತಿದೆ ಎಂಬ ಕಾರಣವೂ ಇದೆ. ಮೀನುಗಾರಿಕೆಯಲ್ಲಿ ಹೊಸ ಹೊಸ ಪರಿಕ್ರಮ ಅನ್ವೇಷಣೆಯ ಫಲದಿಂದ ಹೀಗಾಗಿರಲೂ ಬಹುದು ಎನ್ನುವುದೂ ಮೀನುಗಾರರ ಅಭಿಪ್ರಾಯ.

ಪ್ರತಿ ಟ್ರಿಪ್‌ ನಷ್ಟವಾಗುತ್ತಿರುವುದರಿಂದ ಬೋಟ್‌ಗಳನ್ನು ಕಡಲಿಗಿಳಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಬ್ಯಾಂಕ್‌ ಸಾಲ, ವೆಚ್ಚಕ್ಕೆ ತಕ್ಕಷ್ಟು ಲಾಭ ಸಿಗುತ್ತಿಲ್ಲ. ಬೋಟಿನ ಡೀಸೆಲ್‌ಗ‌ಳಿಗೂ ನಮ್ಮ ಕೈಯಿಂದಲೇ ಖರ್ಚು ಆಗುತ್ತದೆ. ಹಾಗಾಗಿ ಲಂಗರು ಹಾಕಿದೇªವೆ. ಬ್ಯಾಂಕಿನ ಸಾಲದ ಕಂತು ಬಡ್ಡಿ ಏರುತ್ತಿದೆ.
– ಕೃಷ್ಣ ಪ್ಪ ಕರ್ಕೇರ , ಬೋಟ್‌ ಮಾಲಕರು, ಮಲ್ಪೆ

ಈ ಬಾರಿ ಕರಾವಳಿ ಎಲ್ಲ ಮೀನುಗಾರರ ಅದೃಷ್ಟ ಚೆನ್ನಾಗಿಲ್ಲ. ಈ ಬಾರಿ ಮೀನುಗಾರಿಕಾ ಋತು ಆರಂಭದಿಂದಲೂ ಮತ್ಸಕ್ಷಾಮದ ಹೊಡೆತವಾಗಿದೆ. ಮತ್ತೂಂದೆಡೆ ಡೀಸೆಲ್‌ ದರ ಏರಿಕೆ. ರಾಜ್ಯದ ಹಾಗೂ ಹೊರರಾಜ್ಯದ ಎಲ್ಲ ಮೀನುಗಾರರೆಲ್ಲರು ಒಟ್ಟಾಗಿ ಸಮುದ್ರ ಸಂಪತ್ತನ್ನು ಉಳಿಸಿ ಬೆಳೆಸುವ ಚಿಂತನೆ ಮಾಡಬೇಕಾಗಿದೆ.  ದೇಶದ ಪಶ್ಚಿಮ ಕರಾವಳಿಯಲ್ಲಿ ಏಕರೂಪದ ಕಾನೂನು ಜಾರಿಯಾಗಬೇಕು.
– ಹಿರಿಯಣ್ಣ ಟಿ. ಕಿದಿಯೂರು, ಅಧ್ಯಕ್ಷರು ಮಲ್ಪೆ ಮೀನುಗಾರರ ಸಂಘ

ಟಾಪ್ ನ್ಯೂಸ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

3-girish

Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ

16

Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ

Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.