ನಾಲ್ವರನ್ನು ರಕ್ಷಿಸಿದ ಕರಾವಳಿ ಪಡೆ
ನೇತ್ರಾಣಿ ಸಮೀಪ ಮಲ್ಪೆಯ ಮೀನುಗಾರಿಕೆ ಬೋಟ್ ಮುಳುಗಡೆ
Team Udayavani, Nov 25, 2019, 5:09 AM IST
ಮಲ್ಪೆ: ಮಲ್ಪೆ ಬಂದರಿನಿಂದ ತೆರಳಿದ ಆಳಸಮುದ್ರ ಬೋಟೊಂದು ಭಟ್ಕಳ ತಾಲೂಕಿನ ಮುಡೇìಶ್ವರ ನೇತ್ರಾಣಿ ಸಮೀಪ ಮೀನುಗಾರಿಕೆ ನಡೆಸುವ ವೇಳೆ ಅವಘಡದಿಂದಾಗಿ ಮುಳುಗಡೆಗೊಂಡಿದ್ದು, ಬೋಟಿ ನಲ್ಲಿದ್ದ ನಾಲ್ವರು ಮೀನುಗಾರರನ್ನು ಕರಾವಳಿ ಕಾವಲು ಪಡೆಯ ಪೊಲೀಸರು ರಕ್ಷಿಸಿದ ಘಟನೆ ರವಿವಾರ ನಡೆದಿದೆ.
ಶೀಲರಾಜ್ ಎಂಬವರಿಗೆ ಸೇರಿದ ಶ್ರೀಲೀಲಾ ಬೋಟ್ ಶನಿವಾರ ಮಲ್ಪೆಯಿಂದ ತೆರಳಿತ್ತು. ರವಿವಾರ ಮುಂಜಾನೆ 5.15ರ ವೇಳೆಗೆ ನೇತ್ರಾಣಿ ಸಮೀಪ ಮೀನುಗಾರಿಕೆ ನಡೆಸುತ್ತಿರುವ ವೇಳೆ ಬೋಟ್‌ನ ಡೀಸೆಲ್ ಟ್ಯಾಂಕ್‌ಗೆ ಹಾಕಿದ ಕಟ್ಟಿಗೆ ಅಡಿಪಾಯ ಮುರಿದು ನೀರು ಒಳಹೊಕ್ಕಿತ್ತು. ತತ್‌ಕ್ಷಣವೇ ಬೋಟಿನಲ್ಲಿದ್ದವರು ಸಂಬಂಧಪಟ್ಟವರಿಗೆ ಮಾಹಿತಿ ರವಾನಿಸಿ ರಕ್ಷಣೆಗೆ ಮನವಿ ಮಾಡಿದ್ದರು. ವಯರ್‌ವೆಸ್ ಮೂಲಕ ಇತರ ಬೋಟುಗಳಿಗೂ ಮಾಹಿತಿ ನೀಡಿದ್ದು, ಗಿಲ್‌ನೆಟ್ ಬೋಟಿನವರು ನೆರವಿಗೆ ಬಂದಿದ್ದರು. ಬೋಟ್ ಮುಳುಗಡೆಯಿಂದ ಸುಮಾರು 30 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಕರಾವಳಿ ಪಡೆಯಿಂದ ರಕ್ಷಣೆ
ಮಲ್ಪೆ ಕರಾವಳಿ ಪಡೆಯ ಪೊಲೀಸ್ ಅಧೀಕ್ಷಕ ಚೇತನ್ ಆರ್. ಮಾರ್ಗದರ್ಶನದಲ್ಲಿ ಭಟ್ಕಳ ಕರಾವಳಿ ಕಾವಲು ಪಡೆಯ ಪೊಲೀಸರು ತುರ್ತು ಕಾರ್ಯಾ ಚರಣೆ ನಡೆಸಿದರು. ಇಂಟರ್ ಸೆಪ್ಟರ್ ಬೋಟಿನಲ್ಲಿ ಮೀನು ಗಾರರು ಅಪಾಯಕ್ಕೆ ಸಿಲುಕಿದ್ದ ಸ್ಥಳಕ್ಕೆ ತೆರಳಿ ಸಂಕಷ್ಟಕ್ಕೆ ಸಿಲುಕಿದ್ದ ಮೀನುಗಾರರಾದ ಭಟ್ಕಳದ ಆನಂದ ಮೊಗೇರ, ಗುರು ಖಾರ್ವಿ, ಮಂಜುನಾಥ ಮತ್ತು ಕಲುºರ್ಗಿಯ ರಮೇಶ್ ಛಲವಾದಿ ಅವರನ್ನು ರಕ್ಷಿಸಿ ದಡ ಸೇರಿಸಿದರು.
ಎಸ್ಪಿ ಬಹುಮಾನ ಘೋಷಣೆ
ಕಾರ್ಯಾಚರಣೆಯಲ್ಲಿ ಭಟ್ಕಳ ಕರಾವಳಿ ಕಾವಲು ಪೊಲೀಸ್ ಠಾಣೆಯ ನಿರೀಕ್ಷಕ ನಾಗರಾಜ್, ಉಪನಿರೀಕ್ಷಕ ಅಣ್ಣಪ್ಪ ಮೊಗೇರ, ತಾಂತ್ರಿಕ ಸಿಬಂದಿಗಳಾದ ಕ್ಯಾ| ಮಲ್ಲಪ್ಪ ಮುದಿಗೌಡರ್, ಕಲಾಸಿ ಸಂಜೀವ ನಾಯಕ್ ಪಾಲ್ಗೊಂಡಿದ್ದರು. ತಂಡಕ್ಕೆ ಎಸ್ಪಿ ಚೇತನ್ ಬಹುಮಾನ ಘೋಷಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.