5.61 ಕೋ.ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ ಪೂರ್ಣ’
Team Udayavani, Aug 4, 2018, 6:15 AM IST
ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ 5.61 ಕೋ. ರೂ ವೆಚ್ಚದಲ್ಲಿ ದುರಸ್ತಿ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯ ನಡೆಯುತ್ತಿದೆ. ಮೂಲ ಸೌಲಭ್ಯ, ಏಲಂ ಕಟ್ಟಡದ ದುರಸ್ತಿ, ಬಂದರು ರಸ್ತೆಯನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಮೀನುಗಾರಿಕೆ ಋತು ಆರಂಭದ ಹಿನ್ನೆಲೆಯಲ್ಲಿ ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣಗೊಳಿಸಲಾಗಿದೆ.
ದಿನನಿತ್ಯ ಸಾವಿರಾರು ಮೀನುಗಾರರು ಒಂದೆಡೆ ಸೇರುವ ಪ್ರದೇಶದಲ್ಲಿ ಕೋಟ್ಯಂತರ ರೂ. ಮೀನುಗಾರಿಕೆ ವ್ಯವಹಾರ ಇಲ್ಲಿ ನಡೆಯುತ್ತದೆ. ಇಲ್ಲಿನ ಮಲ್ಪೆ ಬಂದರು ಏಲಂ ಕಟ್ಟಡ ಶೀಟುಗಳು, ನೆಲಹಾಸು ಸಂಪೂರ್ಣ ಹಾಳಾಗಿತ್ತು. ಈ ಬಗ್ಗೆ ಮೀನುಗಾರರು ಬಂದರು ಏಲಂ ಕಟ್ಟಡ ದುರಸ್ತಿಪಡಿಸುವಂತೆ ಅಧಿಕಾರಿ, ಜನಪ್ರತಿನಿಧಿಗಳಲ್ಲಿ ಮನವಿ ಸಲ್ಲಿಸಿದ್ದರು. ಇದರಲ್ಲಿ ಬಂದರು ರಸ್ತೆ ಸೇರಿದಂತೆ ಜೆಟ್ಟಿ ನಿರ್ಮಾಣದ ಪ್ರಸ್ತಾಪವು ಇತ್ತೆನ್ನಲಾಗಿದೆ. ಮೀನುಗಾರಿಕೆ ಇಲಾಖೆಯ 20 17-18ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿದ ಅನುದಾನದಡಿಯಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಏನೆಲ್ಲ ಕಾಮಗಾರಿಗಳಾಗಿವೆ?
ಬಂದರಿನ ಉತ್ತರ ಭಾಗದ ಬದಿಯಲ್ಲಿ ಖಾಲಿ ಪ್ರದೇಶದಲ್ಲಿ 2.80 ಕೋ. ರೂ. ವೆಚ್ಚದಲ್ಲಿ 70.5 ಮೀ. ಉದ್ದದ ಜೆಟ್ಟಿ ನಿರ್ಮಿಸಲಾಗಿದೆ. ಬಂದರಿನ ಒಳಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದ್ದು, 1.28 ಕೋ. ರೂ. ವೆಚ್ಚದಲ್ಲಿ 1.2 ಕಿ.ಮೀ . ವ್ಯವಸ್ಥಿತ ದ್ವಿಪಥ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಇವೆರಡು ಕಾಮಗಾರಿ ಮಾರ್ಚ್‌ನಲ್ಲಿ ಪೂರ್ಣಗೊಂಡಿದೆ. ಉಳಿದಂತೆ ಬಂದರಿನ ಎರಡು ಹರಾಜು ಕಟ್ಟಡದ ದುರಸ್ತಿ ಕಾರ್ಯಗಳನ್ನು ನಡೆಸಲಾಗುತ್ತಿದೆ.
ಪ್ರಾಂಗಣದ ನೆಲಕ್ಕೆ ಗ್ರಾನೈಟ್ಸ್ ಅಳವಡಿಸುವ ಹಾನಿಗೊಂಡ ಮಾಡಿನ ಹಳೆ ಶೀಟನ್ನು ತೆಗೆದು ಹೊಸ ಶೀಟನ್ನು ಅಳವಡಿಸಲಾಗುತ್ತಿದ್ದು ಈಗಾಗಲೇ ಒಂದು ಪ್ರಾಂಗಣ ಕೆಲಸ ಮುಗಿದಿದ್ದು ಇನ್ನೊಂದು ಪ್ರಾಂಗಣದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶೇ.75 ಡ್ರಜ್ಜಿಂಗ್
ಬಂದರಿನಲ್ಲಿ ಈಗಾಗಲೇ ಶೇ.75ರಷ್ಟು ಡ್ರೆಜ್ಜಿಂಗ್ ಮುಗಿಸಲಾಗಿದೆ. ಮೀನುಗಾರಿಕೆ ಆರಂಭ ಗೊಂಡಿದ್ದರಿಂದ ಉಳಿದ ಕೆಲಸವನ್ನು ಬೋಟುಗಳು ಮೀನುಗಾರಿಕೆಗೆ ತೆರಳಿದ ಬಳಿಕ ನಡೆಯಲಿದೆ. ಬೇಸಿನಿನಲ್ಲಿ ಹೂಳುತುಂಬಿದ್ದರಿಂದ ಬೋಟುಗಳ ಚಲನವಲನಕ್ಕೆ ಸಾಕಷ್ಟು ಸಮಸ್ಯೆಯಾಗಿತ್ತು, ನೀರಿಗೆ ಆಕಸ್ಮಿಕವಾಗಿ ಬಿದ್ದ ಸಂದರ್ಭದಲ್ಲಿ ಮೀನುಗಾರರನ್ನು ರಕ್ಷಿಸಲು ಕಷ್ಟ ಸಾಧ್ಯವಾಗಿತ್ತು, ಈ ಬಗ್ಗೆ ಮೀನುಗಾರರು ಹಲವು ದಿನಗಳಿಂದ ಸಮಸ್ಯೆ ಪರಿಹಾರಕ್ಕೆ ಬೇಡಿಕೆ ಸಲ್ಲಿಸಿದ್ದರು. ಮುಂಬೈಯ ಯುನಿಕ್ ಡ್ರೆಜ್ಜಿಂಗ್ ಸಂಸ್ಥೆ ಡ್ರಜ್ಜಿಂಗ್ ಕಾಮಗಾರಿಯನ್ನು ಕೈಗೊಂಡಿದೆ.
ತಾಂತ್ರಿಕ ಕೆಲಸ ಅಪೂರ್ಣ
ಮಳೆಗಾಲದಲ್ಲಿ ಬೋಟನ್ನು ದಕ್ಕೆಯಲ್ಲಿ ನಿಲ್ಲಿಸಲಾಗುವುದರಿಂದ ಡ್ರಜ್ಜಿಂಗ್ ಕೆಲಸ ಸ್ಥಗಿತಗೊಳಿಸಲಾಗಿತ್ತು. ಅಗಸ್ಟ್‌ನಲ್ಲಿ ಬೋಟ್‌ಗಳು ಸಮುದ್ರಕ್ಕೆ ತೆರಳಿದ ಬಳಿಕ ಮತ್ತೆ ಕಾಮಗಾರಿ ಆರಂಭಿಸಲಾಗುವುದು. ಹರಾಜು ಪ್ರಾಂಗಣದ ನೆಲಕ್ಕೆ ಗ್ರಾನೈಟ್ ಅಳವಡಿಸುವ ಕೆಲಸಗಳು ಮುಗಿದಿದೆ. ಪ್ರಾಂಗಣದ ಮೇಲ್ಛಾವಣೆ ಶೀಟು ಆಳವಡಿಸುವ ಕೆಲಸ ಆಗಬೇಕಾಗಿದೆ. ಮೇಲ್ಛಾವಣಿ ವಿನ್ಯಾಸಗೊಳಿಸುವ ಬಗ್ಗೆ ಮೀನುಗಾರಿಕೆ ಇಲಾಖೆಯ ಗಮನಕ್ಕೆ ತರಲಾಗಿದ್ದು ತಾಂತ್ರಿಕ ಕೆಲಸಗಳು ಆಗಬೇಕಾಗಿದ್ದು ಅದು ಮುಗಿದ ಬಳಿಕ ಕಾಮಗಾರಿ ಪೂರ್ಣಗೊಳಿಸಲಾಗುವುದು.
– ನಾಗರಾಜ್, ಎಕ್ಸಿಕ್ಯೂಟಿವ್ ಎಂಜಿನಿಯರ್, ಬಂದರು ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Asia Cup Hockey: ಥಾಯ್ಲೆಂಡ್ ವಿರುದ್ಧ ಭಾರತಕ್ಕೆ 11-0 ಅಂತರದ ಜಯ
Syed Mushtaq Ali Trophy: ಸೌರಾಷ್ಟ್ರಕ್ಕೆ ಶರಣಾದ ಕರ್ನಾಟಕ
Singapore: ವಿಶ್ವ ಚೆಸ್ ಚಾಂಪಿಯನ್‌ಶಿಪ್: ಮೂರನೇ ಪಂದ್ಯದಲ್ಲಿ ಗುಕೇಶ್ ಗೆಲುವು
Badminton: ಸಯ್ಯದ್ ಮೋದಿ ಬ್ಯಾಡ್ಮಿಂಟನ್: ಎರಡನೇ ಸುತ್ತಿಗೆ ಸಿಂಧು, ಲಕ್ಷ್ಯ
Border-Gavaskar Trophy: ಮಿಚೆಲ್ ಮಾರ್ಷ್ ಗಾಯಾಳು; ವೆಬ್‌ಸ್ಟರ್ ಬ್ಯಾಕಪ್ ಆಟಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.