Malpe ಅಕ್ರಮ ಮರಳು ಸಾಗಾಟ: ಇಬ್ಬರು ವಶಕ್ಕೆ
Team Udayavani, Dec 23, 2023, 1:39 AM IST
ಮಲ್ಪೆ: ಅಕ್ರಮ ಮರಳು ಸಾಗಾಟಕ್ಕೆ ಕಾರಣರಾಗಿದ್ದ ಇಬ್ಬರನ್ನು ವಾಹನ ಸಹಿತ ಮಲ್ಪೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಗುರುವಾರ ವಡಭಾಂಡೇಶ್ವರದಲ್ಲಿ ಗಸ್ತಿನಲ್ಲಿದ್ದಾಗ ತೊಟ್ಟಂ ಕಡೆಯಿಂದ ಬಲರಾಮ ಜಂಕ್ಷನ್ ಕಡೆಗೆ ಬರುತ್ತಿರುವ ವಾಹನವನ್ನು ತಪಾಸಣೆ ಮಾಡಿದಾಗ ಪರವಾನಿಗೆ ಇಲ್ಲದೆ ಮರಳು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ವಾಹನದಲ್ಲಿ ಗದಿಯಪ್ಪ ಹನುಮಂತಪ್ಪ ಮೆನಸಗಿ ಚಾಲಕನಾಗಿದ್ದು ಅತನನ್ನು ವಿಚಾರಿಸಿದಾಗ ತಾನು ತನ್ನ ಟೆಂಪೋ ಮಾಲಕ ಮನೋಹರ ಅವರ ಸೂಚನೆಯಿಂದ ಕೋಡಿಬೆಂಗ್ರೆ ದುರ್ಗಾಪರಮೇಶ್ವರೀ ದೇವಸ್ಥಾನದ ಬಳಿಯ ಸ್ವರ್ಣ ನದಿಯಲ್ಲಿ ಮರಳನ್ನು ತೆಗೆದು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾನೆ.
ಅದರಂತೆ ಮನೋಹರ ಮತ್ತು ಉದಯ ಅವರನ್ನು ವಶಕ್ಕೆ ಪಡೆದು ವಿಚಾರಿಸಲಾಗಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.