Malpe ಹೆಚ್ಚುತ್ತಿದೆ ಶೀತ, ಜ್ವರ,ಗಂಟಲು ನೋವು
Team Udayavani, Dec 27, 2023, 10:32 PM IST
ಮಲ್ಪೆ: ಬಿರು ಬಿಸಿಲಿನಿಂದಾಗಿ ಹಗಲಲ್ಲಿ ವಿಪರೀತ ಸೆಕೆ, ರಾತ್ರಿ ಚಳಿಯ ಅನುಭವ. ಈ ಹವಾಮಾನದ ವೈಪರೀತ್ಯದಿಂದಾಗಿ ಕೆಲವು ದಿನಗಳಿಂದ ನಗರ ಸೇರಿದಂತೆ ಗ್ರಾಮೀಣ ಭಾಗದ ಬಹುತೇಕರ ಮನೆಗಳಲ್ಲಿ ಶೀತ, ನೆಗಡಿ, ಜ್ವರ, ಗಂಟಲು ಸೋಂಕಿನ ಹಾವಳಿ ಕಾಣಿಸಿ ಕೊಂಡಿದ್ದು ಎಲ್ಲ ಆಸ್ಪತ್ರೆ, ಕ್ಲಿನಿಕ್‌ಗಳು ಪ್ರತೀದಿನ ರೋಗಿಗಳಿಂದ ತುಂಬುತ್ತಿವೆ.
ಒಬ್ಬರಿಗೆ ಕಾಣಿಸಿಕೊಳ್ಳುವ ಜ್ವರ ಬಳಿಕ ಕುಟುಂಬದ ಇತರರಿ ಗೂ ಹರಡುತ್ತಿದ್ದು, ನೆಗಡಿ ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ. ಎಲ್ಲರಿಗೂ ಹರಡೀತೆಂಬ ಭಯ ಕಾಡತೊಡಗಿದೆ.
ಮಾಸ್ಕ್ ಬಳಕೆ ಉತ್ತಮ
ನವೆಂಬರ್, ಡಿಸೆಂಬರ್‌ನಲ್ಲಿ ಚಳಿಯ ಪ್ರಮಾಣ ಹೆಚ್ಚಿರುವುದರಿಂದ ಶೀತ, ಜ್ವರ ಸಾಮಾನ್ಯ. ಇದಕ್ಕೆ ಯಾರೂ ಆತಂಕಪಡುವ ಆವಶ್ಯಕತೆ ಇಲ್ಲ. ಅನಾರೋಗ್ಯ ಉಂಟಾದಾಗ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಚಿಕಿತ್ಸೆ ಪಡೆ ಯಿರಿ. ನೆಗಡಿ, ಜ್ವರ ಕಾಣಿಸಿಕೊಂಡಾಗ ಮಾಸ್ಕ್ ಧರಿಸುವ ಮೂಲಕ ಹರಡುವಿಕೆಯನ್ನು ತಡೆಗಟ್ಟಿ ಎನ್ನುತ್ತಾರೆ ಎನ್ನುತ್ತಾರೆ ಮಲ್ಪೆಯ ಪ್ರಾಥಮಿಕ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ಡಾ| ಜೇಷ್ಮಾ.
ಸಾಮಾನ್ಯವಾಗಿ ಶೀತ – ಜ್ವರ ಬಂದಾಗ ರೋಗಿಗಳು ಐದಾರು ದಿನ ಔಷಧ ಸೇವಿಸುವ ಅನಿವಾರ್ಯತೆ ಕಂಡು ಬರುತ್ತದೆ. ಸೂಕ್ತ ಔಷಧಿ, ವಿಶ್ರಾಂತಿಯೇ ಇದಕ್ಕೆ ಇರುವ ಪರಿಹಾರ. ಹೆಚ್ಚಿನ ದಿನ ಜ್ವರ ಇದ್ದಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ ಎನ್ನುತ್ತಾರೆ ಕಿನ್ನಿಮೂಲ್ಕಿಯ ಡಾ| ಗೀತಾ ರಾವ್.
ಹವಾಮಾನ ವೈಪರೀತ್ಯದಿಂದಾಗಿ ಸಾಂಕ್ರಾಮಿಕ ರೋಗ ಲಕ್ಷಣಗಳು ಕಂಡು ಬರುತ್ತಿವೆ. ಆರೋಗ್ಯ ಇಲಾಖೆಯು ಸೂಕ್ತ ಚಿಕಿತ್ಸೆ ನೀಡುತ್ತಿದೆ. ನಿರಂತರವಾಗಿ ಇಂತಹ ರೋಗ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಿ.
– ಡಾ| ಪಿ.ಐ. ಗಡಾದ್,
ಜಿಲ್ಲಾ ಆರೋಗ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.