ಮಲ್ಪೆ ಕಡಲತೀರಕ್ಕೆ ತೇಲಿ ಬಂದಿದೆ ಕಡಲಮಡಿ: ಮತ್ಸ್ಯಸಂಪತ್ತಿನ ನಿಶಾನೆ ?
Team Udayavani, Jul 22, 2017, 5:55 AM IST
ಮಲ್ಪೆ: ಮಲ್ಪೆ ಕಡಲತೀರದ ಉದ್ದಕ್ಕೂ ಅಪಾರ ಪ್ರಮಾಣದಲ್ಲಿ ಕಡಲ ಮಡಿ (ಕಡಲ ತ್ಯಾಜ್ಯ) ಬಿದ್ದಿದೆ. ಮಳೆಗಾಲದ ಸಮಯದಲ್ಲಿ ಬಿರುಸುಗೊಂಡಿರುವ ಸಮುದ್ರ ತನ್ನೊಡಲು ಸೇರಿದ ಎಲ್ಲಾ ಕಸಕಡ್ಡಿಗಳನ್ನು ಕಡಲ ದಂಡೆ ಬಳಿ ಹೊರ ಹಾಕುತ್ತದೆ. ಇದಕ್ಕೆ ಸ್ಥಳೀಯವಾಗಿ ಮಡಿ ಬೀಳುವುದು ಎನ್ನುತ್ತಾರೆ.
ಮಳೆಗಾಲದಲ್ಲಿ ಕಾಡು, ನಗರ ಪ್ರದೇಶದ ಕಸ ಕಡ್ಡಿಗಳು ನೆರೆ ನೀರಿನಲ್ಲಿ ಹರಿದು ಬಂದು ಕಡಲನ್ನು ಸೇರಿಕೊಳ್ಳುತ್ತವೆ. ಕಡಲು ಮಡಿ ಬೀಳುವುದು ಪ್ರತಿವರ್ಷ ಈ ಸಮಯದಲ್ಲಿ ಘಟಿಸುವ ವಿದ್ಯಾಮಾನ. ಈ ಭಾರಿಯೂ ಮಲ್ಪೆ ಕಡಲತೀರದಲ್ಲಿ ಅಪಾರ ಪ್ರಮಾಣದ ಕಸ ತೇಲಿ ಬಂದಿದೆ.
ಹಿಂದಿನ ಕಾಲದಲ್ಲಿ ಯಾವಾಗ ಕಡಲ ಮಡಿ ತೇಲಿ ಬಂತೋ ಆವಾಗ ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿಗೆ ಬಲೆ ತುಂಬ ಮೀನು ಸಿಗುತ್ತದೆ ಎಂಬುದು ನಂಬಿಕೆ. ಮಡಿ ಬಿದ್ದಾಗ ಬಿರುಸುಗೊಂಡ ಕಡಲು ತೀರಪ್ರದೇಶದಲ್ಲಿ ತಣ್ಣಗಾಗುತ್ತ ಹೋಗುತ್ತದೆ. ಇದು ಮೀನು ಬರುವ ಲಕ್ಷಣವೂ ಹೌದು ಎನ್ನುತ್ತಾರೆ ಮೀನುಗಾರರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಾಂಬಾಡಿ ಸುಬ್ರಹ್ಮಣ್ಯ ಭಟ್ ಗೆ ಕರ್ನಾಟಕ ಯಕ್ಷಗಾನ ಅಕಾಡಮಿಯ ಪಾರ್ತಿಸುಬ್ಬ ಪ್ರಶಸ್ತಿ ಘೋಷಣೆ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.