ಮಾಲ್ವಾಣ್ ಬಳಿ ಸಮುದ್ರದಲ್ಲಿ ದೋಣಿ ಅವಶೇಷ ಪತ್ತೆ
ಮೀನುಗಾರರ ಜತೆಗೂಡಿ ನೌಕಾಪಡೆ ಶೋಧ; ಅವಘಡಕ್ಕೀಡಾದ ಸುವರ್ಣ ತ್ರಿಭುಜ? ;ಮೀನುಗಾರರ ಮಾಹಿತಿ ಇಲ್ಲ
Team Udayavani, May 4, 2019, 6:00 AM IST
ಶೋಧದಲ್ಲಿ ಭಾಗವಹಿಸಿದ ಐಎನ್‌ಎಸ್ ನಿರೀಕ್ಷಕ.
ಮಲ್ಪೆ/ಕಾರವಾರ: ನಾಲ್ಕೂವರೆ ತಿಂಗಳುಗಳ ಹಿಂದೆ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ಏಳು ಮೀನುಗಾರರ ಸಹಿತ ನಿಗೂಢವಾಗಿ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ದೋಣಿಯ ಅವಶೇಷ ಮಹಾರಾಷ್ಟ್ರದ ಮಾಲ್ವಾಣ್ ಬಳಿ ಪತ್ತೆಯಾಗಿದೆ. ಅದು ಮುಳುಗಡೆಯಾಗಿರುವ ಬಗ್ಗೆ ನೌಕಾ ಪಡೆಯ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.
ಮಾಲ್ವಾಣ್ ಬಳಿ ಸುಮಾರು 64 ಮೀ. ಆಳ ಸಮುದ್ರದಲ್ಲಿ ಅವಶೇಷ ಗಳು ಪತ್ತೆಯಾಗಿದ್ದು, ಅವು ಸುವರ್ಣ ತ್ರಿಭುಜದವು ಎಂದು ಐಎನ್‌ಎಸ್ ನಿರೀಕ್ಷಕ್ ಹಡಗಿನ ಮುಳುಗು ತಜ್ಞರು ಖಚಿತಪಡಿಸಿದ್ದಾರೆ. ಭಾರತೀಯ ನೌಕಾಪಡೆಯ ಸಾರ್ವಜನಿಕ ಸಂಪರ್ಕಾಧಿಕಾರಿಯೊಬ್ಬರು ಈ ಸಂಬಂಧ ಟ್ವೀಟ್ ಮಾಡಿದ್ದಾರೆ.
ಮಲ್ಪೆ ಬಡಾನಿಡಿಯೂರಿನ ಚಂದ್ರಶೇಖರ್ ಕೋಟ್ಯಾನ್, ದಾಮೋದರ ಸಾಲ್ಯಾನ್, ಉ. ಕ. ಜಿಲ್ಲೆಯ ಲಕ್ಷ್ಮಣ, ರವಿ, ಸತೀಶ್, ಹರೀಶ ಮತ್ತು ರಮೇಶ ಸೇರಿ ಒಟ್ಟು ಏಳು ಮೀನು ಗಾರರು ಬೋಟಿನಲ್ಲಿದ್ದು, ಇವರೆಲ್ಲರೂ ಮೃತಪಟ್ಟಿರಬಹುದೆಂದು ಊಹಿಸಲಾಗಿದೆ. ನೌಕಾಪಡೆ ಇವರ ಸಾವಿನ ಬಗ್ಗೆ ಖಚಿತ ಮಾಹಿತಿ ನೀಡಿಲ್ಲ.
ಮೀನುಗಾರರ ನೆರವು
ಶಾಸಕ ರಘುಪತಿ ಭಟ್ ಹಾಗೂ 10 ಮಂದಿ ಮೀನುಗಾರರ ತಂಡ ಎ.28ರಿಂದ ಐಎನ್‌ಎಸ್ ನಿರೀಕ್ಷಕ್ ಹಡಗಿನ ಮೂಲಕ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಸೋಮವಾರ ಬೆಳಗ್ಗಿನಿಂದ ತೀವ್ರ ಶೋಧ ನಡೆಯಿತು. ಸೋನಾರ್ ತಂತ್ರಜ್ಞಾನದ ಮೂಲಕ ಹುಡುಕಾಟ ನಡೆಸಲಾಗಿತ್ತು. ಜಿಪಿಎಸ್ ಮಾಹಿತಿ ಆಧರಿಸಿ ಬುಧವಾರದ ವರೆಗೂ ಶೋಧ ನಡೆಯಿತು. ಮುಳುಗು ತಜ್ಞರು ಸಮುದ್ರಕ್ಕೆ ಇಳಿದು ಸುಮಾರು 64 ಮೀ. ಆಳದಲ್ಲಿ ಅವಶೇಷಗಳನ್ನು ಪತ್ತೆ ಹಚ್ಚಿದರು. ದೋಣಿಯ ಕ್ಯಾಬಿನ್ ಪೂರ್ಣ ಹಾನಿಯಾಗಿದೆ. ದೋಣಿ ಒಂದು ಬದಿಗೆ ಮಗುಚಿ ಬಿದ್ದ ಸ್ಥಿತಿಯಲ್ಲಿದ್ದು, ‘ಸುವರ್ಣ ತ್ರಿಭುಜ’ ಹೆಸರು ಕಂಡುಬಂದಿದೆ ಎನ್ನಲಾಗಿದೆ. ಖಾತ್ರಿ ಪಡಿಸಲು ಸಮುದ್ರದಾಳದಲ್ಲಿ ವಿಡಿಯೋಗ್ರಫಿ ಮಾಡಲಾಗಿದೆ. ಇದರಿಂದಲೂ ದೋಣಿಯ ಹೆಸರು ಖಚಿತವಾಗಿದೆ. ಮೀನುಗಾರರ ನೆರವಿನಿಂದ ಪತ್ತೆ ಮಾಡಲು ಸಾಧ್ಯವಾಯಿತು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.