ಮಲ್ಪೆ : ಕಡಲಿಗಿಂತ ಅಪಾಯಕಾರಿ ಈ ಬಂದರು, 5 ವರ್ಷಗಳಲ್ಲಿ 100ಕ್ಕೂ ಅಧಿಕ ಜೀವಬಲಿ
Team Udayavani, Oct 13, 2022, 9:28 AM IST
ಮಲ್ಪೆ : ದೇಶದ ಅತೀ ದೊಡ್ಡ ಬಂದರುಗಳಲ್ಲಿ ಎರಡನೇ ಸ್ಥಾನದಲ್ಲಿರುವ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಹೂಳು ಕೂಡ ತುಂಬಿಕೊಂಡಿರುವುದರಿಂದ ಬೋಟಿನ ಲಂಗರು ಮತ್ತು ಸಂಚಾರಕ್ಕೆ ತೊಂದರೆಯಾಗು ತ್ತಿರುವುದಲ್ಲದೆ ಮೀನುಗಾರರ ಜೀವಗಳನ್ನು ಆಪೋಶನ ತೆಗೆದುಕೊಳ್ಳುವ ಮೂಲಕ ಮರಣ ಮೃದಂಗ ಬಾರಿಸುತ್ತಿದೆ.
7-8 ವರ್ಷ ಗಳಿಂದ ಸಮ ರ್ಪಕವಾಗಿ ಹೂಳೆ ತ್ತದೇ ಇರು ವುದ ರಿಂದ ದಿನದಿಂದ ದಿನಕ್ಕೆ ಸಮಸ್ಯೆ ಗಂಭೀರವಾಗುತ್ತಿದೆ.
ಮರಣ ಗುಂಡಿ
ಮೀನುಗಾರರರಿಗೆ ಸಮುದ್ರ ಕ್ಕಿಂತ ಬಂದರು ಹೆಚ್ಚು ಅಪಾಯ ಕಾರಿ ಎಂದೆನಿಸಿದೆ. ನಿಲ್ಲಿಸಿರುವ ಬೋಟಿ ನಿಂದ ಬೋಟಿಗೆ ದಾಟುವಾಗ ಆಯ ತಪ್ಪಿ ನೀರಿಗೆ ಬಿದ್ದರೆ ಬದುಕಿ ಉಳಿಯುವ ಧೈರ್ಯ ಇಲ್ಲ. ಆಳೆತ್ತರಕ್ಕೆ ಕೆಸರು ತುಂಬಿಕೊಂಡಿರುವುದರಿಂದ ಬಿದ್ದಾತ ದೇಹ ಮೇಲೆ ಬರಲಾರದ ಸ್ಥಿತಿ ಇದೆ. ನಿರಂತರವಾಗಿ ಜೀವ ಹಾನಿಯಾಗುತ್ತಿದ್ದರೂ ಆಡಳಿತ ಮಾತ್ರ ತೆಪ್ಪಗೆ ಕುಳಿತಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ.
ಎಷ್ಟು ಹೂಳು ತೆರವಾಗಬೇಕು?
1, 2 ಮತ್ತು 3ನೇ ಹಂತದ ಜೆಟ್ಟಿಯಲ್ಲಿ ಹೂಳು ತುಂಬಿಕೊಂಡಿದೆ. ನೀರು ಇಳಿತದ ಸಂದರ್ಭದಲ್ಲಿ ಬೋಟನ್ನು ಒಳಗೆ ತರಲು ಸಾಧ್ಯ ವಾಗುತ್ತಿಲ್ಲ. ಬಾಪುತೋಟ ಪ್ರದೇಶ ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದ್ದು, 1 ಮತ್ತು 2ನೇ ಜೆಟ್ಟಿಯಲ್ಲಿ ಮೀನು ಖಾಲಿ ಮಾಡಿ 3ನೇ ಜೆಟ್ಟಿಗೆ ಬೋಟುಗಳು ತೆರಳಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಮಲ್ಪೆ ಬಂದರಿನಲ್ಲಿ ದೊಡ್ಡ ಗಾತ್ರದ ಬೋಟ್‌ಗಳೇ ಇದ್ದು, ಅವುಗಳ 3 ಮೀಟರ್ ಭಾಗ ನೀರಿ ನಲ್ಲಿ ಮುಳು ಗಿ ರು ತ್ತ¤ದೆ. ಮತ್ತೂ ಎರಡೂವರೆ ಮೀ.ನಷ್ಟು ಆಳದ ವರೆಗೆ ಹೂಳೆತ್ತಿದರೆ ಮಾತ್ರ ಸಂಚಾರ ಸುಗಮವಾದೀತು ಎನ್ನುತ್ತಾರೆ ಮೀನುಗಾರರು.
ಅಧಿಕಾರಿಗಳೇ ಜೀವ ಉಳಿಸಿ
ಇಲ್ಲಿ 5 ವರ್ಷಗಳಲ್ಲಿ 100ಕ್ಕೂ ಅಧಿಕ ಮಂದಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ತುಂಬಿರುವ ಹೂಳಿನ ಅಡಿಗೆ ಹೋದವರು ಮೇಲೆ ಬರುವ ಸಾಧ್ಯತೆ ಕಡಿಮೆ. ಎರಡು ತಿಂಗಳ ಅವಧಿಯಲ್ಲೇ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜೆಟ್ಟಿಯಲ್ಲಿ ಕೆಟ್ಟುನಿಂತ ಹಲವಾರು ಬೋಟುಗಳಿವೆ. ಅವುಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ಜತೆಗೆ ಶೀಘ್ರ ಹೂಳೆತ್ತಿದರೆ ಮೀನುಗಾರರ ಪ್ರಾಣ ಉಳಿಸಬಹುದು ಎನ್ನುತ್ತಾರೆ ಮುಳುಗು ತಜ್ಞ ಈಶ್ವರ ಮಲ್ಪೆ. .
ಇಲ್ಲಿ ಸಾಕಷ್ಟು ಅವಘಡಗಳು ಆಗುತ್ತಲೇ ಇವೆ. ಹಲವು ಬಾರಿ ಮನವಿ ಸಲ್ಲಿ ಸ ಲಾ ಗಿ ತ್ತು. ಇದೀಗ ಅನುದಾನ ಬಿಡುಗಡೆಯಾಗಿದೆ. ಅತೀ ಶೀಘ್ರದಲ್ಲಿ ಮೀನುಗಾರರ ಸಮಸ್ಯೆಯನ್ನು ಬಗೆಹರಿಸಬೇಕು.
– ದಯಾನಂದ ಕೆ. ಸುವರ್ಣ, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ
ಹೂಳೆತ್ತಲು ಸರಕಾರದ ಅನುಮೋದನೆ ಸಿಕ್ಕಿದೆ. 3 ಕೋ.ರೂ. ಅನುದಾನ ದೊರಕಿದೆ. ಚನೆಲ್ ಮತ್ತು 3 ಹಂತದ ಜೆಟ್ಟಿಗಳಲ್ಲಿ ಹೂಳೆತ್ತುವಿಕೆ ನಡೆಯಲಿದೆ. 2 ತಿಂಗಳೊಳಗೆ ಎಲ್ಲ ಪ್ರಕ್ರಿಯೆ ನಡೆದು ಕಾಮಗಾರಿ ಆರಂಭವಾಗಲಿದೆ.
– ಉದಯ ಕುಮಾರ್, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್, ಬಂದರು ಇಲಾಖೆ
ಇದನ್ನೂ ಓದಿ : ಒಂದು ದಿನದ ಮಟ್ಟಿಗೆ ಕ್ರೀಡಾ ಅಧಿಕಾರಿಗಳಾದ ಉಭಯ ಜಿಲ್ಲೆಯ ವಿದ್ಯಾರ್ಥಿಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.