ಮಲ್ಪೆ: ಸಾರ್ವಜನಿಕ ಶೌಚಾಲಯ ಕೊರತೆ, ಬಗೆಹರಿಯದ ಸಮಸ್ಯೆ

ಬಸ್‌ ನಿಲ್ದಾಣ, ನಗರದ ಪ್ರಮುಖ ಸ್ಥಳಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಮನವಿ

Team Udayavani, May 11, 2022, 12:57 PM IST

toilet

ಮಲ್ಪೆ: ಪ್ರಮುಖ ವಾಣಿಜ್ಯ ಕೇಂದ್ರ ಹಾಗೂ ಪ್ರವಾಸಿ ತಾಣವಾಗಿ ಬೆಳೆಯುತ್ತಿರುವ ನಗರ ಮಲ್ಪೆಯಲ್ಲಿ ಸಾರ್ವಜನಿಕ ಶೌಚಾಲಯದ ಸಮಸ್ಯೆ ಕಳೆದ ಹಲವಾರು ವರ್ಷದಿಂದ ಕಾಡುತ್ತಿದೆ.

ನಗರ ಪ್ರದೇಶದಲ್ಲಿನ ನಾಗರಿಕರ ಸೌಲಭ್ಯದ ದೃಷ್ಟಿಯಿಂದ ನಗರದಲ್ಲಿ ಲಭ್ಯವಿರಲೇ ಬೇಕಾದ ಪ್ರಾಥಮಿಕ ಅಗತ್ಯತೆಗಳಲ್ಲಿ ಶೌಚಾಲಯ ಪ್ರಮುಖ ವಾದುದು. ಹೊರ ಊರುಗಳಿಂದ ಅಗಮಿಸುವ ಜನತೆ ಮಲ್ಪೆ ಬಸ್‌ ನಿಲ್ದಾಣದಲ್ಲಿ ಶೌಚಗೃಹ ಹುಡುಕುವುದರಲ್ಲೆ ಸುಸ್ತಾಗುತ್ತಾರೆ. ಅನಿವಾರ್ಯವಾಗಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವ ಪರಿಸ್ಥಿತಿ ಇದೆ.

17 ವರ್ಷಗಳ ಹಿಂದೆ ಬಸ್‌ ನಿಲ್ದಾಣದ ಬಳಿ ಸ್ಥಳೀಯ ಸಂಸ್ಥೆಯೊಂದರ ನೆರವಿನಿಂದ ಚಿಕ್ಕದಾದ ಒಂದು ಶೌಚಾಲಯ ನಿರ್ಮಾಣವಾಗಿತ್ತು. ಕ್ರಮೇಣ ಅಲ್ಲಿನ ಕಟ್ಟಡವೂ ತೆರವಾಗಿ ಶೌಚಾಲಯವೂ ಇಲ್ಲದಂತಾಯಿತು. ಮಲ್ಪೆ ವ್ಯವಹಾರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಕಂಡರೂ, ನಗರದ ಬೆಳವಣಿಗೆಯ ಜತೆಗೆ ಕೆಲವೊಂದು ಆವಶ್ಯಕತೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಮಲ್ಪೆ ಮೀನುಗಾರಿಕಾ ಬಂದರಿನ ಒಳಗೆ ಬಿಟ್ಟರೆ ನಗರದ ಸುತ್ತಮುತ್ತ ಎಲ್ಲೂ ಶೌಚಾಲಯದ ವ್ಯವಸ್ಥೆ ಇಲ್ಲ. ಜನರು ಕಣ್ಣು ತಪ್ಪಿಸಿ ಹತ್ತಿರ ಕಟ್ಟಡದ ಮರೆಯಲ್ಲಿಯೋ ಅಥವಾ ಚರಂಡಿ ಬದಿಯೋ ಮೂತ್ರ ವಿಸರ್ಜಿಸಿ ನಿರಾಳರಾದರೆ, ಮಹಿಳೆಯರ ಸಂಕಷ್ಟವನ್ನಂತೂ ಹೇಳತೀರದು.

ಖಾಲಿ ಜಾಗ ಇಲ್ಲ

ಮಲ್ಪೆ ಮುಖ್ಯ ಬಸ್‌ ನಿಲ್ದಾಣದ ಸಮೀಪ ಎಲ್ಲೂ ಸರಕಾರಿ ಖಾಲಿ ಜಾಗ ಇಲ್ಲ. ಜಾಗ ಇದ್ದರೆ ಮಾಡುವ ಯೋಜನೆ ಇದೆ. ಮಲ್ಪೆ ಬೀಚ್‌ನಲ್ಲಿ ನಗರಸಭೆಯ ವತಿಯಿಂದ ಈಗಾಗಲೇ ಶೌಚಾಲಯವನ್ನು ಮಾಡಲಾಗಿದೆ. -ಉದಯ ಶೆಟ್ಟಿ, ಪೌರಾಯುಕ್ತರು, ಉಡುಪಿ ನಗರಸಭೆ

ಪರದಾಡುವಂತಾಗಿದೆ

ಶೌಚಗೃಹ ಇಲ್ಲದೆ ಇರುವುದರಿಂದ ಪರದಾಡುವಂತಾಗಿದೆ. ಸ್ಥಳೀಯಾಡಳಿತ ಜನರ ಸಮಸ್ಯೆಯನ್ನು ಅರಿತು ಬಸ್‌ ನಿಲ್ದಾಣ ಅಥವಾ ನಗರದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಾಣ ಮಾಡಬೇಕಾಗಿದೆ. -ದಿವ್ಯಾ, ಹನುಮಾನ್‌ನಗರ, ಸ್ಥಳೀಯ ಮಹಿಳೆ

ಟಾಪ್ ನ್ಯೂಸ್

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

6-spcl

Story Of Generations: ಪೀಳಿಗೆಗಳ ವೃತ್ತಾಂತ

train

Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Karkala: ಕಾಮಗಾರಿಗೆ ಅಡ್ಡಿ; ಸಾರ್ವಜನಿಕರ ಆಕ್ರೋಶ

2

Kundapura: ಒಂದು ಕರೆಗಾಗಿ 3-4 ಕಿ.ಮೀ. ನಡೆಯಬೇಕು!

5-katapady

Katapady: ಕುಂತಳನಗರ ಭಾರತಿ ಹಿ. ಪ್ರಾ. ಶಾಲೆ; ಶತಮಾನೋತ್ಸ ವ ಸಮಾರಂಭಕ್ಕೆ ಚಾಲನೆ

4-katapady

ಶ್ರೀಕ್ಷೇತ್ರ ಪೇಟೆಬೆಟ್ಟು ಕಟಪಾಡಿ- ಜ.4,5: ಬಬ್ಬುಸ್ವಾಮಿ, ಪರಿವಾರ ದೈವಗಳ ನೇಮೋತ್ಸವ

Court-1

Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.