![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 16, 2024, 12:29 AM IST
ಮಲ್ಪೆ: ಉಡುಪಿಯ ಶ್ರೀಕೃಷ್ಣ ಮತ್ತು ಕರಾವಳಿಯ ಮೀನುಗಾರರದು ಅವಿನಾಭಾವ ಸಂಬಂಧ. ಮೊಗವೀರರು ಶ್ರೀಕೃಷ್ಣ ಮತ್ತು ಮಹಾಲಕ್ಷ್ಮೀ ದೇವರ ಅತೀ ಹೆಚ್ಚು ಪ್ರಿಯರು ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರು ನುಡಿದರು.
ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಶ್ರೀಗಳು ಸೋಮವಾರ ಮಲ್ಪೆಯ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ಗೆ ಭೇಟಿ ನೀಡಿ ಪಾದಪೂಜೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ಮಹಾಲಕ್ಷ್ಮೀ ಬ್ಯಾಂಕ್, ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಹಾಗೂ ಮಲ್ಪೆಯ ವಿವಿಧ ಮೀನುಗಾರ ಸಂಘಟನೆಗಳ ಮುಖಂಡರು ಶ್ರೀಗಳನ್ನು ಗೌರವಿಸಿದರು.
ಮಹಾಲಕ್ಷ್ಮೀ ಬ್ಯಾಂಕಿನ ಅಧ್ಯಕ್ಷರಾಗಿರುವ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಉಚ್ಚಿಲ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಪ್ರಮುಖರಾದ ಆನಂದ ಸಿ. ಕುಂದರ್, ಆನಂದ ಪಿ. ಸುವರ್ಣ, ವಿವಿಧ ಮೀನುಗಾರ ಸಂಘಟನೆಗಳ ಮುಖಂಡರಾದ ನಾಗರಾಜ್ ಸುವರ್ಣ, ಸುಭಾಸ್ ಮೆಂಡನ್, ರಾಮಚಂದ್ರ ಕುಂದರ್, ರತ್ನಾಕರ ಸಾಲ್ಯಾನ್, ಗುಂಡು ಬಿ. ಅಮೀನ್, ಗೋಪಾಲ ಆರ್.ಕೆ., ಕಿಶೋರ್ ಪಡುಕರೆ, ರವಿರಾಜ್ ಸುವರ್ಣ, ಸುಂದರ್ ಪಿ. ಸಾಲ್ಯಾನ್, ಸುರೇಶ್ ಬಿ. ಕುಂದರ್, ಸುಮಿತ್ರಾ ಕುಂದರ್, ಮಹಾಲಕ್ಷ್ಮೀ ಬ್ಯಾಂಕಿನ ನಿದೇರ್ಶಕರಾದ ಎನ್.ಟಿ. ಅಮೀನ್, ವಾಸುದೇವ ಸಾಲ್ಯಾನ್, ವಿನಯ ಕರ್ಕೇರ, ಸುರೇಶ್ ಕರ್ಕೇರ, ಶಿವರಾಮ ಕುಂದರ್, ವನಜಾ ಪುತ್ರನ್, ವನಜಾ ಕಿದಿಯೂರು, ವೆಂಕಟರಮಣ ಕಿದಿಯೂರು, ರಾಮ ನಾಯಕ್, ಮಂಜುನಾಥ್ ಎಸ್.ಕೆ., ಶಶಿಕಾಂತ್ ಪಡುಬಿದ್ರಿ, ಶೋಭೇಂದ್ರ ಸಸಿಹಿತ್ಲು, ಮನೋಜ್ ಎಸ್. ಕರ್ಕೇರ, ಸಂಜೀವ ಶ್ರೀಯಾನ್ ಉಪಸ್ಥಿತರಿದ್ದರು.
ಪೂರ್ಣ ಸಹಕಾರ: ಯಶ್‌ಪಾಲ್
ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಹಿಂದೂ ಧರ್ಮದ ಶ್ರೀಮಂತಿಕೆಯನ್ನು ವಿಶ್ವದೆಲ್ಲೆಡೆ ಪಸರಿಸುತ್ತಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಚತುರ್ಥ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡುತ್ತಿದ್ದು, ಶಾಸಕನಾಗಿ ಅವರ ಪರ್ಯಾಯ ಕಾಲದ ಎಲ್ಲ ಯೋಜನೆಗಳಲ್ಲೂ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.