ಕೋವಿಡ್ 19 ಭೀತಿ; ಪ್ರವಾಸಿಗರಿಲ್ಲದೆ ಟೂರಿಸ್ಟ್ ಬೋಟ್ ಯಾನ ಸ್ಥಗಿತ
ಮಲ್ಪೆ ಸೈಂಟ್‌ಮೇರಿ ದ್ವೀಪ
Team Udayavani, Mar 19, 2020, 6:41 AM IST
ಮಲ್ಪೆ: ಮಲ್ಪೆಯ ಸೈಂಟ್‌ಮೇರಿ ದ್ವೀಪದಲ್ಲಿ ಕಳೆದ ಒಂದು ವಾರದಿಂದ ಪ್ರವಾಸಿಗರು ಬಾರದ ಕಾರಣ ಮಲ್ಪೆ ಸೀವಾಕ್ ಬಳಿ ತೆರಳುವ ಟೂರಿಸ್ಟ್ ಬೋಟುಗಳು ಬುಧವಾರದಿಂದ ಪ್ರಯಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.
ಕೋವಿಡ್ 19 ಭೀತಿಯ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ಕಾಣುತ್ತಿದ್ದ ಐಲ್ಯಾಂಡ್ ಖಾಲಿ ಖಾಲಿಯಾಗಿದ್ದು, ಒಂದು ವಾರದಿಂದ ದ್ವೀಪಕ್ಕೆ ಪ್ರವಾಸಿಗರು ಬರುವುದೇ ನಿಂತು ಹೋಗಿತ್ತು.
ಕೋವಿಡ್ 19 ಆತಂಕ ಶುರುವಾದ ಅನಂತರ ಈ ಮೊದಲೇ ಪ್ರವಾಸವನ್ನು ನಿಗದಿಪಡಿಸಿದ್ದ ಪ್ರವಾಸಿಗರು ತಮ್ಮ ಪ್ರವಾಸವನ್ನು ಮೊಟುಕುಗೊಳಿಸಿದ್ದಾರೆ. ದ್ವೀಪಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಕೇರಳದ ಪ್ರವಾಸಿಗರು 10 ದಿನದ ಮೊದಲೇ ನಿಂತಿದೆ. ಹಾಗಾಗಿ ಇಲ್ಲಿರುವ ಮೂರು ದೊಡ್ಡ ಟೂರಿಸ್ಟ್ ಬೋಟ್‌ಗಳಿಗೆ ದಿನಕ್ಕೆ ಒಂದು ಯಾನವನ್ನು ಮಾಡಲು ಸಾಧ್ಯವಾಗದೇ ಜೆಟ್ಟಿ ಬಳಿ ಲಂಗರು ಹಾಕಿವೆ.
ತಾತ್ಕಾಲಿಕವಾಗಿ ಸ್ಥಗಿತ
ಕೋವಿಡ್ 19 ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಸರಕಾರವು ಕೂಡ ಹೆಚ್ಚು ಜನರು ಸೇರುವ ಪ್ರವಾಸಿ ತಾಣಗಳಿಗೆ ನಿರ್ಬಂಧವನ್ನು ಹೇರುವ ಹಿನ್ನೆಲೆಯಲ್ಲಿ , ಸೀವಾಕ್ ಸಮೀಪ ತೆರಳುವ ಮೂರು ಬೋಟುಗಳ ಯಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ. ಕೋವಿಡ್ 19 ಪ್ರಭಾವ ಕಡಿಮೆಯಾದ ಮೇಲೆ ಮತ್ತೆ ಬೋಟ್ ಯಾನವನ್ನು ಆರಂಭಿಸಲಾಗುವುದು.
-ಗಣೇಶ್ ಅಮೀನ್ ಮಲ್ಪೆ, ರಾಜರಾಜೇಶ್ವರಿ ಟೂರಿಸ್ಟ್ ಬೋಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್ಬಿಐ
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.