ಮಲ್ಪೆ-ತೀರ್ಥಹಳ್ಳಿ: 31 ಕಿ.ಮೀ. ಮಾತ್ರ ಚತುಷ್ಪಥ


Team Udayavani, Oct 6, 2017, 7:00 AM IST

chatushpata.jpg

ಉಡುಪಿ: ಮಲ್ಪೆ - ತೀರ್ಥಹಳ್ಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ಇನ್ನೆರಡು ತಿಂಗಳಲ್ಲಿ ಆರಂಭಗೊಳ್ಳುವ ಮುನ್ಸೂ ಚನೆ ಯಿದೆ. ಒಟ್ಟು 90 ಕಿ.ಮೀ. ವರೆಗಿನ ರಸ್ತೆಯಲ್ಲಿ ಮಣಿ ಪಾಲ, ಉಡುಪಿ, ಹೆಬ್ರಿ ಸಹಿತ 13 ಕಡೆ ಕೇವಲ 31.987 ಕಿ.ಮೀ. ಮಾತ್ರ ಚತುಷ್ಪಥವಾಗಲಿದೆ. 2 ಕಡೆ ಗಳಲ್ಲಿ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದೆ. 

ಮೊದಲ ಹಂತದ ಅಲೈನ್‌ಮೆಂಟ್‌ ಸರ್ವೇ (ಡಿಪಿಆರ್‌) ಮುಗಿದಿದ್ದು, ಕೇಂದ್ರ ಸರಕಾರದಿಂದ ಅಧಿಸೂಚನೆ ಪ್ರಕಟ ಗೊಂಡ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಳ್ಳುವ ಸಾಧ್ಯತೆ ಗಳಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರವು ಗೆಜೆಟ್‌ ಅಧಿಸೂಚನೆಗೆ ಕಾಯು ತ್ತಿದ್ದು, ಅದಕ್ಕಿನ್ನು 2 ತಿಂಗಳು ಬೇಕಾಗ ಬಹುದು ಎನ್ನುತ್ತಿದೆ ಬಲ್ಲ ಮೂಲಗಳು. 

ಎಲ್ಲೆಲ್ಲ  ಚತುಷ್ಪಥ?
ಮಲ್ಪೆಯಿಂದ ತೀರ್ಥಹಳ್ಳಿಯ (ಎನ್‌.ಎಚ್‌. 169ಎ) ವರೆಗಿನ ನಗರ ಪ್ರದೇಶಗಳಲ್ಲಿ ಮಾತ್ರ ಅಂದರೆ 90 ಕಿ.ಮೀ.ನ ರಸ್ತೆಯಲ್ಲಿ 13 ಕಡೆ ಗಳಲ್ಲಿ 31.987 ಕಿ.ಮೀ. ವರೆಗೆ ಚತುಷ್ಪಥ ವಾಗಲಿದೆ. ತೀರ್ಥಹಳ್ಳಿ, ರಂಜದಕಟ್ಟೆ, ಮೇಗರವಳ್ಳಿ, ನಾಲೂರು, ಗುಡ್ಡೆಕೇರೆ, ಹೊಸೂರು, ಆಗುಂಬೆ, ಸೋಮೇಶ್ವರ ಪೇಟೆ, ಸೋಮೇ ಶ್ವರ ಗ್ರಾಮೀಣ, ಹೆಬ್ರಿ, ಪರ್ಕಳ, ಮಣಿಪಾಲ, ಉಡುಪಿ ಯಲ್ಲಿ ಚತುಷ್ಪಥ ರಸ್ತೆ, ಪೆರ್ಡೂರು ಹಾಗೂ ಹಿರಿಯಡ್ಕದಲ್ಲಿ ಬೈಪಾಸ್‌ ನಿರ್ಮಾಣವಾಗಲಿದೆ. ಉಳಿದಂತೆ ಆಗುಂಬೆ ಘಾಟಿ ಪ್ರದೇಶ, ಕೈಮರ, ಉಂತೂರುಕಟ್ಟೆ, ಗುಡ್ಡೆಕೆರೆ, ಹೊಸೂರು, ಆಗುಂಬೆ, ತೀರ್ಥಹಳ್ಳಿ, ರಂಜದ ಕಟ್ಟೆ, ಮುಳಬಾಗಿಲು, ಮೇಗರ ವಳ್ಳಿ, ನಾಲೂರು ಗ್ರಾಮೀಣ ಭಾಗಗಳಲ್ಲಿ ದ್ವಿಪಥ ರಸ್ತೆ ನಿರ್ಮಾಣ ವಾಗಲಿದೆ. 
95 ಹೆಕ್ಟೇರ್‌ ಭೂಸ್ವಾಧೀನ 

ಒಟ್ಟು 24 ಗ್ರಾ.ಪಂ.ಗಳಲ್ಲಿ ರಸ್ತೆ ಹಾದು ಹೋಗಲಿದ್ದು, 95.76 ಹೆಕ್ಟೇರ್‌ ಭೂಸ್ವಾಧೀನ ಪ್ರಕ್ರಿಯೆ ಆಗ ಬೇಕಿದೆ. ಜಾಗ ಕೊಟ್ಟವರಿಗೆ ಒಟ್ಟು 41.47 ಕೋ. ರೂ. ಪರಿಹಾರ ಹಣ ನೀಡಬೇಕಿದೆ. 90 ಕಿ.ಮೀ. ರಸ್ತೆ ಕಾಂಕ್ರೀಟಿಕರಣವಾಗಲಿದ್ದು, ಒಟ್ಟು 636 ಕೋ.ರೂ. ಯೋಜನೆ ಇದಾ ಗಿದೆ. ಪ್ರಾಧಿಕಾರದ ಪ್ರಕಾರ 2019ಕ್ಕೆ ಈ ಕಾಮಗಾರಿ ಪೂರ್ಣವಾಗಲಿದೆ. 

ಮಣಿಪಾಲ ಗುಂಡಿಗಿಲ್ಲ  ಮುಕ್ತಿ
ಚತುಷ್ಪಥ ರಸ್ತೆ ಕಾಮಗಾರಿ ತಡವಾಗಿರುವುದರಿಂದ ಮಣಿಪಾಲ- ಎಂಜೆಸಿ ಸರ್ಕಲ್‌ನಿಂದ ಪರ್ಕಳದವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಹೊಂಡ- ಗುಂಡಿಗಳಲ್ಲಿ ವಾಹನ ಚಲಾಯಿಸುವುದೇ  ಸವಾಲಾಗಿದೆ. ಮಳೆ ಬಂದಾಗ ಕೆಸರಿನ ಸಿಂಚನ, ಮಳೆ ಇಲ್ಲದಿದ್ದಾಗ ಧೂಳುಮಯವಾದ ರಸ್ತೆಯಿಂದ ವಾಹನ ಸವಾರರು, ಪ್ರಯಾಣಿಕರು ಹೈರಾಣಾಗಿದ್ದಾರೆ. ಮಳೆ ನಿಲ್ಲದೆ ಈ ರಸ್ತೆಗೆ ತೇಪೆಯೂ ಇಲ್ಲ. 2 ದಿನವಾದ್ರೂ ಸಂಪೂರ್ಣ ಮಳೆ ಬಿಟ್ಟರೆ, ಹೊಂಡ- ಗುಂಡಿಗಳಿಗೆ ತೇಪೆ ಹಾಕಲಾಗುವುದು ಎನ್ನುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಹೇಳುತ್ತಾರೆ. 

ಟಾಪ್ ನ್ಯೂಸ್

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

Henley Passport Index: Singapore tops: How strong is India’s passport?

Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Manipal: ಡಂಪಿಂಗ್‌ ಯಾರ್ಡ್‌ ಆದ ಮಣ್ಣಪಳ್ಳ!

10

Udupi: ಒಂದೇ ವೃತ್ತ; ಪೊಲೀಸ್‌ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ

7

Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್‌; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!

12-protest

Trasi: ಸಾಂಪ್ರದಾಯಿಕ ‌ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ,‌ ಗೋಪಾಲ ಪೂಜಾರಿ ಭಾಗಿ

6-kaup-3

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

17-uv-fusion

Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.