ಮಲ್ಪೆ ಬೀಚ್‌ನಲ್ಲಿ ವಾರದಿಂದ ಮಕ್ಕಳ ಕಲರವ : ಹೆಚ್ಚಿದ ಮಕ್ಕಳ ಪ್ರವಾಸದ ಬಸ್
Team Udayavani, Dec 11, 2022, 5:30 AM IST
ಮಲ್ಪೆ: ಡಿಸೆಂಬರ್‌ನಲ್ಲಿ ರಾಜ್ಯದ ಬಹುತೇಕ ಶಾಲೆಗಳಲ್ಲಿ ಶಾಲಾ ಪ್ರವಾಸವನ್ನು ಕೈಗೊಂಡಿದ್ದು ಈ ಹಿನ್ನೆಲೆಯಲ್ಲಿ ಮಲ್ಪೆ ಕಡಲತೀರ ಹಾಗೂ ಬೀಚ್‌ಗಳಿಗೆ ಕಳೆದೊಂದು ವಾರದಿಂದ ಜನಸಾಗರವೇ ಕಂಡು ಬಂದಿದೆ.
ವರ್ಷಾಂತ್ಯಕ್ಕೆ ಪ್ರವಾಸಿ ತಾಣಗಳಿಗೆ ಶಾಲೆಗಳಲ್ಲಿ ಅಲ್ಲದೆ ರಾಜ್ಯದ ಬೇರೆ ಬೇರೆ ಕಡೆಗಳಿಂದ ಪ್ರವಾಸಿಗರು ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದಾರೆ. ಡಿಸೆಂಬರ್ 1ರಿಂದ ಮಲ್ಪೆ ಕಡಲತೀರದಲ್ಲಿ ಪ್ರವಾಸಿಗರ ದಂಡೇ ಬಂದಿದೆ. ಬೆಳಗ್ಗೆ 7ಗಂಟೆಯಿಂದಲೇ ವಾಹನಗಳು ಇತ್ತ ಕಡೆಗೆ ಸಾಲು ಸಾಲಾಗಿ ಬರುವುದು ಕಂಡು ಬರುತ್ತದೆ. ಬೆಂಗಳೂರು, ಮೈಸೂರು, ಮಂಡ್ಯ, ಹಾವೇರಿ ಹಾಗೂ ಗದಗ ಸೇರಿದಂತೆ ನೆರೆಯ ರಾಜ್ಯ ಮಹಾರಾಷ್ಟ್ರದಿಂದಲೂ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಮಳೆಗಾಲ ಕಳೆದು ಸಮುದ್ರ ಕೂಡ ಶಾಂತವಾಗಿದೆ. ಮಕ್ಕಳು ಹಿರಿಯರು ಎನ್ನದೇ ಸಮುದ್ರದ ನೀರಲ್ಲಿ ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದಾರೆ.
ಅಗಮಿಸುವ ಬಸ್‌ಗಳ ಸಂಖ್ಯೆ ಹೆಚ್ಚಳದಿಂದ ಪಾರ್ಕಿಂಗ್ ಸಮಸ್ಯೆ ಕೂಡ ಆಗುತ್ತಿದೆ. ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯು ತಲೆದೂರಿದೆ. ಗುರುವಾರ, ಶುಕ್ರವಾರ 100ಕ್ಕೂ ಅಧಿಕ ಬಸ್‌ಗಳು ಅಗಮಿಸಿವೆ ಎನ್ನಲಾಗಿದೆ. ಸಂಜೆಯ ಸಮಯದಲ್ಲಿ ಕಡಲತೀರಕ್ಕೆ ಹೆಚ್ಚಿನ ಜನರು ಭೇಟಿ ನೀಡುತ್ತಾರೆ. ವಾಟರ್ ನ್ಪೋರ್ಟ್ಸ್ ಪ್ರವಾಸಿಗರ ಆಗಮನದ ಬಳಿಕ ಮತ್ತೆ ಆರಂಭಗೊಂಡಿದ್ದು ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸುತ್ತಿದೆ. ಪ್ರವಾಸಿಗರು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಮುದ್ರದಲ್ಲಿ ದೋಣಿ ವಿಹಾರ, ಇನ್ನಿತರ ಸಾಹಸ ಕ್ರೀಡೆಗೆ ಮುಂದಾಗುತ್ತಿದ್ದಾರೆ. ಇತ್ತ ಸೀ ವಾಕ್ ಮತ್ತು ಐಲಾಂಡ್‌ನಲ್ಲೂ ಮಕ್ಕಳ ಸಂಖ್ಯೆ ಕಂಡುಬಂದಿದೆ.
ರಸ್ತೆ ಬದಿಯಲ್ಲೇ ಅಡುಗೆ
ಹೊರ ಜಿಲ್ಲೆಯ ಬಹುತೇಕ ಶಾಲಾ ಪ್ರವಾಸಕ್ಕೆ ಬಂದಿರುವ ಜನ ರಸ್ತೆ ಬದಿಯಲ್ಲೇ ಅಡುಗೆಯನ್ನು ತಯಾರಿಸುತ್ತಾರೆ. ಇದರಿಂದ ಇತರರಿಗೂ ತೊಂದರೆಯಾಗುತ್ತಿರುವುದಲ್ಲದೆ ಅಡುಗೆ ಮಾಡಿದ ತ್ಯಾಜ್ಯಗಳನ್ನು ಅಲ್ಲಿ ಬಿಸಾಕುವುದರಿಂದ ಬೀಚ್‌ನ ಸೌಂದರ್ಯಕ್ಕೂ ದಕ್ಕೆಯಾಗುತ್ತಿದೆ. ಸದಾ ವಾಹನ ಸಂಚಾರದಿಂದಾಗಿ ರಸ್ತೆ ಧೂಳಿನಿಂದ ಕೂಡಿದ್ದಾಗಿದ್ದು, ಇಲ್ಲಿ ಅಡುಗೆ ಮಾಡಿ ಮಕ್ಕಳಿಗೆ ನೀಡುತ್ತಿರುವುದು ಆರೋಗ್ಯಕ್ಕೂ ಹಾನಿಕಾರಕವಾಗಿದೆ. ಪ್ರವಾಸದ ಆಯೋಜಕರು ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕು ಎಂದು ಬೀಚ್ ಅಭಿವೃದ್ಧಿ ಸಮಿತಿಯ ನಿರ್ವಾಹಕ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ನಿರಂತರ ಮಕ್ಕಳ ಶಾಲಾ ಪ್ರವಾಸದ ಬಸ್‌ಗಳು ಅಗಮಿಸುತ್ತಿರುವುದರಿಂದ ಬೀಚ್‌ನಲ್ಲಿ ಪಾರ್ಕಿಂಗ್ ಸಮಸ್ಯೆ ಉಲ್ಬಣಗೊಂಡಿದೆ. ಪ್ರಸ್ತುತ ಸಿಕ್ಕ ಸಿಕ್ಕಲ್ಲಿ ರಸ್ತೆ ಬದಿ ಪಾರ್ಕಿಂಗ್ ಮಾಡಲಾಗುತ್ತದೆ. ಇದರಿಂದ ಇತರ ವಾಹನಗಳ ಸುಗಮ ಸಂಚಾರಕ್ಕೂ ತೊಂದರೆಯಾಗಿದೆ.
– ಮಂಜು ಕೊಳ, ಬೀಚ್ ಅಭಿವೃದ್ಧಿ ಸಮಿತಿಯ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.