ಮಲ್ಯಾಡಿ ರಸ್ತೆ ತಿರುವು: ಕಾದಿದೆ ಅಪಾಯ!
ಸೂಚನ ಫಲಕ, ತಡೆಬೇಲಿ ಇಲ್ಲ
Team Udayavani, Jul 7, 2019, 11:47 AM IST
ಮಲ್ಯಾಡಿಯ ಅಪಾಯಕಾರಿ ರಸ್ತೆ ತಿರುವು.
ತೆಕ್ಕಟ್ಟೆ , ಜು. 6: ಇಲ್ಲಿನ ತೆಕ್ಕಟ್ಟೆ ದಬ್ಬೆಕಟ್ಟೆ ಪ್ರಮುಖ ರಸ್ತೆಯ ಮಲ್ಯಾಡಿ ತಿರುವು ಅಪಾಯಕಾರಿಯಾಗಿರು ವುದರೊಂದಿಗೆ ಯಾವುದೇ ತಡೆಬೇಲಿ, ಸೂಚನ ಫಲಕವಿಲ್ಲದೆ, ಅಪಘಾತವನ್ನು ಆಹ್ವಾನಿಸುತ್ತಿದೆ.
ಹೊಂಡಗಳ ಸಮಸ್ಯೆ:
ರಸ್ತೆ ಪಕ್ಕದಲ್ಲಿ ಆವೆಮಣ್ಣಿನ ಗಣಿಗಾರಿಕೆಯಿಂದ ಉಂಟಾದ ಅಪಾಯಕಾರಿ ಹೊಂಡಗಳಿದ್ದು, ನೀರು ತುಂಬಿದೆ. ಈ ನಡುವೆ ಘನ ವಾಹನಗಳ ಸಂಚಾರ ದಟ್ಟಣೆ ಅಧಿಕವಾಗಿದ್ದು ನಿತ್ಯ ಸಂಚರಿಸುವ ವಿದ್ಯಾರ್ಥಿಗಳು, ಜನರು ಹೆದರಿಕೊಂಡೇ ಸಾಗಬೇಕಾದ ಅನಿವಾರ್ಯತೆ ಇದೆ.
ರಸ್ತೆ ಚೆನ್ನಾಗಿದೆ, ಸುರಕ್ಷೆ ಇಲ್ಲ!:
ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ 980 ಲಕ್ಷ ರೂ. ವೆಚ್ಚದಲ್ಲಿ 10 ಕಿ.ಮೀ. ಉದ್ದಕ್ಕೆ ತೆಕ್ಕಟ್ಟೆ – ದಬ್ಬೆಕಟ್ಟೆ ಸಂಪರ್ಕ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಒಳಚರಂಡಿ ಕಾಮಗಾರಿ ಕೊನೆ ಹಂತ ಬಂದು ತಲುಪಿದೆ.
ಸುವ್ಯವಸ್ಥಿತ ರಸ್ತೆ ನಿರ್ಮಾಣ ಆಗುತ್ತಿದ್ದಂತೆ ಇತ್ತ ವಾಹನಗಳ ವೇಗ ಹೆಚ್ಚಿದ್ದು, ಅದಕ್ಕೆ ಕಡಿವಾಣ ಹಾಕಲು ಜನವಸತಿಯ ಪ್ರದೇಶಗಳಲ್ಲಿ ಹಂಪ್ಸ್ ಹಾಗೂ ಅಪಾಯಕಾರಿ ತಿರುವಿನ ಪ್ರದೇಶಗಳಲ್ಲಿ ಸೂಚನ ಫಲಕ ಅಳವಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.