ಪರಿತ್ಯಕ್ತ ಮಗುವಿಗೆ ಮಮತೆಯ ತೊಟ್ಟಿಲು
Team Udayavani, Sep 1, 2017, 9:05 AM IST
ಉಡುಪಿ: ಹೆತ್ತ ಕಂದಮ್ಮಗಳನ್ನು ಎಲ್ಲೆಲ್ಲೋ ಬಿಟ್ಟು ಹೋಗುವುದನ್ನು ತಡೆಗಟ್ಟಲು ಕೇಂದ್ರ ಸರಕಾರ ಆಸ್ಪತ್ರೆಗಳು, ದತ್ತು ಸ್ವೀಕಾರ ಕೇಂದ್ರಗಳು, ಸ್ಟೇಟ್ ಹೋಮ್ ಮೊದಲಾದೆಡೆ “ಮಮತೆಯ ತೊಟ್ಟಿಲು’ ಇರಿಸಲು ಸೂಚಿ ಸಿದೆ. ಇದೊಂದು ಸಾಮಾನ್ಯ ತೊಟ್ಟಿಲು. ಈ ತೊಟ್ಟಿಲಲ್ಲಿ ಅಂತಹ ಕಂದಮ್ಮಗಳನ್ನು ಬಿಟ್ಟು ಹೋದರೆ ಕಂದಮ್ಮಗಳು ಪಡುವ ಯಾತನೆ ತಪ್ಪಿ, ಅವುಗಳಿಗೆ ಬೇರೆಡೆ ಆಸರೆ ಸಿಗುತ್ತದೆ. ಇದುವರೆಗೆ ಇಂತಹ 172 ಮಕ್ಕಳಿಗೆ ಮಮತೆಯ ತೊಟ್ಟಿಲೇ ಆಗಿರುವ ಸಂತೆಕಟ್ಟೆ ವಸುಂಧರನಗರದ “ಕೃಷ್ಣಾನುಗ್ರಹ’ ದತ್ತುಸ್ವೀಕಾರ ಮತ್ತು ಪಾಲನಾ ಕೇಂದ್ರದಲ್ಲಿ “ಮಮತೆಯ ತೊಟ್ಟಿಲು’ ಯೋಜನೆಯನ್ನು ಗುರುವಾರ ಆರಂಭಿಸಲಾಯಿತು.
ಎಸ್ಪಿ ಡಾ| ಸಂಜೀವ ಪಾಟೀಲ್, ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಸದಸ್ಯೆ ವನಿತಾ ತೋರ್ವಿ, “ತರಂಗ’ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಪೈ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ಕೆ. ನಾರಾಯಣ್, ರೋಟರಿ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ, ಹೈಟೆಕ್ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ| ಟಿ.ಎಸ್. ರಾವ್ ಅವರ ಸಮ್ಮುಖ ಯೋಜನೆಗೆ ಚಾಲನೆ ನೀಡಲಾಯಿತು.
ಧರ್ಮ, ಜಾತಿ, ಮರಳು, ಮಣ್ಣು ಎಂದು ಹೊಡೆ ದಾಡುವ ಜಗತ್ತು ಒಂದೆಡೆಯಾದರೆ, ಆಸರೆಯಿಂದ ವಂಚಿತ ರಾದವರಿಗೆ ಆಸರೆ ಒದಗಿಸುವ ಜಗತ್ತು ಇನ್ನೊಂದೆಡೆ ಇರುತ್ತದೆ ಎಂದು ಡಾ| ಸಂಜೀವ ಪಾಟೀಲ್ ಹೇಳಿದರು.
ಪುಸ್ತಕ ಬಿಡುಗಡೆ
ಇದೇ ಸಂಸ್ಥೆಯಲ್ಲಿ ಕೆಲವು ಕಾಲ ಇದ್ದ ದುರ್ಗಾ ಅವರು ಬರೆದ “ವ್ಯಥೆಯ ಕಥೆ’ ಪುಸ್ತಕವನ್ನು ಬಿಡುಗಡೆಗೊಳಿಸಿದ ಡಾ| ಸಂಧ್ಯಾ ಪೈಯವರು, ಚಿಕ್ಕಪ್ರಾಯದಲ್ಲಿಯೇ ಇಷ್ಟೊಂದು ಅದ್ಭುತವಾಗಿ ಅನುಭವಗಳನ್ನು ಬರೆದ ದುರ್ಗಾ ಮುಂದೊಂದು ದಿನ ಕಾದಂಬರಿಕಾರ್ತಿ, ಕವ ಯತ್ರಿ ಯಾಗುವ ಲಕ್ಷಣ ಹೊಂದಿದ್ದಾಳೆ. ಜಗತ್ತಿನಲ್ಲಿ ಕೆಟ್ಟದ್ದು ಎಷ್ಟು ನಡೆಯುತ್ತದೋ ಅದಕ್ಕಿಂತ ಹೆಚ್ಚು ಒಳ್ಳೆಯದೂ ನಡೆ ಯುತ್ತದೆ ಎನ್ನುವುದಕ್ಕೆ ಕಾರ್ಯಕ್ರಮವೇ ಸಾಕ್ಷಿ ಎಂದರು.
ಟಿ.ವಿ. ರಾವ್ ಪ್ರಶಸ್ತಿ ಪ್ರದಾನ
ಸಾಹಿತ್ಯಪ್ರೇಮಿ ತಲ್ಲೂರು ಶಿವರಾಮ ಶೆಟ್ಟಿ ಮತ್ತು ಬಿ.ಕೆ.ನಾರಾಯಣ್ ಅವರಿಗೆ ಸಂಸ್ಥೆಯ ಸಂಸ್ಥಾಪಕರಾದ ಟಿ.ವಿ.ರಾವ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಮೆರಿಕಕ್ಕೆ ಹೋದ ಮಗು
ಇದುವರೆಗೆ 65 ಮಕ್ಕಳು ಬೇಡಿಕೆ ಸಲ್ಲಿಸಿದ ಪೋಷಕರ ಪಾಲನೆಯಲ್ಲಿದ್ದಾರೆ. ಇತ್ತೀಚಿಗೆ ವಿಶೇಷ ಮಗುವೊಂದು ಅಮೆರಿಕದ ಫಿಲಿಡೆಲ್ಫಿಯಕ್ಕೆ ಹೋಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಶ್ರೀಕೃಷ್ಣ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ| ಉಮೇಶ್ ಪ್ರಭು ಹೇಳಿದರು. ಆಡಳಿತಾಧಿಕಾರಿ ಉದಯ ಕುಮಾರ್ ಸ್ವಾಗತಿಸಿ, ಉಸ್ತುವಾರಿ ಮರಿನಾ ಅಲಿಜಬೆತ್ ವಿವರ ನೀಡಿದರು. ಅವಿನಾಶ್ ಕಾಮತ್ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi: ರೈಲು ಬಡಿದು ವ್ಯಕ್ತಿ ಸಾವು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.