![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Apr 21, 2024, 12:22 AM IST
ಕಾರ್ಕಳ : ಎ. 19ರಂದು ರಾತ್ರಿ ಕೆದಿಂಜೆಯಲ್ಲಿ ವಿದ್ಯುತ್ ಶಾಕ್‌ನಿಂದ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಹಾವೇರಿ ಮೂಲದ ಅನಂತೇಶ್ವರ (29) ಅವರು ಮೃತಪಟ್ಟಿದ್ದಾರೆ.
ರಾತ್ರಿ 9 ಗಂಟೆ ವೇಳೆಗೆ ರಾಡ್ ಕಟ್ಟಿಂಗ್ ಕೆಲಸ ಮಾಡುತ್ತಿರುವ ವೇಳೆ ವಿದ್ಯುತ್ ಶಾಕ್ ಹೊಡೆದಿದೆ. ಸ್ಥಳಿಯರು ಅವರನ್ನು ತತ್‌ಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಶಾಕ್‌ಗೆ ಕಾರಣ ತಿಳಿದು ಬಂದಿಲ್ಲ. ಆದರೆ ಈ ವೇಳೆ ಪರಿಸರದಲ್ಲಿ ಮಳೆಯ ಜತೆ ಗುಡುಗು-ಮಿಂಚು ಕೂಡ ಬರುತ್ತಿತ್ತು ಎನ್ನಲಾಗಿದೆ. ಈ ವೇಳೆ ವಿದ್ಯುತ್ ಉಪಕರಣ ಬಳಸುವಾಗ ಎಚ್ಚರಿಕೆಯಿಂದಿರುವುದು, ಮುನ್ನೆಚ್ಚರಿಕೆ ವಹಿಸುವುದು ತೀರಾ ಆವಶ್ಯಕವಾಗಿದೆ.
You seem to have an Ad Blocker on.
To continue reading, please turn it off or whitelist Udayavani.