ಮಂಡಳ್ಳಿ: ಚತುಃ ಪವಿತ್ರ ನಾಗಮಂಡಲ ಚಪ್ಪರ ಮುಹೂರ್ತ
Team Udayavani, Apr 1, 2017, 3:20 PM IST
ಕುಂದಾಪುರ: ಕುಂದಾಪುರ ತಾಲೂಕು ಬಿದ್ಕಲ್‌ಕಟ್ಟೆ ಸಮೀಪದ ಮಂಡಳ್ಳಿ ಗರಡಿಮನೆಯ ಮೂಲ ನಾಗಬನದಲ್ಲಿ ಎ. 16ರಂದು ನಡೆಯುವ ಚತುಃಪವಿತ್ರ ನಾಗಮಂಡಲೋತ್ಸವದ ಪ್ರಯುಕ್ತ ಚಪ್ಪರ ಮುಹೂರ್ತ ಕಾರ್ಯಕ್ರಮವು ಪ್ರಧಾನ ಅರ್ಚಕ ಕಲ್ಕಟ್ಟೆ ಗೋಪಾಲಕೃಷ್ಣ ಅಡಿಗ ಅವರ ಮಾರ್ಗದರ್ಶನದಲ್ಲಿ ಜರಗಿತು.
ಈ ಸಂದರ್ಭದಲ್ಲಿ ಸುರೇಶ ಬಿ. ಶೆಟ್ಟಿ ಹೊಟೇಲ್ ಮರಾಠ ಥಾಣೆ, ಗರಡಿಮನೆ ಎಚ್. ಭಾಸ್ಕರ ಶೆಟ್ಟಿ, ಕುಟುಂಬದ ಹಿರಿಯರಾದ ಗರಡಿಮನೆ ನಾರಾಯಣ ಶೆಟ್ಟಿ ದಂಪತಿ, ಎಂ. ಗಣೇಶ ಶೆಟ್ಟಿ ಗರಡಿಮನೆ, ವೈ. ಮಂಜುನಾಥ ಶೆಟ್ಟಿ ಯಡಾಡಿ, ನ್ಯಾಯವಾದಿ ಭುಜಂಗ ಶೆಟ್ಟಿ ಗಾವಳಿ, ಶಂಕರ ಶೆಟ್ಟಿ ಬೆರ್ಮಕ್ಕಿ, ಚಂದ್ರಶೇಖರ ಶೆಟ್ಟಿ ಹೆಂಗವಳ್ಳಿ, ಸುಭಾಷ ಶೆಟ್ಟಿ ಗಿಳಿಯಾರು, ಸೀತಾರಾಮ ಶೆಟ್ಟಿ ಮಂಡಳ್ಳಿ, ವಿಶ್ವನಾಥ ಶೆಟ್ಟಿ ಮಂಡಳ್ಳಿ, ಶಿಕ್ಷಕ ರಾಜೀವ ಶೆಟ್ಟಿ ಹಾಡಿಮನೆ, ಚಂದ್ರಶೇಖರ ಶೆಟ್ಟಿ ಚೆನ್ನೆಜಡ್ಡು, ಗ್ರಾಮೀಣ ಬ್ಯಾಂಕ್ ಹಳ್ಳಾಡಿಯ ರಾಜೀವ ಶೆಟ್ಟಿ, ವಿಶ್ವನಾಥ ಶೆಟ್ಟಿ ಗರಡಿಮನೆ, ಬಾಲಚಂದ್ರ ಶೆಟ್ಟಿ ಬಸೂÅರು, ನರಸಿಂಹ ಶೆಟ್ಟಿ ಯಡಾಡಿ, ದೀನಪಾಲ್ ಶೆಟ್ಟಿ ಮೊಳಹಳ್ಳಿ, ಮೇರ್ಡಿ ಸತೀಶ ಹೆಗ್ಡೆ, ಅತುಲ್ ಕುಮಾರ್ ಶೆಟ್ಟಿ ಜನ್ನಾಡಿ, ನರಾಡಿ ಬಾಲಕೃಷ್ಣ ಹೆಗ್ಡೆ, ರಾಘವೇಂದ್ರ ಅಡಿಗ ಕಲ್ಕಟ್ಟೆ, ನ್ಯಾಯವಾದಿ ಜಯಚಂದ್ರ ಶೆಟ್ಟಿ, ಶಿವರಾಮ ಉಡುಪ ಸಾಲಿಗ್ರಾಮ ಹಾಗೂ ನಾಗಮಂಡಲ ಉತ್ಸವ ಸಮಿತಿಯ ಸರ್ವ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಎ.11ರಂದು ಬೆಳಗ್ಗೆ 8.30ಕ್ಕೆ ಉಗ್ರಾಣ ಮುಹೂರ್ತ, ಎ.12ರಂದು ಸರ್ಪ ಸಂಸ್ಕಾರ ಕ್ರಿಯಾರಂಭ, ಎ. 15ರಂದು ಸರ್ಪ ಸಂಸ್ಕಾರ ಸಮಾಪನ, ರಾತ್ರಿ ಆಶ್ಲೇಷ ಬಲಿ, ಎ. 16ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಸಂಜೆ 7.30ಕ್ಕೆ ಹಾಲಿಟ್ಟು ಸೇವೆ, ರಾತ್ರಿ 9ಕ್ಕೆ ಚತುಃ ಪವಿತ್ರ ನಾಗಮಂಡಲ ಸೇವೆ ಅನಂತರ ಮಂಡಲ ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರಗಲಿವೆ.
ಎ. 16ರಂದು 11.30ರಿಂದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸುರೇಶ ಶೆಟ್ಟಿ ಶಂಕರನಾರಾಯಣ ಬಳಗದವರಿಂದ ಶಿವ ಪಂಚಾಕ್ಷರಿ ಮಹಿಮೆ ಯಕ್ಷಗಾನ ಜರಗಲಿದ್ದು ಎ. 14ರಂದು ನಾಗಮಂಡಲೋತ್ಸವದ ಹೊರೆಕಾಣಿಕೆಯನ್ನು ದೇವರ ಸನ್ನಿಧಿಗೆ ಸಲ್ಲಿಸಬಹುದೆಂದು ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಡಂಪಿಂಗ್ ಯಾರ್ಡ್ ಆದ ಮಣ್ಣಪಳ್ಳ!
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.