ವಿಭಿನ್ನ ಬೆಳೆಗಳ ಕೃಷಿ ಮಾಡಿ ಮಾದರಿಯಾದ ಮಂದಾರ್ತಿ ಶಂಭುಶಂಕರ ರಾವ್‌

ಸಮಗ್ರ ಬೆಳೆಯೇ ಕೃಷಿ ಯಶಸ್ಸಿನ ಗುಟ್ಟು

Team Udayavani, Dec 21, 2019, 4:41 AM IST

dc-13

ಹೆಸರು : ಕೆ.ಶಂಭುಶಂಕರ ರಾವ್‌
ಏನೇನು ಕೃಷಿ : ಅಡಿಕೆ, ತೆಂಗು, ಗೇರು, ಹಲವು ವಾಣಿಜ್ಯ ಬೆಳೆಗಳು, ಭತ್ತ, ಹೈನುಗಾರಿಕೆ
ಎಷ್ಟು ವರ್ಷ: ಸುಮಾರು 38 ವರ್ಷಗಳಿಂದ
ಕೃಷಿ ಪ್ರದೇಶ: ಸುಮಾರು 14 ಎಕ್ರೆ
ಸಂಪರ್ಕ: 9844299930

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಬ್ರಹ್ಮಾವರ: ಮಂದಾರ್ತಿ ಕಲ್ಲು ದೇವಸ್ಥಾನ ಸಮೀಪ ಬರಡು ಭೂಮಿಯಂತಿದ್ದ ಸುಮಾರು 14 ಎಕ್ರೆ ಜಾಗ ಇಂದು ವಿಭಿನ್ನ ಬೆಳೆಗಳಿಂದ ಸಂಪದ್ಭರಿತವಾಗಿದೆ. ಸಮಗ್ರ ಕೃಷಿಯೇ ಯಶಸ್ಸಿನ ಗುಟ್ಟು ಎನ್ನುವುದನ್ನು ಕಂಡುಕೊಂಡ ಕೆ. ಶಂಭು ಶಂಕರ ರಾವ್‌ ಅವರು ಮಾದರಿ ಎನಿಸಿದ್ದಾರೆ. 1980ರಲ್ಲೇ ಬಿ.ಕಾಂ. ಪದವೀಧರರಾಗಿದ್ದ ಶಂಭು ಶಂಕರ ರಾವ್‌ ಅವರು ಕೃಷಿ ಮೇಲಿನ ಆಸಕ್ತಿ, ವ್ಯಾಮೋಹದಿಂದ ಬರಡು ಭೂಮಿಯಲ್ಲಿ ಕೃಷಿ ಮಾಡುವ ಕಾಯಕದಲ್ಲಿ ತೊಡಗಿದರು.

ಪ್ರಾರಂಭದಲ್ಲಿ ಭತ್ತ ಅಡಿಕೆ, ತೆಂಗಿಗೆ ಪ್ರಾಧಾನ್ಯತೆ ನೀಡಿದರು. ಅನಂತರದ ದಿನಗಳಲ್ಲಿ ಗೇರು, ಕಾಳುಮೆಣಸು, ಕೊಕ್ಕೊ, ಜಾಯಿಕಾಯಿ, ಅಗರ್‌ವುಡ್‌ ಬೆಳೆಸಿದರು. ಜತೆಗೆ ಹೈನುಗಾರಿಕೆ, ದ್ವಿದಳ ಧಾನ್ಯಗಳತ್ತ ಗಮನಹರಿಸಿದರು. ಇತ್ತೀಚೆಗೆ 4 ಎಕ್ರೆ ಜಾಗದಲ್ಲಿ ಮಹಾಗನಿ ನಾಟಿ ಮಾಡಿದ್ದಾರೆ. ಸಾಂಪ್ರದಾಯಿಕ ಕೃಷಿಯ ಜತೆ ವಾಣಿಜ್ಯ, ಅರಣ್ಯ ಬೆಳೆಗಳು ಅನಿವಾರ್ಯವೆಂದು ಅರಿತರು. ಜತೆಗೆ ಹೈನುಗಾರಿಕೆ, ಧಾನ್ಯಗಳನ್ನೂ ಬೆಳೆಯುತ್ತಾರೆ.

ಕೃಷಿ ಪ್ರಪಂಚ
ರಾಯರ ತೋಟದಲ್ಲಿ ವಿಭಿನ್ನ ಬೆಳೆಗಳಿವೆ. ಕಸಿ ಹಲಸು, ಮಾವು, ಬಾಳೆ, ಕೋಕಂ, ಲಿಂಬು, ರಂಬೂಟನ್‌, ಮಾಗುವಾನಿ, ಸಾಗುವಾನಿ, ನಕ್ಷತ್ರ ಹಣ್ಣು, ಅನಾನಸು, ಸೀತಾಫಲ, ಲಕ್ಷ್ಮಣ ಫಲ, ತರಕಾರಿ, ಹಸಿರು ಮೇವು, ಜೇನು ಕುಟುಂಬ ಎಲ್ಲವೂ ಇದೆ. ಮುಂದಿನ ದಿನಗಳಲ್ಲಿ ವೆನಿಲ್ಲಾ, ಫ್ಯಾಷನ್‌ ಫ್ರುಟ್‌, ಶ್ರೀಗಂಧ, ಬೆಣ್ಣೆ ಹಣ್ಣು, ಡ್ರಾಗನ್‌ ಫ್ರುಟ್‌, ಮಲ್ಲಿಗೆ ನಾಟಿ ಮಾಡುವ ಯೋಜನೆ ಹೊಂದಿದ್ದಾರೆ.

ನೀರು ಸಂಗ್ರಹಣೆಗೆ ಪ್ರಾಮುಖ್ಯತೆ
ಕೃಷಿಗೆ ನೀರೇ ಜೀವಾಳ ಎನ್ನುವುದನ್ನು ಅರಿತು ಅಂತರ್ಜಲ ವೃದ್ಧಿಯಲ್ಲಿ ಬಹಳ ವರ್ಷಗಳಿಂದ ಕಾರ್ಯನಿರತರಾಗಿದ್ದಾರೆ. ಎತ್ತರದ ಗೇರು ತೋಟದಲ್ಲಿ ಚಿಕ್ಕ ಚಿಕ್ಕ 600 ಇಂಗುಗುಂಡಿಗಳನ್ನು, ಒಂದು ಬೃಹತ್‌ ಮದಗವನ್ನು ನಿರ್ಮಿಸಿದ್ದಾರೆ. ಮಳೆ ನೀರು ಕೊಯ್ಲು, ಕೊಳವೆ ಬಾವಿ ಜಲ ಮರುಪೂರಣ ನಡೆಸಿದ್ದಾರೆ.

ಮಣ್ಣಿನ ಸಂರಕ್ಷಣೆ
ಕೃಷಿ ಎನ್ನುವುದು ಇಂದು ನಾಳೆಯ ಯೋಚನೆ ಯಾಗಬಾರದು. ಭವಿಷ್ಯದ ಯೋಜನೆಯಾಗಬೇಕು. ಈ ನಿಟ್ಟಿನಲ್ಲಿ ಸಾವಯವ ವಿಧಾನ, ಲಘು ಪೋಷಕಾಂಶ ಬಳಕೆ, ಮಣ್ಣು ಪರೀಕ್ಷೆ, ಬೀಜೋತ್ಪಾದನೆ, ಸಸ್ಯ ಸಂರಕ್ಷಣೆ, ಗೋಬರ್‌ ಗ್ಯಾಸ್‌, ಬಯೋ ಡೈಜೆಸ್ಟರ್‌, ಜೀವಾಣು ಹಾಗೂ ಹಸಿರೆಲೆ ಗೊಬ್ಬರ ಬಳಕೆ, ಪರ್ಯಾಯ ಬೆಳೆ ಅನುಸರಿಸುತ್ತಿದ್ದಾರೆ. ಪುನರ್‌ಪುಳಿ, ಗೇರು ಜ್ಯೂಸ್‌ ತಯಾರಿಸಿ ಮಾರುಕಟ್ಟೆ ಮಾಡುತ್ತಿದ್ದಾರೆ. ಹಲಸಿನ ಉತ್ಪನ್ನಗಳನ್ನು ತಯಾರಿಸುತ್ತಾರೆ. ಟಿಲ್ಲರ್‌, ಬಯೋಮಾಸ್‌ ಡ್ರೈಯರ್‌, ಪವರ್‌ ಸ್ಪ್ರೆಯರ್‌, ಜೀಪ್‌, ಹುಲ್ಲು ಕತ್ತರಿಸುವ, ಕಳೆ ಕೊಚ್ಚುವ ಯಂತ್ರಗಳನ್ನು ಹೊಂದಿದ್ದಾರೆ.

ಪ್ರಶಸ್ತಿ ಪುರಸ್ಕಾರ
ಬೆಂಗಳೂರು ಕೃಷಿ ವಿ.ವಿ.ಯ ಕಾರ್ಪ್‌ ರೈತ ರಾಜ್ಯಪ್ರಶಸ್ತಿ, ಕರ್ನಾಟಕ ಸರಕಾರದ ಕೃಷಿ ಪಂಡಿತ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ, ಕೊಚ್ಚಿಯ ಗೇರು ಮತ್ತು ಕೊಕ್ಕೊ ನಿರ್ದೇಶನಾಲಯದ ಉತ್ತಮ ಬೆಳೆಗಾರ, ಆತ್ಮ ಯೋಜನೆಯಡಿ ತಾಲೂಕು ಉತ್ತಮ ರೈತ, ಕೃಷಿ ವಿವಿಯ ಅಲುಮ್ನಿ, ಗುಜರಾತ್‌ನಲ್ಲಿ ನಡೆದ ವಿಶ್ವ ಕೃಷಿ ಸಮ್ಮೇಳನದಲ್ಲಿ ಉತ್ತಮ ಕೃಷಿಕ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. ಅಧ್ಯಯನಕ್ಕಾಗಿ ಚೀನ ಸೇರಿದಂತೆ ಪಂಜಾಬ್‌, ಬೆಂಗಳೂರು, ಶಿವಮೊಗ್ಗ, ಕಾಸರಗೋಡು, ವಿಟ್ಲ ಮೊದಲಾದ ಕಡೆಗಳಿಗೆ ಪ್ರವಾಸ ಮಾಡಿದ್ದಾರೆ.

ಕೃಷಿಯಿಂದ ಆರೋಗ್ಯ, ನೆಮ್ಮದಿ
ಕೃಷಿಯಿಂದ ಸ್ವತಂತ್ರ, ಸ್ವಾವಲಂಬಿ ಜೀವನ ಸಾಧ್ಯ. ಶುದ್ಧ ಗಾಳಿ, ನೀರು, ವಾತಾವರಣದಿಂದ ಉತ್ತಮ ಆರೋಗ್ಯ ಹೊಂದಬಹುದು. ಆದರೆ ಬೆವರು ಸುರಿಸಿ ದುಡಿಯುವ ಛಲ ಬೇಕು. ಕಠಿನ ಶ್ರಮ ಅಗತ್ಯ. ಬೇರೆ ಉದ್ಯೋಗಕ್ಕಿಂತ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲದಂತೆ ಆದಾಯ, ಜೀವನ ಸಾಧ್ಯ. ಔಷಧೀಯ ಹಾಗೂ ಅರಣ್ಯ ಬೆಳೆಗಳಿಗೆ ಭವಿಷ್ಯವಿದೆ. ಸರಕಾರ ನ್ಯಾಯಯುತ, ವೈಜ್ಞಾನಿಕ ದರ ನಿಗದಿಗೊಳಿಸಿದರೆ ಯಾವ ಸಬ್ಸಿಡಿಯೂ ಅಗತ್ಯವಿಲ್ಲ. ಕಾಡು ಪ್ರಾಣಿಗಳ ನಿಯಂತ್ರಣ ಸೇರಿದಂತೆ ಹಲವು ವಿಚಾರಗಳಲ್ಲಿ ಸರಕಾರದ ಧೋರಣೆ ಬದಲಾಗಬೇಕು. ಮುಂದಿನ ದಿನಗಳಲ್ಲಿ ಕೃಷಿ ಆಶಾದಾಯಕ ಹಾಗೂ ಅನಿವಾರ್ಯವಾಗಲಿದೆ.
-ಕೆ. ಶಂಭುಶಂಕರ ರಾವ್‌, ಪ್ರಗತಿಪರ ಕೃಷಿಕ

ಪ್ರವೀಣ್‌ ಮುದ್ದೂರು

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.