Mangaluru-Madgaon ರೈಲು: 2 ಜನರಲ್ ಬೋಗಿ ಸೇರ್ಪಡೆ
Team Udayavani, Nov 8, 2023, 12:07 AM IST
ಉಡುಪಿ: ಮಂಗಳೂರು-ಮಡಗಾಂವ್ ಮಧ್ಯೆ ಸಂಚರಿಸುವ ವಿಶೇಷ ಪ್ಯಾಸಂಜರ್ ರೈಲಿಗೆ ಎರಡು ಜನರಲ್ ಬೋಗಿಯನ್ನು ಸೇರ್ಪಡೆ ಮಾಡುವ ಮೂಲಕ ಕೊಂಕಣ ರೈಲ್ವೇಯು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ.
ರೈಲು ಸಂಖ್ಯೆ 06602/06601 ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ರೈಲು ಸದ್ಯ 14 ಜನರಲ್ ಮತ್ತು 2 ಎಸ್‌ಎಲ್‌ಆರ್ ಬೋಗಿಯೊಂದಿಗೆ ಸಂಚಾರ ಮಾಡುತ್ತಿದೆ. ಇದೀಗ ಈ ರೈಲಿಗೆ 2 ಜನರಲ್ ಬೋಗಿಯನ್ನು ಶಾಶ್ವತ ವ್ಯವಸ್ಥೆಯಡಿ ಸೇರಿಸಲಾಗಿದ್ದು ನ. 5ರಿಂದ 18 ಬೋಗಿಯೊಂದಿಗೆ ಸಂಚಾರ ಆರಂಭಿಸಿದೆ.
ರೈಲು ಸಂಚಾರ ವ್ಯತ್ಯಯ
ಉಡುಪಿ: ಕುಮಟಾ-ಭಟ್ಕಳ-ರತ್ನಗಿರಿ ಮಧ್ಯೆ ಹಳಿ ನಿರ್ವಹಣೆ ಕಾಮಗಾರಿ ನಡೆಯುತ್ತಿರುವುದರಿಂದ ನ. 8ರಂದು ಹೊರಡುವ ಬೆಂಗಳೂರು-ಮುರ್ಡೇಶ್ವರ ಎಕ್ಸ್‌ಪ್ರೆಸ್ (16585) ಭಟ್ಕಳ ಮತ್ತು ಮುರ್ಡೇಶ್ವರ ಮಧ್ಯೆ ಸಂಚರಿಸುವುದಿಲ್ಲ. ನ. 9ರಂದು ಮುರ್ಡೇಶ್ವರ-ಬೆಂಗಳೂರು
ಎಕ್ಸ್‌ಪ್ರೆಸ್ ರೈಲು (16586) ಮುರ್ಡೇಶ್ವರದ ಬದಲು ಭಟ್ಕಳ ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದೆ.
ಹಾಗೆಯೇ ಕೊಚುವೇಲಿ-ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ರೈಲು (22114) ನ. 9ರಂದು ಭಟ್ಕಳ ನಿಲ್ದಾಣದಲ್ಲಿ ಸುಮಾರು 20 ನಿಮಿಷ ನಿಲ್ಲಲಿದೆ. ನ. 9ರಂದು ಹೊರಡುವ ತಿರುವನಂತಪುರ ಸೆಂಟ್ರಲ್-ಲೋಕಮಾನ್ಯ ತಿಲಕ್ ನೇತ್ರಾವತಿ ಎಕ್ಸ್‌ಪ್ರೆಸ್ (16346) ರೈಲು ಉಡುಪಿ ಮತ್ತು ಕಂಕಾವಳಿ ನಿಲ್ದಾಣದ ಮಧ್ಯೆ ಸುಮಾರು ಎರಡೂವರೆ ಗಂಟೆ ನಿಲ್ಲಲಿದೆ ಎಂದು ಕೊಂಕಣ ರೈಲ್ವೇ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.