ಹಣ್ಣಿನ ರಾಜನಿಗೆ ಪ್ರಾಧಾನ್ಯ ಕುಸಿತ : ಮಾವು ಬೆಳೆಗೆ ಪೂರಕವಲ್ಲದ ವಾತಾವರಣ

ಅಡಿಕೆ ಬೆಳೆಯತ್ತ ಹೆಚ್ಚಿದ ಒಲವು

Team Udayavani, Mar 21, 2022, 3:16 PM IST

ಹಣ್ಣಿನ ರಾಜನಿಗೆ ಪ್ರಾಧಾನ್ಯ ಕುಸಿತ : ಮಾವು ಬೆಳೆಗೆ ಪೂರಕವಲ್ಲದ ವಾತಾವರಣ

ಉಡುಪಿ : ಜಿಲ್ಲೆಯಲ್ಲಿ ಹಣ್ಣಿನ ರಾಜ ಮಾವಿನ ಬೆಳೆಗೆ ಪ್ರಾಧಾನ್ಯ ಕುಸಿತವಾಗುತ್ತಿದೆ. ಕೆಲವೇ ಸಂಖ್ಯೆಯಲ್ಲಿ ಬೆಳೆಯುತ್ತಿದ್ದ ಕೃಷಿಕರೂ ಸಹ ಇತರೆ ವಾಣಿಜ್ಯ ಬೆಳೆಗೆ ಆಸಕ್ತಿ ವಹಿಸಿದ್ದಾರೆ. ಈ ಮೊದಲೇ ಕರಾವಳಿ ವಾತಾವರಣ ಮಾವು ಬೆಳೆಗೆ ಸೂಕ್ತವಾಗಿಲ್ಲ. ಅದರಲ್ಲಿಯೂ ಬೆರಳೆಣಿಕೆಯಲ್ಲಿ ಕೃಷಿಕರು ಮಾವು ಬೆಳೆಯುತ್ತಿದ್ದರು.

ಕರಾವಳಿ ಕೃಷಿಕರಿಗೆ ಮಾವು ಪ್ರಮುಖ ಆದಾಯದ ಬೆಳೆಯಲ್ಲದಿದ್ದರೂ, ಹಲವು ವರ್ಷಗಳಿಂದ ದೊಡ್ಡ ಮತ್ತು ಸಣ್ಣ ರೈತರು ಇಷ್ಟ ಪಟ್ಟು ಮಾವು ಬೆಳೆಯುತ್ತಿದ್ದಾರೆ. ಸಮಗ್ರ ಕೃಷಿ ಪದ್ಧತಿಯಲ್ಲಿ ಕಿರು ಆದಾಯದ ಮೂಲವಾಗಿಯೂ ಮಾವು ಗುರುತಿಸಿಕೊಂಡಿದೆ. ನಗರ ಪ್ರದೇಶದ ಮನೆಯಿಂದ ಹಿಡಿದು ಗ್ರಾಮೀಣ ಭಾಗ ದಲ್ಲಿಯೂ ಮಾವು ಬೆಳೆಯುತ್ತಾರೆ.

ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆ ಅಂದಾಜಿನಂತೆ 2017- 18ನೇ ಸಾಲಿನಲ್ಲಿ 976 (ಮ್ಯಾನ್ಯುವಲ್‌ ಸಮೀಕ್ಷೆ) ಹೆಕ್ಟೇರ್‌ ಭೂಮಿ ಯಲ್ಲಿ ಮಾವು ಬೆಳೆಯಲಾಗುತ್ತಿತ್ತು. ಇತ್ತೀಚೆಗಿನ ಬೆಳೆ ಸಮೀಕ್ಷೆ ದತ್ತಾಂಶ ವರದಿಯಂತೆ 440 ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗುತ್ತಿದೆ. 22 ಸಾವಿರ ಹೆಕ್ಟೇರ್‌, 26 ಸಾವಿರ ಹೆಕ್ಟೇರ್‌ ತೆಂಗು ಬೆಳೆಯುವ ಜಿಲ್ಲೆಯಲ್ಲಿ ಮಾವು ಬೆಳೆಗೆ ಕನಿಷ್ಠ ಆದ್ಯತೆ ನೀಡಲಾಗಿದೆ. ಕೆಲವು ರೈತರು ಮಾವು ಬೆಳೆ ಬಿಟ್ಟು ಅಡಿಕೆ ಬೆಳೆಯತ್ತ ಮನಸ್ಸು ಮಾಡಿದ್ದಾರೆ. ಇಲಾಖೆ ಲೆಕ್ಕಾಚಾರ ಪ್ರಕಾರ ಜಿಲ್ಲೆಯಲ್ಲಿ ನಾಲ್ಕೈದು ವರ್ಷಗಳ ಹಿಂದೆ ಪ್ರತೀ ಹೆಕ್ಟೆರ್‌ಗೆ ಸರಾಸರಿ 18.45 ಟನ್‌ ಮಾವು ಇಳುವರಿಯಾಗುತ್ತಿತ್ತು. ಇತ್ತೀಚೆಗೆ ಈ ಪ್ರಮಾಣ ಶೇ.30ರಷ್ಟು ಕುಸಿತವಾಗಿದೆ. ಪ್ರಸಕ್ತ ಸಾಲಿನಲ್ಲಿಯೂ ಹೇಳಿಕೊಳ್ಳುವಂತ ಇಳುವರಿ ಬಂದಿಲ್ಲ. ಕೆಲವು ಕಾಯಿ ಬರುವುದು ತಡವಾಗಿದ್ದು, ಇನ್ನೊಂದು ಮಳೆ ಬಂದರೆ ಅದರ ಕಥೆಯೂ ಮುಗಿದಂತೆ ಎನ್ನುತ್ತಾರೆ ಬೆಳೆಗಾರರು.

ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ತಮ ಆದಾಯ
ಉಡುಪಿ ತೋಟಗಾರಿಕೆ ಕ್ಷೇತ್ರದಲ್ಲಿ ಪುನಶ್ಚೇತನ ಕಾರ್ಯದ ಮೂಲಕ ಮಾವು ಬೆಳೆಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಇಲಾಖೆಗೆ ಇಲ್ಲಿನ ಮಾವಿನ ಮರಗಳು ಉತ್ತಮ ಆದಾಯ ಮೂಲವಾಗಿದೆ. 2021ಕ್ಕಿಂತ ಆದಾಯ ಹೆಚ್ಚು ಬಂದಿದೆ. ಜಿಲ್ಲೆಯ 4 ತೋಟಗಾರಿಕೆ ಕ್ಷೇತ್ರದಲ್ಲಿ 2021ರ ಆದಾಯ 4.37 ಲಕ್ಷ ರೂ., ಇದ್ದರೆ ಈ ಸಾಲಿನ ಆದಾಯ 4.85 ಲಕ್ಷ ರೂ. ಬಂದಿದೆ. 2022ರ ಸಾಲಿನಲ್ಲಿ ಉಡುಪಿ ಶಿವಳ್ಳಿ ದೊಡ್ಡಣಗುಡ್ಡೆ 1.74 ಲಕ್ಷ ರೂ., ಕಾರ್ಕಳ ರಾಮಸಮುದ್ರ 71 ಸಾವಿರ ರೂ., ಕುಕ್ಕುಂದೂರು 1.10 ಲಕ್ಷ ರೂ., ಕುಂದಾಪುರ ಕುಂಭಾಸಿ 73 ಸಾವಿರ ರೂ., ಕೇದೂರು ತೋಟಗಾರಿಕೆ ಕ್ಷೇತ್ರದಲ್ಲಿ 56 ಸಾವಿರ ರೂ., ಆದಾಯ ಬಂದಿದೆ ಎಂದು ಇಲಾಖೆ ಸಹಾಯಕ ನಿರ್ದೇಶಕ ನಿದೀಶ್‌ ತಿಳಿಸಿದ್ದಾರೆ.

ಇದನ್ನೂ ಓದಿ : ಸ್ವಿಸ್ ಓಪನ್ ಸೂಪರ್ 300 ಸರಣಿಯಿಂದ ಹಿಂದೆ ಸರಿದ ಲಕ್ಷ್ಯ ಸೇನ್‌

ಮರಗಳ ಗುತ್ತಿಗೆ
ಜಿಲ್ಲೆಯಲ್ಲಿ ಹೆಚ್ಚಾಗಿ ಬೆನೆಟ್‌ ಅಪೂಸ್‌ ಮಾವು ಬೆಳೆಯಲಾಗುತ್ತದೆ. ಅದರ ಹೊರತಾಗಿ ತೋತಾಪುರಿ ಹಣ್ಣಿಗೆ ಸ್ಥಾನವಿದೆ. ಎಪ್ರಿಲ…, ಮೇ ತಿಂಗಳಲ್ಲಿ ಮಾವು ಕಟಾವಿಗೆ ಜನ ಸಿಗುವುದಿಲ್ಲ. ಬಹುತೇಕ ಮಾವು ತೋಪುಗಳಲ್ಲಿ ಬೆಳೆಗಾರರೆ ಕಟಾವು ಪ್ರಕ್ರಿಯೆ ನಡೆಸುತ್ತಾರೆ, ಇನ್ನೊಂದೆಡೆ ಮಾರುಕಟ್ಟೆ ಸಮಸ್ಯೆ ರೈತರಿಗೆ ಕಾಡುತ್ತಿದೆ. ದÇÉಾಳಿಗಳೆ ನೇರವಾಗಿ ಬಂದು ಮಾವು ಕೊಡುವಂತೆ ಬೇಡಿಕೆ ಇಡುತ್ತಾರೆ. ಸಾಗಾಟ ಇನ್ನಿತರೆ ಸಮಸ್ಯೆ ಬೇಡವೆಂದು ಹೆಚ್ಚಿನ ಬೆಳೆಗಾರರು ನೇರವಾಗಿ ಮಾರಾಟ ಮಾಡದೆ ದÇÉಾಳಿಗಳಿಗೆ ಮರಗಳನ್ನೇ ಗುತ್ತಿಗೆ ವಹಿಸಿಕೊಡುತ್ತಾರೆ. ಈ ಪ್ರಕ್ರಿಯೆಯಲ್ಲಿ ತಳಿಗಳ ಆಧಾರದಲ್ಲಿ ಬೆಳೆಗಾರರಿಗೆ ಕೆಜಿಗೆ 15ರಿಂದ 20 ರೂ. ಸಿಗುತ್ತದೆ. ಅಥವಾ ಒಂದು ಕಾಯಿಗೆ ದರವನ್ನು ನಿಗದಿ ಮಾಡಲಾಗುತ್ತದೆ.

ಬೆಲೆ, ಬೇಡಿಕೆ ನಿರೀಕ್ಷೆಯಷ್ಟಿಲ್ಲ
ಈ ಹಿಂದೆ ಮಾವು ಬೆಳೆಯುತ್ತಿದ್ದೆವು, ಹೂಬಿಟ್ಟು ಕಾಯಿ ಬಂದಾಗ ಈ ನಡುವೆ ಮಳೆಯಾದರೆ ಹುಳವಾಗಿ ಹಣ್ಣುಗಳು ಉದುರುತ್ತಿದ್ದವು. ಮಾವು ಬೆಳೆಗೆ ಬೇಡಿಕೆ, ಉತ್ತಮ ದರವು ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿರಲಿಲ್ಲ. ಪ್ರಸ್ತುತ ಮಾವು ತೆಗೆದು ಅಡಿಕೆಯನ್ನು ಹಾಕಿದ್ದೇವೆ. ಕೆಲವು ಗಿಡಗಳನ್ನಷ್ಟೇ ಉಳಿಸಿಕೊಂಡಿದ್ದೇವೆ.
– ನಾಗಯ್ಯ ಶೆಟ್ಟಿ, ಚಾರ ಹೆಬ್ರಿ, ಕೃಷಿಕರು

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.