ಮಣಿಪಾಲ: ಅಗ್ನಿಶಾಮಕ ಠಾಣೆಗೆ ಸಿಗದ ಮಂಜೂರಾತಿ
Team Udayavani, Mar 29, 2018, 6:55 AM IST
ಉಡುಪಿ: ಮಣಿಪಾಲದಲ್ಲಿ ಕಟ್ಟಡಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಕೈಗಾರಿಕಾ ಪ್ರದೇಶವೂ ಇದ್ದು, ಕಾರ್ಖಾನೆಗಳೂ ಇವೆ. ಇಲ್ಲೇನಾದರೂ ಅಗ್ನಿ ದುರಂತ ಸಂಭವಿಸಿದರೆ, ತುರ್ತಾಗಿ ಸ್ಪಂದಿಸಬೇಕಾದ ಅಗ್ನಿಶಾಮಕ ಠಾಣೆ ಮಾತ್ರ ಇಲ್ಲಿಲ್ಲ.
ಜಾಗ ಮೀಸಲು, ಆದರೆ ಮಂಜೂರಾತಿ ಇಲ್ಲ
ಮಣಿಪಾಲದ ಎಂಜೆಸಿ ಕಾಲೇಜಿನ ಮುಂಭಾಗದಲ್ಲಿ 1 ಎಕ್ರೆ ಜಾಗವನ್ನು ಅಗ್ನಿಶಾಮಕ ಠಾಣೆಗಾಗಿಯೇ ಕಾಯ್ದಿರಿಸಲಾಗಿದೆ. ಅಗ್ನಿಶಾಮಕ ಇಲಾಖೆಯಿಂದಲೂ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆದರೆ ಸರಕಾರದಿಂದ ಮಂಜೂರಾತಿ ಮಾತ್ರ ಆಗಿಲ್ಲ. ಮಣಿಪಾಲಕ್ಕೆ ಅಗತ್ಯವಿದ್ದರೆ, 8 ಕಿ.ಮೀ. ದೂರದ ಕಿನ್ನಿಮೂಲ್ಕಿಯಿಂದಲೇ ಅಗ್ನಿಶಾಮಕ ವಾಹನಗಳು ಬರಬೇಕಿದೆ. ಅಷ್ಟೊತ್ತಿಗೆ ಸಮಯ ಮೀರಿರುತ್ತದೆ. ಇತ್ತೀಚೆಗೆ ಈಶ್ವರ ನಗರದಲ್ಲಿ ಸಂಭವಿಸಿದ ದುರಂತ ವೇಳೆಯೂ ಹೀಗೆಯೇ ಆಗಿತ್ತು.
ಮಾ. 20ರಂದು ರಾಹುಲ್ ಗಾಂಧಿ ಅವರ ಭೇಟಿಯ ಸ್ಥಳಗಳಿಗೆ, ಎರ್ಮಾಳಿಗೆ ಅಗ್ನಿಶಾಮಕ ವಾಹನ ಕಳುಹಿಸಿ ಕೊಡಲಾಗಿತ್ತು. ಹೀಗಿದ್ದರೂ ತುರ್ತು ಸಂದರ್ಭಕ್ಕೆ ಉಡುಪಿ ಠಾಣೆಯಲ್ಲಿ ವಾಹನವಿತ್ತು. ಕರೆ ಬಂದ ಕೂಡಲೇ ಅದನ್ನು ಕಳುಹಿಸಿಕೊಡಲಾಗಿತ್ತು. ಜೊತೆಗೆ ಕಾರ್ಕಳ ಹಾಗೂ ಪಡುಬಿದ್ರಿಯಲ್ಲಿದ್ದ ವಾಹನವನ್ನೂ ಘಟನಾ ಸ್ಥಳಕ್ಕೆ ಕರೆಸಿಕೊಳ್ಳಲಾಗಿತ್ತು ಎಂದು ಅಗ್ನಿಶಾಮಕ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ತಡವಾದರೂ,ಕ್ಷಿಪ್ರ ಕಾರ್ಯ
ಈಶ್ವರ ನಗರ ಘಟನೆ ಸಂದರ್ಭ 11.30ಕ್ಕೆ ಅಗ್ನಿಶಾಮಕ ಠಾಣೆಗೆ ಮೊದಲ ಕರೆ ಬಂದಿತ್ತು. ಸ್ಥಳಕ್ಕೆ ತಲುಪಿದ ಮೊದಲ 10-15 ನಿಮಿಷದಲ್ಲಿ ಬೆಂಕಿಯನ್ನು ತಹಬಂದಿಗೆ ತರಲಾಗಿತ್ತು. ಆದರೂ ಹೊಗೆ ಹೋಗಲಾಡಿಸಲು ಸ್ವಲ್ಪ ಸಮಯ ತಗುಲಿತು. ಕಿನ್ನಿಮೂಲ್ಕಿಯಿಂದ ಈಶ್ವರನಗರಕ್ಕೆ ತೆರಳಬೇಕಾದರೆ 15ರಿಂದ 20 ನಿಮಿಷ ಬೇಕು. ಸಂಚಾರದ ವೇಳೆ ವಾಹನಗಳು ಅಡ್ಡ ಬಂದರೆ ನಿಧಾನವಾಗುತ್ತದೆ. ತುರ್ತಾಗಿ ಹಾಜರಿದ್ದರೂ ಅಷ್ಟರಲ್ಲೇ ಠಾಣೆಗೆ 20 ಕರೆ ಬಂದಿತ್ತು ಎಂದು ಉಡುಪಿ ಅಗ್ನಿಶಾಮಕ ಅಧಿಕಾರಿ ವಸಂತ ಕುಮಾರ್ ಎಚ್.ಎಂ. ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.