ಮಣಿಪಾಲ-ಅನಂತನಗರ “ವೀ-ಬಜಾರ್’ ಉದ್ಘಾಟನೆ
Team Udayavani, Mar 9, 2019, 12:55 AM IST
ಉಡುಪಿ: ಮಣಿಪಾಲ ಅನಂತನಗರದ ಸಂಖ್ಯಾ ಹೈಟ್ಸ್ ಸಮುಚ್ಚಯದಲ್ಲಿ ಹನುಮಾನ್ ಗ್ರೂಪ್ ಆಪ್ ಕನ್ಸರ್ನ್ ವತಿಯಿಂದ ನೂತನವಾಗಿ ಆರಂಭಿಸಲಾದ ಉತ್ಕೃಷ್ಣ ಗುಣಮಟ್ಟದ ದಿನಬಳಕೆ ಸಾಮಗ್ರಿಗಳ ವಿನೂತನ ಮಳಿಗೆ “ವೀ-ಬಜಾರ್’ (ಇದು ನಮ್ಮ ಅಂಗಡಿ) ಉದ್ಘಾಟನೆ ಸಮಾರಂಭವು ಶುಕ್ರವಾರ ನಡೆಯಿತು.
ಉದ್ಘಾಟನೆ ನೆರವೇರಿಸಿದ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಹಿಂದೆ ದೊಡ್ಡ ದೊಡ್ಡ ನಗರ ಪ್ರದೇಶಗಳಲ್ಲಿ ಮಾತ್ರ ಒಂದೇ ಸೂರಿನಡಿ ಎಲ್ಲ ಬಗೆಯ ಗೃಹೋಪಯೋಗಿ ವಸ್ತುಗಳು ದೊರಕುತ್ತಿದ್ದವು. ಆದರೆ ಪ್ರಸ್ತುತ ಉಡುಪಿ-ಮಣಿಪಾಲದಂತಹ ಭಾಗಗಳಲ್ಲಿ ಇಂತಹ ಮಳಿಗೆಗಳು ಕಾರ್ಯಾಚರಿಸುತ್ತಿದ್ದು, ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗಿದೆ. ಯಾವುದೇ ಬ್ರ್ಯಾಂಡ್ ಅನ್ನು ಮಾರುಕಟ್ಟೆಗೆ ಪರಿಚಯಿಸಿ, ಉತ್ತಮ ಗುಣಮಟ್ಟದ ಮೂಲಕ ಒದಗಿಸಿದಾಗ ಅದು ವಿಶ್ವ ವಿಖ್ಯಾತವಾಗಲು ಸಾಧ್ಯವಿದೆ. ಈ ನೆಲೆಯಲ್ಲಿ ಇದೀಗ ಉದ್ಘಾಟನೆಗೊಂಡ ಈ ಮಳಿಗೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಸಾಮಗ್ರಿಗಳು ಪ್ರಸಿದ್ಧಿ ಪಡೆಯುವುದರೊಂದಿಗೆ ಮಳಿಗೆ ಯಶಸ್ಸು ಹೊಂದಲಿ ಎಂದು ಶುಭ ಹಾರೈಸಿದರು.
ಮಳಿಗೆಯ ಮಾಲಕ ಪಿ. ವಿಲಾಸ್ ನಾಯಕ್ ಮಾತನಾಡಿ, ಕೈಗೆಟಕುವ ದರದಲ್ಲಿ ಆಕರ್ಷಕ ರಿಯಾಯಿತಿಯೊಂದಿಗೆ ನಿತ್ಯ ಬಳಕೆಯ ಎಲ್ಲ ಸಾಮಗ್ರಿಗಳು ದೊರೆಯದೆ ಎಂದರು. ಶಿಲ್ಪಾ ಕೆ. ರಘುಪತಿ ಭಟ್, ಮಣಿಪಾಲ ಮಹಿಳಾ ಸಮಾಜದ ಅಧ್ಯಕ್ಷೆ ವಿದ್ಯಾ ಶೆಣೈ, ಜಿ.ಪಂ. ಸದಸ್ಯರಾದ ಗೀತಾಂಜಲಿ ಸುವರ್ಣ, ಸುನೀತ್ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಮಹಿಳಾ ಮೋರ್ಚಾ ಪ್ರ.ಕಾರ್ಯದರ್ಶಿ ವೀಣಾ ಶೆಟ್ಟಿ, ತಾ.ಪಂ. ಸದಸ್ಯೆ ರಜನಿ ಅಂಚನ್, ನಗರಸಭೆ ಸದಸ್ಯೆ ಕಲ್ಪನಾ ಸುಧಾಮ, ಅಣ್ಣಯ್ಯ ನಾಯಕ್, ಭಜರಂಗ ದಳ ರಾಜ್ಯ ಸಂಚಾಲಕ ಸುನೀಲ್ ಕೆ.ಆರ್., ನಾಗರತ್ನ ವಿಲಾಸ್ ನಾಯಕ್, ಹಿತೈಷಿಗಳು, ಗ್ರಾಹಕರು ಉಪಸ್ಥಿತರಿದ್ದರು.
ಫುಡ್ ಪ್ರೈಸ್ ಇಂಡೆಕ್ಸ್ ಬಿಡುಗಡೆ
2014 ಮತ್ತು 2019ರ ಫುಡ್ ಪ್ರೈಸ್ ಇಂಡೆಕ್ಸ್ ಹೋಲಿಕೆಯ ಮುದ್ರಣದೊಂದಿಗೆ “ಫಾರ್ ಹಂಗರ್ ಫ್ರೀ ಇಂಡಿಯಾ, ಮೋದಿ ಒನ್ಸ್ ಮೋರ್’ ಸಂದೇಶ ನಮೂದಿಸಿದ ಬಿಲ್ಲನ್ನು ಸಾರ್ವಜನಿಕರಿಗೆ ನೀಡುವ ಮೂಲಕ ಸಂಸದರು ಬಿಡುಗಡೆಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.