Manipal: “ನಮ್ಮ ಸಂತೆ’ಗೆ ಉತ್ತಮ ಜನಸ್ಪಂದನೆ
ಇಲ್ಲಿನ 50ಕ್ಕೂ ಹೆಚ್ಚು ಮಳಿಗೆಗಳಲ್ಲಿಯೂ ವ್ಯಾಪಾರ ಪ್ರಕ್ರಿಯೆ ಜೋರಾಗಿತ್ತು
Team Udayavani, Feb 26, 2024, 10:17 AM IST
ಮಣಿಪಾಲ: ಸ್ಥಳೀಯ ಮಾರುಕಟ್ಟೆಯನ್ನು ಉತ್ತೇಜಿಸಿ ಆರ್ಥಿಕತೆಯನ್ನು ಬೆಂಬಲಿಸಲೆಂದು ಉದಯವಾಣಿ ಮತ್ತು ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (ಎಂಐಸಿ) ಸಹಯೋಗದಲ್ಲಿ ಉದಯವಾಣಿ ಪ್ರಧಾನ ಕಚೇರಿ ಬಳಿಯ ಎಂಐಸಿ
ಆವರಣದಲ್ಲಿ ಆಯೋಜಿಸಿದ್ದ “ನಮ್ಮ ಸಂತೆ’ಗೆ ಎರಡನೇ ದಿನ ರವಿವಾರವೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಸಾವಯವ ಉತ್ಪನ್ನಗಳು, ಖಾದಿ, ಜವಳಿ ದಿರಿಸು ಸಹಿತ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಅತ್ಯಂತ ವಿಶಿಷ್ಟವಾಗಿ ಗಮನ ಸೆಳೆದಿದ್ದು, ಉಡುಪಿ, ಮಣಿಪಾಲ, ಪರ್ಕಳ, ಮಲ್ಪೆ ಸಹಿತ ಆಸುಪಾಸಿನ ಜನರು ಭಾಗವಹಿಸಿ ಖರೀದಿ ಮಾಡಿದರು. ಇಲ್ಲಿನ 50ಕ್ಕೂ ಹೆಚ್ಚು ಮಳಿಗೆಗಳಲ್ಲಿಯೂ ವ್ಯಾಪಾರ ಪ್ರಕ್ರಿಯೆ ಜೋರಾಗಿತ್ತು. ವಿವಿಧೆಡೆಗಳಿಂದ ಆಗಮಿಸಿದ್ದ ವ್ಯಾಪಾರಿಗಳು ಅಲಂಕಾರಿಕ, ಗೃಹೋಪಯೋಗಿ, ಖಾದಿ, ಹ್ಯಾಂಡ್‌ಮೇಡ್ ಆಭರಣಗಳ ಮಾರಾಟ ಉತ್ತಮವಾಗಿತ್ತು ಎಂದು
ಅಭಿಪ್ರಾಯಪಟ್ಟರು.
ಪರಿಸರಸ್ನೇಹಿ ಉತ್ಪನ್ನಗಳಿಗೆ ಬೇಡಿಕೆ ಅಧಿಕವಾಗಿತ್ತು. ಮಹಿಳೆಯರು, ಯುವತಿಯರು ಹ್ಯಾಂಡ್‌ಮೇಡ್ ಜುವೆಲರಿಗಳು,
ಕಾಳುಮೆಣಸು, ಹಲಸಿನ ಕಾಯಿಯ ಉತ್ಪನ್ನ, ಮಾವಿನಕಾಯಿ ಉತ್ಪನ್ನ, ಕಣಿಲೆ ಉತ್ಪನ್ನಗಳನ್ನು ಖರೀದಿ ಮಾಡಿದರು.
ಒಣಗಿದ ಹೂ, ಮೊಗ್ಗು, ಎಲೆಗಳಿಂದ ಪ್ರಕೃತಿ, ಪ್ರಾಣಿ, ಪಕ್ಷಿಗಳ ಆಕರ್ಷಕ ಕಲಾಕೃತಿಗಳು, ಆಯುರ್ವೇದಿಕ್ ಉತ್ಪನ್ನಗಳ ವ್ಯಾಪಾರವೂ ಜೋರಾಗಿತ್ತು. ಕುಟುಂಬ ಸಮೇತರಾಗಿ ಬಂದ ಗ್ರಾಹಕರು ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿ ಸಂತೋಷಪಟ್ಟರು. ನಮ್ಮ ಸಂತೆಯಲ್ಲಿ ಫುಡ್‌ಝೋನ್, ಪ್ಲೇಝೋನ್, ಉದಯವಾಣಿ ಸ್ಟಾಲ್ ಜನರನ್ನು ವಿಶೇಷವಾಗಿ
ಆಕರ್ಷಿಸಿತು. ಎರಡು ದಿನಗಳಲ್ಲಿ ಸಾವಿರಾರು ಮಂದಿ ಸಾರ್ವಜನಿಕರು ನಮ್ಮ ಸಂತೆಗೆ ಭೇಟಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
MUST WATCH
ಹೊಸ ಸೇರ್ಪಡೆ
Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.