ಮಣಿಪಾಲ “ಆರೋಗ್ಯ ಕಾರ್ಡ್’ ಜತೆಗೆ “ದಂತ ಕಾರ್ಡ್ ಉಚಿತ’
Team Udayavani, Apr 20, 2017, 3:47 PM IST
ಉಡುಪಿ: ಸಾಮಾನ್ಯ ಜನರಿಗೂ ಕೈಗೆಟಕುವ ದರದಲ್ಲಿ ವೈದ್ಯಕೀಯ ಚಿಕಿತ್ಸೆ ಸಿಗುವಂತಾಗಬೇಕು ಎನ್ನುವ ಸಾಮಾಜಿಕ ಕಳಕಳಿಯ ಉದ್ದೇಶ ಇರಿಸಿಕೊಂಡು ಮಣಿಪಾಲ ಆರೋಗ್ಯ ಕಾರ್ಡ್ ಸದಸ್ಯತ್ವ ಪಡೆದವರಿಗೆ ಆರೋಗ್ಯ ಕಾರ್ಡಿನ ಜತೆಗೆ ಪ್ರಸಕ್ತ ಸಾಲಿನಿಂದ ಉಚಿತವಾಗಿ ದಂತ ಆರೋಗ್ಯ ಕಾರ್ಡುಗಳನ್ನು ಕೂಡ ವಿತರಿಸಲಾಗುತ್ತದೆ. ಈ ಮೂಲಕ ಒಂದು ಕಾರ್ಡಿನ ದರದಲ್ಲಿ 2 ಕಾರ್ಡಿನ ಉಪಯೋಗ ಪಡೆದುಕೊಳ್ಳಬಹುದು ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ಸಹಕುಲಾಪತಿ ಡಾ| ಎಚ್.ಎಸ್. ಬಲ್ಲಾಳ್ ಹೇಳಿದರು.
ಮಣಿಪಾಲ ಆರೋಗ್ಯ ಕಾರ್ಡ್-2017 ಯೋಜನೆಗೆ ಮಣಿಪಾಲದ ಡಾ| ಟಿ.ಎಂ.ಎ. ಪೈ ಸಭಾಂಗಣದಲ್ಲಿ ಬುಧವಾರ ಚಾಲನೆ ನೀಡಿ ಅಲೆವೂರಿನ ಬಾಲಕೃಷ್ಣ ಮತ್ತು ಅವರ ಕುಟುಂಬಿಕರಿಗೆ ಪ್ರಥಮ ಆರೋಗ್ಯ ಕಾರ್ಡ್ ವಿತರಿಸಿ ಅವರು ಮಾತನಾಡಿದರು. ಆರೋಗ್ಯ ಕಾರ್ಡಿನ ಸೇವೆಗೆ 17 ವರ್ಷ ತುಂಬಿದೆ. ಈ ವರ್ಷದ ಸದಸ್ಯತ್ವ ಅಭಿಯಾನ ಜು. 29ರಂದು ಕೊನೆಗೊಳ್ಳಲಿದೆ. 2017ರ ಮೇ 28ರ ಒಳಗೆ ಕಾರ್ಡ್ ಮಾಡಿಸಿದವರಿಗೆ 14 ತಿಂಗಳ ಕಾಲಾವಧಿ ಅಂದರೆ 2017ರ ಜೂ. 1ರಿಂದ 2018ರ ಜು. 31ರ ವರೆಗೆ ಅದರ ಉಪಯೋಗ ಲಭ್ಯವಾಗುತ್ತದೆ. ಕಳೆದ ವರ್ಷ 1.65 ಲಕ್ಷ ಮಂದಿ ಆರೋಗ್ಯ ಕಾರ್ಡಿನ ಸದಸ್ಯರಾಗಿದ್ದರು. 2017ರ ಸಾಲಿನಲ್ಲಿ 2 ಲಕ್ಷದ ಗುರಿಯನ್ನು ಹೊಂದಲಾಗಿದೆ. ಆರೋಗ್ಯ ಕಾರ್ಡಿನ ಸೇವೆಗೆ ವಾರ್ಷಿಕ ರಿಯಾಯಿತಿಗೆ 4 ಕೋ.ರೂ. ವ್ಯಯ ಮಾಡಲಾಗುತ್ತಿದೆ. ಈ ಕಾರ್ಡಿನ ಸೇವೆಯು ಕರಾವಳಿ ಕರ್ನಾಟಕದಲ್ಲಿರುವ ಮಣಿಪಾಲ ಸಮೂಹದ ಎಲ್ಲ ಆಸ್ಪತ್ರೆಗಳಲ್ಲಿ ಲಭಿಸಲಿದೆ ಎಂದರು.
ಡೆಂಟಲ್ ಕಾಲೇಜಿನ ಮುಖ್ಯಸ್ಥೆ ನಿರ್ಮಲಾ ಎನ್. ರಾವ್ ಉಪಸ್ಥಿತರಿದ್ದರು. ವೈದ್ಯಕೀಯ ಅಧೀಕ್ಷಕ ಮತ್ತು ಸಿಇಒ ಡಾ| ಕ| ಎಂ. ದಯಾನಂದ ಸ್ವಾಗತಿಸಿದರು. ಡಾ| ಆನಂದ್ ವೇಣುಗೋಪಾಲ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.