MAHE: ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ ಈಗ ಐಸಿಎಂಆರ್‌ ಸಹಯೋಗದ ಕೇಂದ್ರ

Team Udayavani, Dec 3, 2024, 6:20 AM IST

MAHE: ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ ಈಗ ಐಸಿಎಂಆರ್‌ ಸಹಯೋಗದ ಕೇಂದ್ರ

ಮಣಿಪಾಲ: ಮಾಹೆ ವಿ.ವಿ.ಯ ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿಯು(ಎಂಐವಿ) ಬಯೋ ಮೆಡಿಕಲ್‌ ಸಂಶೋಧನೆ ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ನೀಡಿದ ಗಣನೀಯ ಸಾಧನೆಗೆ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ ಯಿಂದ(ಐಸಿಎಂಆರ್‌) ಐಸಿಎಂಆರ್‌ ಸಹಯೋಗದ ಕೇಂದ್ರ (ಐಸಿಎಂಆರ್‌-ಸಿಸಿಒಇ) ಎಂದು ಗುರುತಿಸಲಾಗಿದೆ.

ಈ ಪ್ರತಿಷ್ಠಿತ ಪದನಾಮವು ವೈರಾಲಜಿ ಸಂಶೋಧನೆಯಲ್ಲಿ ಎಂಐವಿಯ ನಾಯಕತ್ವವನ್ನು ಶ್ಲಾಘಿಸುತ್ತದೆ ಮತ್ತು ಅದರ ಮುಂದುವರಿದ ರೋಗನಿರ್ಣಯದ ಸಾಮರ್ಥ್ಯಗಳು ಮತ್ತು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂತರಶಿಸ್ತೀಯ ಸಹಯೋಗಗಳನ್ನು ಬೆಳೆಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.

ಭಾರತದ ಬಯೋಮೆಡಿಕಲ್‌ ಸಂಶೋಧನ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ರಾಷ್ಟ್ರದ ಸಾರ್ವಜನಿಕ ಆರೋಗ್ಯ ಸವಾಲುಗಳನ್ನು ಪರಿಹರಿಸಲು ನಿರ್ಣಾಯಕ ಕೊಡುಗೆಯಾಗಿ ಎಂಐವಿ ಮುಂಚೂಣಿಯಲ್ಲಿ ನಿಲ್ಲಲಿದೆ.

ಐಸಿಎಂಆರ್‌-ಸಿಸಿಒಇ ಆಗಿ ಗುರುತಿ ಸಿಕೊಳ್ಳುವುದು ವೈರಾಲಜಿ ಕ್ಷೇತ್ರಕ್ಕೆ ವಿಶೇಷ ವಾಗಿ ಹೊಸ ಸಾಂಕ್ರಾಮಿಕ ರೋಗಗಳು, ವೈರಲ್‌ ರೋಗನಿರ್ಣಯ ಮತ್ತು ಲಸಿಕೆ ಅಭಿವೃದ್ಧಿಯ ಅಧ್ಯಯನದಲ್ಲಿ ಎಂಐವಿಯ ಕೊಡುಗೆಗೆ ಸಾಕ್ಷಿ. ಎಂಐವಿ ನಿರ್ದೇಶಕ ಡಾ| ಚಿರಂಜಯ್‌ ಮುಖೋಪಾಧ್ಯಾಯ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಸಂಸ್ಥೆಯು ಸಂಶೋಧನೆ, ರೋಗನಿರ್ಣಯ ಮತ್ತು ಸಹಯೋಗದಲ್ಲಿ ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸಿದೆ.

ಮಾಹೆ ಕುಲಪತಿ ಲೆ| ಜ| ಡಾ| ಎಂ. ಡಿ. ವೆಂಕಟೇಶ್‌ ಮಾತನಾಡಿ, ಮಣಿಪಾಲದ ವೈರಾಲಜಿ ಸಂಸ್ಥೆಯು ಐಸಿಎಂಆರ್‌ ಸಹಯೋಗದ ಶ್ರೇಷ್ಠತೆಯ ಕೇಂದ್ರವಾಗಿ ಗುರುತಿಸಲ್ಪಟ್ಟಿರುವುದು ಬಯೋಮೆಡಿಕಲ್‌ ಸಂಶೋಧನೆ ಮತ್ತು ಪ್ರಗತಿಯಲ್ಲಿನ ನಮ್ಮ ಬದ್ಧತೆಗೆ ಸಾಕ್ಷಿಯನ್ನು ಒತ್ತಿ ಹೇಳುವ ಮಹತ್ವದ ಸಾಧನೆಯಾಗಿದೆ. ಇದು ನಮ್ಮ ಕಠಿನ ಪರಿಶ್ರಮ, ಸಮರ್ಪಣೆ ಮತ್ತು ನಾವೀನ್ಯವನ್ನು ಪ್ರತಿಬಿಂಬಿಸುತ್ತದೆ.

ವೈದ್ಯಕೀಯ ಸಂಶೋಧನೆ ಮತ್ತು ಆರೋಗ್ಯ ಪರಿಹಾರಗಳ ಭವಿಷ್ಯವನ್ನು ರೂಪಿಸುವಲ್ಲಿ ಮಣಿಪಾಲ ಅಕಾಡೆಮಿಯ ನಾಯಕತ್ವವನ್ನು ಬಲಪಡಿಸುತ್ತದೆ ಮತ್ತು ಜಾಗತಿಕ ಆರೋಗ್ಯ ಪ್ರಗತಿಗೆ ಕೊಡುಗೆ ನೀಡಲು ಹೆಮ್ಮೆಪಡುತ್ತೇವೆ. ಸಮಾಜದ ಮೇಲೆ ಶಾಶ್ವತವಾದ ಪರಿಣಾಮವನ್ನು ಬೀರುವ ಸಹಯೋಗಗಳನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಹಾರೈಸಿದರು.

ಟಾಪ್ ನ್ಯೂಸ್

BCCI

BCCI ಮುಂದಿನ ಕಾರ್ಯದರ್ಶಿ ಯಾರು?: ರಾಜ್ಯ ಘಟಕಗಳಲ್ಲಿ ಲೆಕ್ಕಾಚಾರ

Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ

Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ

‌BBK11: ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ.. ಚೈತ್ರಾ ಮಾತಿಗೆ ಶಿಶಿರ್‌ ಗರಂ

‌BBK11: ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ.. ಚೈತ್ರಾ ಮಾತಿಗೆ ಶಿಶಿರ್‌ ಗರಂ

siddanna-2

MUDA case: ಇ.ಡಿ.ಯಿಂದ ಲೋಕಾಯುಕ್ತಕ್ಕೆ ಪತ್ರ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ

1-delhi

We don’t talk; ಧೋನಿ ಜತೆಗಿನ ಮುನಿಸಿನ ಬಗ್ಗೆ ಮಾತನಾಡಿದ ಭಜ್ಜಿ!

Tragedy: ವಾಕಿಂಗ್ ಮುಗಿಸಿ ಬರುವಷ್ಟರಲ್ಲಿ ತಂದೆ, ತಾಯಿ, ಸಹೋದರಿ ಸೇರಿ ಮೂವರ ಹತ್ಯೆ

Tragedy: ವಾಕಿಂಗ್ ಮುಗಿಸಿ ಬರುವಷ್ಟರಲ್ಲಿ ತಂದೆ, ತಾಯಿ, ಸಹೋದರಿಯ ಬರ್ಬರ ಹತ್ಯೆ

Ali Khan Tughlaq: ಮಾದಕ ವಸ್ತು ಕಳ್ಳಸಾಗಣೆ ಪ್ರಕರಣ; ಖ್ಯಾತ ನಟ ಮನ್ಸೂರ್‌ ಅಲಿ ಪುತ್ರ ಬಂಧನ

Ali Khan Tughlaq: ಮಾದಕ ವಸ್ತು ಕಳ್ಳಸಾಗಣೆ ಪ್ರಕರಣ; ಖ್ಯಾತ ನಟ ಮನ್ಸೂರ್‌ ಅಲಿ ಪುತ್ರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Karkala: ಜಾನಪದ ವೈವಿಧ್ಯ ಶಾಲೆ, ಕಾಲೇಜು ಪಠ್ಯದಲ್ಲಿರಬೇಕು

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

Udupi: ಗೀತಾರ್ಥ ಚಿಂತನೆ-113: ತನ್ನ ದೃಷ್ಟಾಂತವನ್ನೇ ಕೊಟ್ಟ ಶ್ರೀಕೃಷ್ಣ

Udupi: ಗೀತಾರ್ಥ ಚಿಂತನೆ-113: ತನ್ನ ದೃಷ್ಟಾಂತವನ್ನೇ ಕೊಟ್ಟ ಶ್ರೀಕೃಷ್ಣ

ತೋಟಗಳಲ್ಲಿ ಗಾಂಜಾ ಬೆಳೆ: ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ

Manipal: ತೋಟಗಳಲ್ಲಿ ಗಾಂಜಾ ಬೆಳೆ: ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ

Kaup: ಜೀರ್ಣೋದ್ಧಾರ ಅತ್ಯದ್ಭುತವಾಗಿ ಕಾಣುತ್ತಿವೆ: ಕಾಳಹಸ್ತೇಂದ್ರ ಶ್ರೀ

Kaup: ಜೀರ್ಣೋದ್ಧಾರ ಅತ್ಯದ್ಭುತವಾಗಿ ಕಾಣುತ್ತಿವೆ: ಕಾಳಹಸ್ತೇಂದ್ರ ಶ್ರೀ

MUST WATCH

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

ಹೊಸ ಸೇರ್ಪಡೆ

BCCI

BCCI ಮುಂದಿನ ಕಾರ್ಯದರ್ಶಿ ಯಾರು?: ರಾಜ್ಯ ಘಟಕಗಳಲ್ಲಿ ಲೆಕ್ಕಾಚಾರ

Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ

Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ

7

Karkala: ಜಾನಪದ ವೈವಿಧ್ಯ ಶಾಲೆ, ಕಾಲೇಜು ಪಠ್ಯದಲ್ಲಿರಬೇಕು

6-

ಮುಂದಿನ ದಿನಗಳಲ್ಲಿ ಭಾರತದ ಪರಿಸ್ಥಿತಿಯೂ ಬಾಂಗ್ಲಾದೇಶ ನಂತೆ ಆಗಲಿದೆ: ಜಿ.ಸೋಮಶೇಖರ್ ರೆಡ್ಡಿ

‌BBK11: ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ.. ಚೈತ್ರಾ ಮಾತಿಗೆ ಶಿಶಿರ್‌ ಗರಂ

‌BBK11: ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ.. ಚೈತ್ರಾ ಮಾತಿಗೆ ಶಿಶಿರ್‌ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.