ಪರಂಪರೆ, ಆಧುನಿಕತೆ ವಿಮರ್ಶಿಸಿದ್ದ ಅನಂತಮೂರ್ತಿ: ಟಿ.ಪಿ. ಅಶೋಕ
Team Udayavani, Sep 8, 2018, 10:06 AM IST
ಉಡುಪಿ: ಯು.ಆರ್. ಅನಂತಮೂರ್ತಿ ತಮ್ಮ ಸಾಹಿತ್ಯದಲ್ಲಿ ಪರಂಪರೆ ಮತ್ತು ಆಧುನಿಕತೆ ಎರಡನ್ನೂ ವಿಮರ್ಶೆಗೊಳಪಡಿಸಿದ್ದರು. ಈ ಮೂಲಕ ತೃತೀಯ ಮಾರ್ಗದ ಹುಡುಕಾಟವೇ ಅವರ ಸಾಹಿತ್ಯದ ಪರಿಭಾಷೆಯಾಗಿದೆ ಎಂದು ಪ್ರೊ| ಟಿ.ಪಿ. ಅಶೋಕ ಪ್ರತಿಪಾದಿಸಿದರು.
ಮಿಲಾಪ್ (ಮಣಿಪಾಲ್ ಇಂಟರ್ ನ್ಯಾಶನಲ್ ಲಿಟರೇಚರ್ ಆ್ಯಂಡ್ ಆರ್ಟ್ಸ್ ಪ್ಲಾಟ್‌ಫಾರಂ), ಎಂಜಿಎಂ ಕಾಲೇಜು ಮತ್ತು ರಾಷ್ಟ್ರಕವಿ ಸಂಶೋಧನ ಕೇಂದ್ರದ ಸಹಯೋಗದಲ್ಲಿ ಎಂಜಿಎಂ ಕಾಲೇಜಿನಲ್ಲಿ ಆಯೋಜಿಸಿರುವ ವಾರ್ಷಿಕ ಸಾಹಿತ್ಯ ಸಮ್ಮೇಳನದಲ್ಲಿ “ಯು.ಆರ್. ಅನಂತಮೂರ್ತಿ: ಸಾಹಿತ್ಯ ಪರಂಪರೆ ಮತ್ತು ಪರಿವರ್ತನೆ’ ಎಂಬ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ| ಎಂ.ಜಿ. ವಿಜಯ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ| ವರದೇಶ ಹಿರೇಗಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ಪುತ್ತಿ ವಸಂತ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಈಶಾನ್ಯ ರಾಜ್ಯಗಳಿಗೂ ಕೇರಳದ ಗತಿ
ಮಿಲಾಪ್ ಸಮ್ಮೇಳನದ ಎರಡನೇ ದಿನ ಈಶಾನ್ಯ ರಾಜ್ಯಗಳ ಸಮಸ್ಯೆಗಳ ಕುರಿತು ಚರ್ಚೆ ನಡೆದು ಅಲ್ಲಿಯೂ ಪ್ರಕೃತಿ ವಿಕೋಪ ನಡೆಯುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತವಾಯಿತು. ಅತಿಥಿಗಳಾಗಿದ್ದ ಪಾಟ್ರಿಸಿಯಾ ಮುಕಿಮ್, ಮಿತ್ರಾ ಪುಕಾನ್ ಮತ್ತು ಪ್ರಸೇನಜಿತ್ ಬಿಶ್ವಾಸ್ ಈಶಾನ್ಯ ರಾಜ್ಯಗಳ ರಾಜಕೀಯ, ಸಾಂಸ್ಕೃತಿಕ, ಜೀವನ ಶೈಲಿಗಳ ಕುರಿತು ಚರ್ಚೆ ನಡೆಸಿ ಅಲ್ಲಿನ ಸಮಸ್ಯೆಗಳನ್ನು ವಿವರಿಸಿದರು.
ಮುಕಿಮ್ ಮಾತನಾಡಿ, ಮೇಘಾ ಲಯದಲ್ಲಿ ಅವೈಜ್ಞಾನಿಕ ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಮುಂದೊಂದು ದಿನ ಕೇರಳ ಪರಿಸ್ಥಿತಿ ಮೇಘಾಲಯಕ್ಕೂ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.