Manipal ಎಂಐಟಿಯಿಂದ ಹೊಸ ಕೋರ್ಸ್
Team Udayavani, Aug 16, 2023, 12:29 AM IST
ಮಣಿಪಾಲ: ಮಾಹೆ ವಿಶ್ವವಿದ್ಯಾನಿಲಯದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಫೈನಾನ್ಸಿಯಲ್ ಸರ್ವಿಸ್ ಟೆಕ್ನಾಲಜಿಯಲ್ಲಿ ಮುಂದಿರುವ ಯುಎಸ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಫ್ಐಎಸ್ ಗ್ಲೋಬಲ್ ಬಿಜಿನೆಸ್ ಸೊಲ್ಯೂಶನ್ಸ್ ಇಂಡಿಯಾ ಪ್ರೈ. ಲಿ. ಜತೆ ಸೇರಿ ಬಿ.ಟೆಕ್. ಕಂಪ್ಯೂಟರ್ ಸೈನ್ಸ್ ಮತ್ತು ಫೈನಾನ್ಸಿಯಲ್ ಟೆಕ್ನಾಲಜಿ ಕೋರ್ಸ್ ಆರಂಭಿಸಿದೆ.
ಎಂಐಟಿ ನಿರ್ದೇಶಕ ಕ| ಅನಿಲ್ ರಾಣ ಮಾತನಾಡಿ, 4 ವರ್ಷದ ಬಿ.ಟೆಕ್. ಕಂಪ್ಯೂಟರ್ ಸೈನ್ಸ್ ಆ್ಯಂಡ್ ಫೈನಾನ್ಸಿಯಲ್ ಟೆಕ್ನಾಲಜಿ ಕೋರ್ಸ್ ಎಫ್ಐಎಸ್ ಸಂಸ್ಥೆಯ ಸಹಯೋಗದಲ್ಲಿ ನಡೆಸಲಿದೆ. ಹ್ಯೂಮ್ಯಾನಿಟಿ ಆ್ಯಂಡ್ ಮ್ಯಾನೇಜ್‌ಮೆಂಟ್, ಕಂಪ್ಯೂಟರ್‌ಸೈನ್ಸ್ ಎಂಜಿನಿಯರಿಂಗ್, ಗಣಿತಶಾಸ್ತ್ರ ವಿಭಾಗ ಒಟ್ಟಾಗಿ ಈ ಕೋರ್ಸ್ ರಚಿಸಲಿದೆ. ಎಐಸಿಟಿಇ ಕೂಡ ಅನುಮತಿ ನೀಡಿದೆ.
ಇದು ದೇಶದಲ್ಲೇ ಮೊದಲು ಆರಂಭ ವಾಗುತ್ತಿರುವ ಕೋರ್ಸ್ ಎಂದರು. ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್, ಎಫ್ಎಸ್‌ಐ ಗ್ಲೋಬಲ್ ಡಿಲವರಿ ಆರ್ಗನೈಜೇಶನ್ ಮುಖ್ಯಸ್ಥ ವಿಶಾದ್ ಗುಪ್ತಾ ಮಾತನಾಡಿ, ಒಡಂಬಡಿಕೆ ಮಹತ್ವ ಮತ್ತು ಅದರಿಂದ ವಿದ್ಯಾರ್ಥಿಗಳಿಗೆ ಆಗುವ ಅನುಕೂಲದ ಬಗ್ಗೆ ತಿಳಿಸಿದರು.
ಮಾಹೆ ಕುಲಸಚಿವ ಡಾ| ಪಿ. ಗಿರಿಧರ್ ಕಿಣಿ, ಸಹ ಕುಲಪತಿ ಡಾ| ನಾರಾಯಣ ಸಭಾಹಿತ್, ಕಾರ್ಪೋರೆಟ್ ರಿಲೇಶನ್ ನಿರ್ದೇಶಕ ಡಾ| ಹರೀಶ್ ಕುಮಾರ್ ಎಸ್., ಎಂಐಟಿ ಜಂಟಿ ನಿರ್ದೇಶಕ ಡಾ| ಸೋಮಶೇಖರ್ ಭಟ್, ಹ್ಯೂಮ್ಯಾನಿಟಿಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥ ಡಾ| ಯೋಗೇಶ್ ಪೈ ಪಿ., ಎಂಐಟಿ ಪ್ಲೇಸ್‌ಮೆಂಟ್ ವಿಭಾಗದ ಸಹ ನಿರ್ದೇಶಕ ಡಾ| ಶ್ರೀರಾಮ ಕೆ.ವಿ. ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.