ಮಣಿಪಾಲ ದೇಶದ ಹೆಮ್ಮೆ: ಪಾಟೀಲ್
ಸುಧಾರಿತ ಯೂರೋಡೈನಾಮಿಕ್ ಪ್ರಯೋಗಾಲಯ ಉದ್ಘಾಟನೆ
Team Udayavani, Aug 5, 2019, 10:04 AM IST
ಉಡುಪಿ: ದೇಶ ಮಣಿಪಾಲದ ಬಗ್ಗೆ ಹೆಮ್ಮೆಪಡುತ್ತಿದೆ. ಏಕೆಂದರೆ ವಿಶ್ವಾದ್ಯಂತ 500ರೊಳಗೆ ಸ್ಥಾನ ಪಡೆದಿ ರುವ ಏಕೈಕ ವಿಶ್ವವಿದ್ಯಾಲಯ ಮಾಹೆ ಮಣಿಪಾಲ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಹೇಳಿದರು. ಅವರು ರವಿವಾರ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸ್ಥಾಪನೆಗೊಂಡಿ ರುವ ಸುಧಾರಿತ ಯೂರೋ ಡೈನಾಮಿಕ್ ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಟಿಎಂಎ ಪೈ ಅವರು ಮಣಿಪಾಲ ಸಮೂಹವನ್ನು ಉತ್ತಮ ಮತ್ತು ಮಾದರಿ ಸಂಸ್ಥೆಯಾಗಿ ರೂಪಿಸಿದರು. ಹೀಗಾಗಿ ಮಣಿಪಾಲ ವಿವಿ ದೂರದೃಷ್ಟಿಯ ನಾಯಕತ್ವ ಮತ್ತು ಶ್ರಮಜೀವಿಗಳನ್ನು ಕೆಲಸಗಾರರನ್ನಾಗಿ ಪಡೆದುಕೊಂಡಿದೆ ಎಂದು ಪಾಟೀಲ್ ಹೇಳಿದರು.
ಯುರೋಡೈನಾಮಿಕ್ ಪ್ರಯೋ ಗಾಲಯವು ಮಣಿಪಾಲದ ಅತ್ಯಾಧುನಿ ಕತೆಗೆ ಹೊಸ ಸೇರ್ಪಡೆ ಎಂದು ಕುಲಪತಿ ಡಾ| ಎಚ್. ವಿನೋದ ಭಟ್ ನುಡಿದರು.
ಸಹ ಕುಲಪತಿ ಡಾ| ಪೂರ್ಣಿಮಾ ಬಿ. ಬಾಳಿಗಾ ಯುರೋಡೈನಾಮಿಕ್ಸ್‌ನ
ಪ್ರಮಾಣಿತ ಕಾರ್ಯವಿಧಾನ ಸೂಚಿ ಬಿಡುಗಡೆ ಮಾಡಿದರು. ಕೆಎಂಸಿಯ ಡೀನ್ ಡಾ| ಶರತ್ ಕೆ. ರಾವ್ ಸ್ವಾಗತಿಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ವಂದಿಸಿದರು. ಡಾ| ಅಕ್ಷಯ ಕೃಪಲಾನಿ ನಿರ್ವಹಿಸಿದರು.
ಮೂತ್ರಾಂಗವ್ಯೂಹದ ಸಂಕೀರ್ಣ ಸಮಸ್ಯೆ ಪರಿಹರಿಸಲು ಈ ಪ್ರಯೋಗಾಲಯ ಸಹಕಾರಿ ಎಂದು ಮೂತ್ರಶಾಸ್ತ್ರ ಮತ್ತು ಮೂತ್ರಪಿಂಡ ಕಸಿ ವಿಭಾಗದ ಮುಖ್ಯಸ್ಥ ಡಾ| ಅರುಣ್ ಚಾವ್ಲಾ ಪ್ರಸ್ತಾವನೆಯಲ್ಲಿ ಹೇಳಿದರು.
“200 ಶ್ರೇಯಾಂಕದೊಳಗೆ ಮಾಹೆ-ಗುರಿ’
ಅಧ್ಯಕ್ಷತೆ ವಹಿಸಿದ್ದ ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್.
ಬಲ್ಲಾಳ್ ಮಾತನಾಡಿ, ಮಣಿಪಾಲ ಆಸ್ಪತ್ರೆಯ ಮೂತ್ರ ಶಾಸ್ತ್ರ ಮತ್ತು ಮೂತ್ರಪಿಂಡ ಕಸಿ ವಿಭಾಗ ದೇಶದಲ್ಲಿಯೇ ಶ್ರೇಷ್ಠವಾಗಿದ್ದು, ಅತ್ಯಾಧು ನಿಕ ಉಪಕರಣಗಳನ್ನು ಹೊಂದಿದೆ. ಜೀವನಶೈಲಿ ಕಾಯಿಲೆಯಿಂದ ಪ್ರಭಾವಿತವಾದ ಅಂಗಗಳಲ್ಲಿ ಮೂತ್ರಪಿಂಡ ಕೂಡ ಒಂದು. ಇದಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ಯುರೋಡೈನಾಮಿಕ್ ಪ್ರಯೋಗಾ ಲಯದ ಸಹಾಯದಿಂದ ಕಂಡು ಹಿಡಿದು ಸೂಕ್ತ ಚಿಕಿತ್ಸೆ ನೀಡಬಹುದು. ಜಾಗತಿಕವಾಗಿ ಮಾಹೆಯನ್ನು ಅಗ್ರ 200 ಶ್ರೇಯಾಂಕಿತ ಸಂಸ್ಥೆಗಳಲ್ಲಿ ಒಂದಾಗಿ ಮಾಡುವುದು ನಮ್ಮ ಉದ್ದೇಶ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.