ಮಣಿಪಾಲ ಕೆಎಂಸಿಯಲ್ಲಿ ಎಂಡೋಸ್ಕೋಪಿ ಸ್ಪಾಂಜ್ ಚಿಕಿತ್ಸೆ : ಇದು ರಾಜ್ಯದಲ್ಲೇ ಮೊದಲು
Team Udayavani, Oct 8, 2022, 2:21 PM IST
ಮಣಿಪಾಲ : ಇಲ್ಲಿನ ಕೆಎಂಸಿ ಮತ್ತು ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗವು ಅನ್ನನಾಳದ ರಂಧ್ರಕ್ಕೆ ಮತ್ತು ಅನಾಸ್ಟೊಮೊಟಿಕ್ ಸೋರಿಕೆ ಸಮಸ್ಯೆಗೆ ಅಪರೂಪದ ಎಂಡೋಸ್ಕೋಪಿ ಸ್ಪಾಂಜ್ (ಎಂಡೋವಾಕ್) ಚಿಕಿತ್ಸೆಯನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ನಡೆಸಿದೆ.
ಶಸ್ತ್ರಚಿಕಿತ್ಸಾ ಅನಾಸ್ಟೊಮೊಸಿಸ್ ವಿಫಲವಾದಾಗ ಮತ್ತು ಶಸ್ತ್ರಚಿಕಿತ್ಸಾ ಸಂಪರ್ಕದಿಂದ ಮರುಸಂಪರ್ಕಿತ ದೇಹದ ಚಾನಲ್‌ನ ವಿಷಯ ಗಳು ಸೋರಿಕೆಯಾದಾಗ ಅನಾಸ್ಟೊ ಮೊಟಿಕ್ ಸೋರಿಕೆ ಸಂಭವಿಸುತ್ತದೆ. ಇದು ಕರುಳಿನ ಛೇದನದ ಶಸ್ತ್ರ ಚಿಕಿತ್ಸೆಯ ಅತ್ಯಂತ ಗಂಭೀರ ತೊಡಕುಗಳಲ್ಲಿ ಒಂದಾಗಿದೆ.
51 ವರ್ಷದ ವ್ಯಕ್ತಿಗೆ ಅನ್ನನಾಳದ ಕ್ಯಾನ್ಸರ್ ಇರುವುದು ಪತ್ತೆಯಾದ ಅನಂತರ ಶಸ್ತ್ರಚಿಕಿತ್ಸೆ ನಡೆಸಿ, ಕೀಮೋಥೆರಪಿ ಮೂಲಕ ಚಿಕಿತ್ಸೆ ನೀಡಲಾಯಿತು. ಒಂದು ವಾರದ ಅನಂತರ ಅವರಲ್ಲಿ ಅನಾಸ್ಟೊಮೊಟಿಕ್ ಡಿಹಿಸೆನ್ಸ್ ನೊಂದಿಗೆ ಮೆಡಿಯಾಸ್ಟಿನಿಟಿಸ್ ವೃದ್ಧಿಯಾಯಿತು. ಇದನ್ನು ಸರಿಪಡಿ ಸಲು ವೈದ್ಯರು ಮತ್ತೂಂದು ಶಸ್ತ್ರ ಚಿಕಿತ್ಸೆಯ ಆವಶ್ಯಕತೆಯ ಬಗ್ಗೆ ಆಲೋಚಿಸಿದರು. ಆದರೆ ರೋಗಿಯ ಸಾಮಾನ್ಯ ಸ್ಥಿತಿಯು ಮತ್ತೂಂದು ಶಸ್ತ್ರಚಿಕಿತ್ಸೆಗೆ ಸ್ಪಂದಿಸುವ ರೀತಿಯಲ್ಲಿ ಇರಲಿಲ್ಲ.
ಇದಕ್ಕೆ ಪ್ರತಿಯಾಗಿ ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಮುಖ್ಯಸ್ಥರಾದ ಡಾ| ಶಿರನ್ ಶೆಟ್ಟಿ, ಡಾ| ಬಾಲಾಜಿ, ಸರ್ಜಿಕಲ್ ಓಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ| ನವೀನ ಕುಮಾರ್, ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಜೋಸೆಫ್ ಥಾಮಸ್ ವೈದ್ಯರ ತಂಡವು ಎಂಡೋಸ್ಪಾಂಜ್/ವ್ಯಾಕ್ಯೂಮ್ ಥೆರಪಿ ಎಂಬ ನವೀನ ಚಿಕಿತ್ಸೆಗೆ ನಿರ್ಧರಿಸಿದರು.
ಇದನ್ನೂ ಓದಿ : ದೊಡ್ಡ ಹಿಟ್ ಆಯ್ತು ಮಣಿರತ್ನಂ ಸಿನಿಮಾ: ಪೊನ್ನಿಯನ್ ಸೆಲ್ವನ್ ಚಿತ್ರ ಗಳಿಸಿದ್ದೆಷ್ಟು?
ಇಲ್ಲಿ ಎಂಡೋಸ್ಕೋಪಿ ಮೂಲಕ ಸ್ಪಾಂಜ್‌ಅನ್ನು ಮೆಡಿಯಾಸ್ಟಿನಮ್ ಕುಳಿಯಲ್ಲಿ ಇರಿಸಲಾಯಿತು. ಇದು ನೈಸರ್ಗಿಕವಾಗಿ ಮತ್ತು ಯಾವುದೇ ಯಾವುದೇ ಶಸ್ತ್ರಚಿಕಿತ್ಸೆಯಿಲ್ಲದೆ ದೋಷವನ್ನು ಮುಚ್ಚಲು ಸಹಾಯ ಮಾಡಿತು. ಮೂರು ವಾರಗಳ ಅನಂತರ ರೋಗಿಯು ನೇರವಾಗಿ ಬಾಯಿಯ ಮೂಲಕ ತಿನ್ನಲು ಸಾಧ್ಯವಾಯಿತು.
ಇದು ದಕ್ಷಿಣ ಭಾರತದ ಈ ಭಾಗದಲ್ಲಿ ರೋಗಿಗಳಿಗೆ ಚಿಕಿತ್ಸೆಗೆ ಮಾಡಿದ ಮೊದಲ ವಿನೂತನ ವಿಧಾನವಾಗಿದೆ ಮತ್ತು ಕಡಿಮೆ ವೆಚ್ಚದ ಮತ್ತು ಸುರಕ್ಷಿತ ವಿಧಾನವಾಗಿದೆ ಎಂದು ಡಾ| ಶಿರನ್ ಶೆಟ್ಟಿ ತಿಳಿಸಿದ್ದಾರೆ.
ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ಅವರು, ಈ ಅಪರೂಪದ ಚಿಕಿತ್ಸ ವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದ ತಂಡ ವನ್ನು ಅಭಿನಂದಿಸಿ, ಆಸ್ಪತ್ರೆಯಲ್ಲಿ ಈ ರೀತಿಯ ಸಂಕೀರ್ಣ ಶಸ್ತ್ರಚಿಕಿತ್ಸೆಯು ತಜ್ಞ ವೈದ್ಯರ ತಂಡದಿಂದ ಸಾಧ್ಯವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.