Manipal ಮಾಹೆ ವಿ.ವಿ.: ಎಫ್ಐಸಿಸಿಐ ಹೈಯರ್ ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್
Team Udayavani, Dec 13, 2023, 11:34 PM IST
ಮಣಿಪಾಲ: ದಿಲ್ಲಿಯ ಡಾ| ಅಂಬೇಡ್ಕರ್ ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ ನ. 29ರಂದು ನಡೆದ 18ನೇ ಎಫ್ಐಸಿಸಿಐ ಉನ್ನತ ಶಿಕ್ಷಣ ಶೃಂಗಸಭೆಯಲ್ಲಿ ಮಾಹೆ ವಿಶ್ವ ವಿದ್ಯಾನಿಲಯಕ್ಕೆ ಪ್ರತಿಷ್ಠಿತ ಹೈಯರ್ ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್ 2023 ಅನ್ನು ಜಾಗತೀಕರಣದಲ್ಲಿ ಶ್ರೇಷ್ಠತೆ ಎಂಬ ಪ್ರಶಸ್ತಿ ವಿಭಾಗದಲ್ಲಿ ನೀಡಿ ಗೌರವಿ ಸಲಾಗಿದೆ. ಮಾಹೆಯ ಗುಣಮಟ್ಟ ನಿರ್ದೇಶಕ ಡಾ| ಕ್ರಿಸ್ಟೋಫರ್ ಸುಧಾಕರ್ ಪ್ರಶಸ್ತಿ ಸ್ವೀಕರಿಸಿದರು.
ಜಾಗತೀಕರಣದಲ್ಲಿ ಮಾಹೆಯ ದೂರದೃಷ್ಟಿಯ ದಾಪುಗಾಲುಗಳನ್ನು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ (ಎಫ್ಐಸಿಸಿಐ) ಈ ಸ್ಪರ್ಧೆಯಲ್ಲಿ ಅಂಗೀಕರಿಸಿದೆ. ವಿ.ವಿ.ಯ ಅಸಾಧಾರಣ ಪ್ರಯತ್ನಗಳು ಜಾಗತಿಕ ಪಾಲುದಾರಿಕೆಗಳು, ಸಾಗರೋತ್ತರ ಕ್ಯಾಂಪಸ್‌ಗಳು, ದ್ವಿ-ರಾಷ್ಟ್ರೀಯ ಸಂಶೋಧನ ಅನುದಾನಗಳು, ಸಹಕಾರಿ ಸಂಶೋಧನೆ ಮತ್ತು ಸಹ-ಮೇಲ್ವಿಚಾರಣೆಯ ಪಿಚ್.ಡಿ. ಮಾರ್ಗದರ್ಶಿಗಳು, ವಿದ್ಯಾರ್ಥಿಗಳ ವಿನಿಮಯ, ಸಾಂಸ್ಕೃತಿಕ ವೈವಿಧ್ಯವನ್ನು ಉತ್ತೇಜಿಸುವುದು ಮತ್ತು ನಿಜವಾದ ಜಾಗತಿಕ ಶಿಕ್ಷಣದ ಅನುಭವವನ್ನು ಒದಗಿಸುವಲ್ಲಿ ಮಾಹೆ ವಿ.ವಿ. ಪ್ರಮುಖವಾಗಿದೆ.
ಮಾಹೆ ತನ್ನ ವಿದ್ಯಾರ್ಥಿಗಳನ್ನು ಸ್ಥಳೀಯ ಸನ್ನಿವೇಶದಲ್ಲಿ ಮಾತ್ರವಲ್ಲದೆ. ಅಂತಾರಾರಾಷ್ಟ್ರೀಯ ವೇದಿಕೆಯಲ್ಲಿ ಯೂ ಉತ್ತಮ ಸಾಧನೆ ಮಾಡಲು ಸಿದ್ಧಪಡಿಸುತ್ತದೆ. ಈ ಪ್ರಶಸ್ತಿಯು ಶಿಕ್ಷಣದಲ್ಲಿ ಉತ್ಕೃಷ್ಟತೆಯ ಅನ್ವೇಷಣೆ ಯನ್ನು ಮುಂದುವರಿಸಲು ಮತ್ತು ಅದರ ಜಾಗತಿಕ ಹೆಜ್ಜೆ ಗುರುತನ್ನು ಇನ್ನಷ್ಟುಬಲಪಡಿಸಲು ಮಾಹೆಗೆ ಪ್ರೇರಣೆ ಯಾಗಿದೆ. ಎಫ್ಐಸಿಸಿಐ ಹೈಯರ್ ಎಜುಕೇಶನ್ ಎಕ್ಸಲೆನ್ಸ್ ಪ್ರಶಸ್ತಿ ಯು ಮಾಹೆಯ ಶೈಕ್ಷಣಿಕ ಸಾಧನೆಗೆ ಮತ್ತೊಂದು ಪುರಸ್ಕಾರ ಸೇರಿಸಿದಂತಾ ಗಿದೆ. ಇದು ಭಾರತ ಮತ್ತು ಜಾಗತಿಕ ಶಿಕ್ಷಣದ ಭವಿಷ್ಯವನ್ನು ರೂಪಿಸುವಲ್ಲಿ ಮಾಹೆ ವಿ.ವಿ.ಯ ಪ್ರಭಾವವನ್ನು ಗುರುತಿಸುತ್ತದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
55th IFFI Goa: ಕೆಲವೇ ಕ್ಷಣಗಳಲ್ಲಿ 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ
UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.