Manipal: ಮಣ್ಣಪಳ್ಳ ಕೆರೆ; ಆಕರ್ಷಕ ಜಲಸಿರಿಗೆ ಬೇಕು ಆಸರೆ!

ಮಣಿಪಾಲದ ಮಹಾವಿಸ್ಮಯದಂತಿರುವ ಕೆರೆಯನ್ನು ಕಾಡುತ್ತಿವೆ ಸಮಸ್ಯೆಗಳ ಸಾಲು

Team Udayavani, Jan 7, 2025, 4:03 PM IST

9

ಮಣಿಪಾಲದ ಗುಡ್ಡದ ಮೇಲೆ 120 ಎಕ್ರೆ ಪ್ರದೇಶದಲ್ಲಿ ಹರಡಿಕೊಂಡಿರುವ ಮಣ್ಣಪಳ್ಳ ಕೆರೆ ಮತ್ತು ಪರಿಸರವನ್ನು ಈ ಭಾಗದ ಪ್ರೇಕ್ಷಣೀಯ ತಾಣವಾಗಿಸುವ ಎಲ್ಲ ಅವಕಾಶಗಳಿವೆ. ಪುಟಾಣಿ ಮಕ್ಕಳಿಂದ ಹಿರಿಯರವರೆಗೆ ಎಲ್ಲರಿಗೂ ಹಿತನೀಡಬಲ್ಲ, ಮೀನುಗಳಿಂದ ಪಕ್ಷಿಗಳವರೆಗಿನ ಜೀವಜಗತ್ತಿಗೆ ಆಸರೆಯಾಗಬಲ್ಲ ಜಲಸಿರಿ ಇದು. ಈ ಸುಂದರ ಸರೋವರದ ವೈಭವ, ಅದು ಈಗ ಎದುರಿಸುತ್ತಿರುವ ಸಮಸ್ಯೆಗಳು, ಅಭಿವೃದ್ಧಿಯ ಅವಕಾಶಗಳನ್ನು ತೆರೆದಿಡುವ ಸರಣಿಯೇ ‘ಮೆರೆಯಲಿ ಮಣ್ಣಪಳ್ಳ ಕೆರೆ’.

ಮಣಿಪಾಲ: ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಜಗತ್ತಿನ ಗಮನ ಸೆಳೆದಿರುವ ಮಣಿಪಾಲದಲ್ಲಿ ಪ್ರಪಂಚವನ್ನೇ ತನ್ನ ಸೌಂದರ್ಯದಿಂದ ಸೆಳೆಯಬಲ್ಲ ವಿಸ್ಮಯವೊಂದಿದೆ. ಅದುವೇ ಮಣ್ಣಪಳ್ಳ ಕೆರೆ. ಮಣಿಪಾಲಕ್ಕೆ ಈ ಹೆಸರು ಬರಲು ಕಾರಣವಾದ ಮಣ್ಣಪಳ್ಳ ಕೆರೆ ಪ್ರಕೃತಿ ಮತ್ತು ಮನುಷ್ಯ ಜತೆಯಾಗಿ ನಿರ್ಮಿಸಿದ ಸುಂದರ ತಾಣ. ಸುಮಾರು 120 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಸುಂದರ ಸರೋವರ ಮತ್ತು ಪರಿಸರ ಅಪರೂಪದ ಜೀವ ವೈವಿಧ್ಯದ ಆಸರೆಯಾಗಿಯೂ ಗಮನ ಸೆಳೆದಿದೆ.

ಎತ್ತರದ ಗುಡ್ಡದಲ್ಲಿ ವರ್ಷದ ಬಹುತೇಕ ಎಲ್ಲ ತಿಂಗಳುಗಳಲ್ಲಿ ನೀರು ತುಂಬಿಕೊಂಡಿರುವ ಈ ಬೃಹತ್‌ ಕೊಳದ ಸಾಮರ್ಥ್ಯ ಪರಿಪೂರ್ಣವಾಗಿ ಬಳಕೆಯಾಗಿಲ್ಲ. ಒಂದು ಕಡೆ ಸುಂದರ ಪರಿಸರ ತಾಣವಾಗುವ ಅದ್ಭುತ ಅವಕಾಶ, ಇನ್ನೊಂದೆಡೆ ಕಡೆ ಆಕರ್ಷಕ ಪ್ರವಾಸಿ ತಾಣವಾಗುವ ಎಲ್ಲ ಅರ್ಹತೆಗಳನ್ನು ಹೊತ್ತಿರುವ ಈ ಮಣ್ಣಪಳ್ಳ ಕೆರೆ ಇನ್ನೂ ಹೊರ ಜಗತ್ತಿನ ಪಾಲಿಗೆ ಅಷ್ಟಾಗಿ ತೆರೆದುಕೊಂಡಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿದ್ದರೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುತ್ತಿತ್ತು.

ಏನುಂಟು? ಏನಿಲ್ಲ?
ಮಣ್ಣಪಳ್ಳ ಕೆರೆ ಕೇವಲ ಜಲ ತಾಣವಲ್ಲ. ಇದರ ಸುತ್ತಲೂ ಒಂದುವರೆ ಕಿ.ಮೀ. ಉದ್ದದ ವಾಕಿಂಗ್‌ ಟ್ರ್ಯಾಕ್‌ ಇದೆ. ಕೊಳದ ನಡುವಿನ ದ್ವೀಪಗಳಲ್ಲಿ ನೂರಾರು ಬಗೆಯ ಹಕ್ಕಿಗಳ ಆವಾಸವಿದೆ. ಬೋಟಿಂಗ್‌, ಬಯಲು ರಂಗಮಂದಿರ, ಆಟದ ಮೈದಾನ, ಮಕ್ಕಳ ಪಾರ್ಕ್‌ ಇದೆ.
ಆದರೆ…. ಇಷ್ಟೆಲ್ಲ ವೈವಿಧ್ಯಗಳ ಆಗರವಾಗಿದ್ದರೂ ಮೂಲೆಗುಂಪಾಗಿದೆ. ಮಣಿಪಾಲಕ್ಕೆ ಬಂದವರಿಗೆ ಇಲ್ಲೊಂದು ಸುಂದರವಾದ ತಾಣವಿದೆ ಎಂದು ಹೇಳುವ ಯಾವ ವ್ಯವಸ್ಥೆಯೂ ಇಲ್ಲ. ಒಳಗೆ ಹೊಕ್ಕರೆ ಅದರ ಸೌಂದರ್ಯವನ್ನು ಅನುಭವಿಸುವುದಕ್ಕಿಂತ ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳು ಎದುರಾಗುತ್ತವೆ, ಆತಂಕಗಳು ಕಾಡುತ್ತವೆ. ವಸ್ತುಶಃ ಅನಾಥ ಪ್ರಜ್ಞೆಯಲ್ಲಿರುವ ಮಣ್ಣಪಳ್ಳ ಕೆರೆ ಅಭಿವೃದ್ಧಿ ಹೊಂದಿದಲ್ಲಿ ನಿಜಕ್ಕೂ ಮಣಿಪಾಲಕ್ಕೆ ಒಂದು ದೊಡ್ಡ ಆಸ್ತಿಯಾಗುವುದು ಖಂಡಿತ. ಆ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕಾಗಿದೆ.

ಅಭಿವೃದ್ಧಿ ಮಾಡಬೇಕಾದವರು ಯಾರು?
ಇಂಥ ಪ್ರಾಕೃತಿಕ ಸೌಂದರ್ಯದ ಖನಿಯನ್ನು ಕೈಯಲ್ಲಿಟ್ಟುಕೊಂಡಿದ್ದರೂ ಅದರ ಅಭಿವೃದ್ಧಿ ಮಾಡುವಲ್ಲಿ ಎಡವಿದ್ದೇವೆ. ಇದಕ್ಕೆ ಮುಖ್ಯ ಕಾರಣ, ಅಭಿವೃದ್ಧಿ ಮಾಡಬೇಕಾದವರು ಯಾರು ಎನ್ನುವ ಪ್ರಶ್ನೆಗೆ ಉತ್ತರಿಸಲು ಯಾರೂ ಮುಂದಾಗದೇ ಇರುವುದು!

ಮಣ್ಣಪಳ್ಳ ಕರೆ ಉಡುಪಿ ನಗರಸಭೆ ವ್ಯಾಪ್ತಿಯೊಳಗಿದ್ದರೂ ಸದ್ಯ ಇದರ ನಿರ್ವಹಣೆ ನಗರಾಭಿವೃದ್ಧಿ ಪ್ರಾಧಿಕಾರದ ಅಧೀನದಲ್ಲಿದೆ. ಅಷ್ಟಾಗಿಯೂ ಇದರ ನಿರ್ವಹಣೆಗೆ ಇರುವ ಸಮಿತಿಯ ಅಧ್ಯಕ್ಷರು ಜಿಲ್ಲಾಧಿಕಾರಿಯೇ ಆಗಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೆರೆಯ ಅಭಿವೃದ್ಧಿಗಾಗಿ ಪ್ರಸ್ತಾವನೆಯನ್ನು ಕೇಂದ್ರ ಕಚೇರಿಗೆ ಸಲ್ಲಿಸಿ ತಿಂಗಳುಗಳೇ ಕಳೆದರೂ ಅನುಮೋದನೆ ಮಾತ್ರ ಸಿಕ್ಕಿಲ್ಲ.

ಪೊನ್ನುರಾಜ್‌ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಮಣ್ಣಪಳ್ಳದ ಅಭಿವೃದ್ಧಿಗೆ ಯೋಜನೆ, ವಿಸ್ತೃತ ವರದಿ, ನೀಲನಕ್ಷೆ ಎಲ್ಲವೂ ಸಿದ್ಧವಾಗುತ್ತಾ ಬಂದಿದೆ. ಈ ಮಧ್ಯೆ ಕೂರ್ಮಾರಾವ್‌ ಹಾಗೂ ಇನ್ನು ಕೆಲವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಬೋಟಿಂಗ್‌ ಸಹಿತ ಜಲಕ್ರೀಡೆಗಳಿಗೂ ಅವಕಾಶ ನೀಡಿದ್ದರೂ ಅದು ದೊಡ್ಡ ಮಟ್ಟದಲ್ಲಿ ಕ್ಲಿಕ್‌ ಆಗಿಲ್ಲ. ಕೆಲವು ವರ್ಷ ಕೆರೆಗೆ ಮೀನು ಮರಿಗಳನ್ನು ಬಿಟ್ಟು ಸಾಕುವ ಪ್ರಯತ್ನವೂ ನಡೆಯಿತಾದರೂ ದೊಡ್ಡ ಯಶಸ್ಸು ಕಂಡಿಲ್ಲ.

ನಗರಸಭೆ ವ್ಯಾಪ್ತಿಯಲ್ಲಿದ್ದರೂ ನಗರಸಭೆ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಗರಾಭಿವೃದ್ಧಿ ಪ್ರಾಧಿಕಾರದ ಅಧೀನದಲ್ಲಿದ್ದು ಅಭಿವೃದ್ಧಿಗೆ ಅನುದಾನವೂ ಇದೆ. ಆದರೆ ತಾಂತ್ರಿಕ ಕಾರಣದಿಂದ ಅನುದಾನ ಬಿಡುಗಡೆ ಮಾಡಲು ಆಗುತ್ತಿಲ್ಲ. ಹೀಗಾಗಿ ಮಣ್ಣಪಳ್ಳದ ಅಭಿವೃದ್ಧಿ ಯಾರು ಮಾಡಬೇಕು ಎಂಬುದೇ ಅಧಿಕಾರಿಗಳ ಹಂತದಲ್ಲಿ ಈಗಿರುವ ಪ್ರಶ್ನೆ. ಜಿಲ್ಲಾಧಿಕಾರಿಗಳ ನೇತೃತ್ವದ ನಿರ್ವಹಣ ಸಮಿತಿಯಿದೆ. ಸಭೆಗಳು ಆಗುತ್ತಿರುತ್ತವೆ. ಕಾರ್ಯಾನುಷ್ಠಾನ ಇಲ್ಲ.

ಗೊತ್ತಿರಲಿ…ಮಣ್ಣಪಳ್ಳ ಸಣ್ಣದಲ್ಲ!
– ಮಣ್ಣಪಳ್ಳವೆಂದರೆ ಸಣ್ಣ ಪ್ರದೇಶವೇನಲ್ಲ. ಸುಮಾರು 120 ಎಕರೆ ವ್ಯಾಪ್ತಿ ಹೊಂದಿದೆ.
– ನೀರು ನಿಂತಿರುವ ಕೆರೆಯ ಭಾಗವೇ ಸುಮಾರು 60 ಎಕರೆಯಲ್ಲಿ ವ್ಯಾಪಿಸಿಕೊಂಡಿದೆ.
– ವಾಕಿಂಗ್‌ ಟ್ರ್ಯಾಕ್‌ನಲ್ಲಿ ಒಂದು ಸುತ್ತು ಬಂದರೆ 1.5 ಕಿ.ಮೀ. ನಡೆದಂತಾಗುತ್ತದೆ.
– ಸಣ್ಣ ಕೊಳದಂತಿದ್ದ ಇದು ಹೆಂಚಿನ ಕಾರ್ಖಾನೆಗೆ ಆವೆ ಮಣ್ಣು ತೆಗೆದು ವಿಶಾಲವಾಗಿದೆ.
– ಮಣ್ಣಪಳ್ಳ ಕೆರೆಯೊಳಗಿನ ಎರಡು ದ್ವೀಪಗಳು ನೂರಾರು ಪಕ್ಷಿಗಳ ಆವಾಸ ಸ್ಥಾನ.
– ಇದೊಂದು ರೋಚಕ ಬೋಟಿಂಗ್‌ ತಾಣ, ವಿಶೇಷ ಕಲಾಕೃತಿಗಳು ಇಲ್ಲಿನ ಆಕರ್ಷಣೆ.
– ನೂರಾರು ಬಗೆಯ ಗಿಡ ಮರಗಳು ಇಲ್ಲಿವೆ. ಪ್ರಕೃತಿ ಇಲ್ಲಿ ಖುಷಿಯಲ್ಲಿ ಕುಣಿಯುತ್ತಿದೆ.
– ಸುತ್ತಲೂ ದೇಗುಲ, ತಾರಾಲಯ, ಹಸ್ತಶಿಲ್ಪದಂಥ ಅದ್ಭುತಗಳನ್ನು ಆವರಿಸಿಕೊಂಡಿದೆ.
– ಚಂದದ ಬಯಲು ರಂಗ ಮಂದಿರವಿದೆ, ದೊಡ್ಡ ಆಟದ ಮೈದಾನವೂ ಇದೆ.
– ಫೋಟೋಗ್ರಫಿಗೆ, ರೀಲ್ಸ್‌ ಮಾಡುವುದಕ್ಕೆ, ಶೂಟಿಂಗ್‌ಗೂ ಹೇಳಿ ಮಾಡಿಸಿದ ಜಾಗ ಇದು!

ಪ್ರಮುಖ ಸಮಸ್ಯೆ, ಕೊರತೆಗಳೇನು
– ಇಷ್ಟು ಸುಂದರವಾದ, ಬೃಹತ್‌ ಗಾತ್ರದ ಕೆರೆಯನ್ನು ದೈನಂದಿನ ನೆಲೆಯಲ್ಲಿ ನಿರ್ವ ಹಣೆ ಮಾಡುವ ವ್ಯವಸ್ಥೆಯೇ ಇಲ್ಲ.
– ಅತ್ಯುತ್ತಮ ವಾಕಿಂಗ್‌ ಟ್ರ್ಯಾಕ್‌ ಇದೆ. ಆದರೆ, ಅದರ ನಿರ್ವಹಣೆ ಇಲ್ಲದೆ ನಡಿಗೆಗೆ ಭಯವಾಗುತ್ತದೆ.
– ಕೆರೆಗೆ ಬರಲು ನಾಲ್ಕರಿಂದ ಐದು ಕಡೆ ಮಾರ್ಗವಿದೆ. ಆದರೆ, ಎಲ್ಲೂ ಮಾರ್ಗ ಸೂಚಿ, ಸೂಚನಾ ಫ‌ಲಕಗಳು ಇಲ್ಲ.
– ಕೆರೆ ಮತ್ತು ಸುತ್ತಲಿನ ಪರಿಸರಕ್ಕೆ ರಕ್ಷಣಾ ಬೇಲಿಗಳಿಲ್ಲ. ಅಲ್ಲಲ್ಲಿ ಅತಿಕ್ರಮಣದ ಸೂಚನೆಗಳು ಕಾಣಿಸುತ್ತಿವೆ.
– ಎಲ್ಲ ಕಡೆ ಹುಲ್ಲು, ಪೊದೆಗಳು ಬೆಳೆದಿವೆ. ಹೀಗಾಗಿ ವಾಕಿಂಗ್‌ ಟ್ರ್ಯಾಕ್‌ನಲ್ಲಿ ಹೋಗುವವರಿಗೆ ಕ್ಷಣಕ್ಷಣವೂ ಆತಂಕ.
– ಇಲ್ಲಿ ಯಾವುದೇ ಭದ್ರತಾ ಸಿಬಂದಿ ಗಳಿಲ್ಲ. ಅಡ್ಡಾದಿಡ್ಡಿಯಾಗಿ ವಾಹನ ಪಾರ್ಕಿಂಗ್‌ ಮಾಡಿದರೂ ಯಾರೂ ಕೇಳ್ಳೋರಿಲ್ಲ.
– ವಾಯು ವಿಹಾರಿಗಳು, ನಡಿಗೆದಾರರಿಗೆ ಅತ್ಯಗತ್ಯವಾಗಿ ಬೇಕಾದ ಶೌಚಾಲಯ ವ್ಯವಸ್ಥೆ ಇಲ್ಲ.
– ಹಗಲಿನಲ್ಲಿ ಪ್ರೇಮಿಗಳು, ರಾತ್ರಿ ಮದ್ಯ ವ್ಯಸನಿಗಳ ಗುಂಡುಪಾರ್ಟಿ ತಾಣವಾಗಿದೆ.
– ವಾಕಿಂಗ್‌ ಟ್ರ್ಯಾಕ್‌ನಲ್ಲೇ ನಾಯಿಗಳು ಮಲಗಿಕೊಂಡಿರುತ್ತವೆ. ಅವುಗಳಿಗೆ ಭಯಪಟ್ಟುಕೊಂಡೇ ಓಡಾಡಬೇಕು.
– ಇಲ್ಲಿ ಬಯಲು ರಂಗ ಮಂದಿರವಿದೆ. ಬೋಟಿಂಗ್‌ ಇದೆ. ಆದರೆ ಪೂರ್ಣ ಪ್ರಮಾಣದ ಬಳಕೆಗೆ ವ್ಯವಸ್ಥೆ ಮಾಡಿಲ್ಲ.

ವರದಿ: ರಾಜು ಖಾರ್ವಿ/ಪುನೀತ್‌ ಸಾಲ್ಯಾನ್‌
ಚಿತ್ರ: ಆಸ್ಟ್ರೋಮೋಹನ್‌

ಟಾಪ್ ನ್ಯೂಸ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

1-delhi

Delhi Election; ಅಧಿಕಾರ ಉಳಿಸಿಕೊಳ್ಳುವರೋ? ಪಡೆದುಕೊಳ್ಳುವರೋ?

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

6-gangolli

Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

1-kadkona

Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು

1-H-R

Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-gangolli

Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

Udupi: ಜ. 9-15: ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವ ಸಂಭ್ರಮ

Udupi: ಜ. 9-15: ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವ ಸಂಭ್ರಮ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

10(1

Mangaluru: ನಿರ್ವಹಣೆ ಇಲ್ಲದೆ ಆಕರ್ಷಣೆ ಕಳೆದುಕೊಂಡ ಜಿಂಕೆ ವನ

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

1-delhi

Delhi Election; ಅಧಿಕಾರ ಉಳಿಸಿಕೊಳ್ಳುವರೋ? ಪಡೆದುಕೊಳ್ಳುವರೋ?

9(1

Mangaluru: 10ಕ್ಕೂ ಅಧಿಕ ಅಪಾಯಕಾರಿ ಕ್ರಾಸಿಂಗ್‌

8

Kundapura: ರಸ್ತೆ, ಪೈಪ್‌ಲೈನ್‌ ಕಾಮಗಾರಿಯಿಂದ ಧೂಳು; ಹೈರಾಣಾದ ಜನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.