ಫೆ. 17: ಮಣಿಪಾಲ್ ಮ್ಯಾರಥಾನ್
Team Udayavani, Feb 15, 2019, 4:08 AM IST
ಮಣಿಪಾಲ: ಮಾನಸಿಕ ಆರೋಗ್ಯ ಜಾಗೃತಿಯ ಧ್ಯೇಯದೊಂದಿಗೆ ಮಾಹೆ ಹಾಗೂ ಉಡುಪಿ ಜಿಲ್ಲಾ ಆ್ಯತ್ಲೆಟಿಕ್ ಅಸೋಸಿಯೇಶನ್ ಜಂಟಿ ಆಶ್ರಯದಲ್ಲಿ ಫೆ. 17ರಂದು ಹಮ್ಮಿಕೊಂಡಿರುವ “ಮಣಿಪಾಲ್ ಮ್ಯಾರಥಾನ್’ಗೆ ಉತ್ತಮ ಪ್ರತಿಸ್ಪಂದನೆ ದೊರೆತಿದ್ದು ಈಗಾಗಲೇ 7 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಸಂಖ್ಯೆ 10 ಸಾವಿರ ತಲುಪುವ ನಿರೀಕ್ಷೆ ಇದೆ ಎಂದು ಮಾಹೆ ಕ್ರೀಡಾ ಕಾರ್ಯದರ್ಶಿ ಡಾ| ವಿನೋದ್ ನಾಯ್ಕ ತಿಳಿಸಿದ್ದಾರೆ.
ಶ್ರೀಲಂಕಾದ 6 ಮಂದಿ ಮತ್ತು ಕೀನ್ಯಾದ 8 ಮಂದಿ ಹಾಫ್ ಮ್ಯಾರಥಾನ್ (21 ಕಿ.ಮೀ.)ಗೆ ನೋಂದಣಿ ಮಾಡಿಕೊಂಡಿದ್ದಾರೆ. ಹಾಫ್ ಮ್ಯಾರಥಾನ್ ಪೂರ್ಣ ಗೊಳಿಸುವ ಮೊದಲ ಮೂವರಿಗೆ ಕ್ರಮವಾಗಿ 50 ಸಾವಿರ, 30 ಸಾವಿರ ಹಾಗೂ 15 ಸಾವಿರ ರೂ.ಗಳ ನಗದು ಬಹುಮಾನವಿದೆ. ಇಥಿಯೋಪಿಯಾದ ಕೆಲವು ಮಂದಿಯೂ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ದೇಶದೆಲ್ಲೆಡೆಯಿಂದ ನೋಂದಣಿಗಳು ಸ್ವೀಕೃತವಾಗುತ್ತಿವೆ. ಮಾಹೆಯ ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಐಸಿಐಸಿಐ ಬ್ಯಾಂಕ್ ಪ್ರಧಾನ ಪ್ರಾಯೋಜಕರಾಗಿರುವ ಈ ಮ್ಯಾರಥಾನ್‌ಗೆ, ಸಿಂಡಿಕೇಟ್ ಬ್ಯಾಂಕ್, ಎಸ್‌ಬಿಐ, ಭಾರತ್ ಪೆಟ್ರೋಲಿಯಂ ಸಹ ಪ್ರಾಯೋಜಕತ್ವ ವಹಿಸಿವೆ. ಗೋಲ್ಡನ್ ಗ್ಲೋಬ್ ರೇಸ್ -2018ರಲ್ಲಿ ಏಷಿಯಾದಿಂದ ಪಾಲ್ಗೊಂಡ ಏಕೈಕ ವ್ಯಕ್ತಿಯಾಗಿರುವ ಭಾರತೀಯ ನೌಕಾಪಡೆಯ ಕಮಾಂಡರ್ ಅಭಿಲಾಷ್ ಟಾಮಿ ಪಾಲ್ಗೊಳ್ಳಲಿದ್ದಾರೆ.
ಐಸಿಐಸಿಐ ಸೌತ್ ಮುಖ್ಯಸ್ಥ ವಿರಳ್ ರೂಪಾನಿ ಅವರು ಬೆಳಗ್ಗೆ 6 ಗಂಟೆಗೆ ಮ್ಯಾರಥಾನ್‌ಗೆ ಚಾಲನೆ ನೀಡಲಿದ್ದಾರೆ. ಇದರೊಂದಿಗೆ 10, 5 ಮತ್ತು 3 ಕಿ.ಮೀ. ಓಟದ ಸ್ಪರ್ಧೆಗಳಿಗೂ ಚಾಲನೆ ದೊರೆಯಲಿದೆ.ವಿಎಸ್‌ಒ ಸ್ವಯಂಸೇವಕರು ಕೆಎಂಸಿ ವಠಾರದಲ್ಲಿ ವಿವಿಧ ಸ್ಪರ್ಧೆಗಳು ಮತ್ತು ಸ್ಟಾಲ್‌ಗಳನ್ನು ಅಳವಡಿಸಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಇದೇ ವೇಳೆ ಲಾಫ್ಟರ್ ಗುರು ಡಾ| ಮದನ್ ಕಠಾರಿಯಾ ಅವರಿಂದ ಆರೋಗ್ಯ ಮತ್ತು ಸಂತೃಪ್ತಿಗಾಗಿ “ಲಾಫ್ಟರ್ ಯೋಗ’ ನಡೆಯಲಿದೆ.
ಮಾರ್ಗ ಯಾವುದು?
ಮಣಿಪಾಲ-ಪೆರಂಪಳ್ಳಿ ರೋಡ್- ಅಂಬಾಗಿಲು-ರಾಷ್ಟ್ರೀಯ ಹೆದ್ದಾರಿ-ಕರಾವಳಿ ಬೈಪಾಸ್-ಬನ್ನಂಜೆ ರಸ್ತೆ-ಬಿಗ್ ಬಜಾರ್-ಕೆಎಂ ಮಾರ್ಗ-ಕಲ್ಸಂಕ-ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್ಗಳ ವಿರುದ್ಧ ಕೇಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.