ಮಣಿಪಾಲ ಮ್ಯಾರಥಾನ್: 6 ಸಾವಿರಕ್ಕೂ ಮಿಕ್ಕಿದ ಓಟಗಾರರು
Team Udayavani, Mar 6, 2017, 5:54 PM IST
ಉಡುಪಿ: ಮಣಿಪಾಲ ವಿ.ವಿ. ಮತ್ತು ಉಡುಪಿ ಜಿಲ್ಲಾ ಅಮೆಚೂರ್ ಆ್ಯತ್ಲೆಟಿಕ್ ಸಂಸ್ಥೆಯ ಸಹಯೋಗದಲ್ಲಿ ಸ್ಟ್ರೋಕ್ ಜಾಗೃತಿಗಾಗಿ ರವಿವಾರ ಮಣಿಪಾಲದಲ್ಲಿ ನಡೆದ ಮಣಿಪಾಲ್ ಮ್ಯಾರಥಾನ್‌ನಲ್ಲಿ 6 ಸಾವಿರಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡು ಓಟದಲ್ಲಿ ಪಾಲ್ಗೊಂಡರು.
ಸಣ್ಣ ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗಿನವರು ಓಟದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು, ಉದ್ಯೋಗಿಗಳು, ಅಧಿಕಾರಿಗಳು ಎಲ್ಲರೂ ಓಟದಲ್ಲಿದ್ದರು. ಮಣಿಪಾಲ ವಿವಿ ಜೊತೆಗೆ ಸಿಂಡಿಕೇಟ್ ಬ್ಯಾಂಕ್, ಅದಾನಿ ಯುಪಿಸಿಎಲ್ ಪ್ರಾಯೋಜಕತ್ವವನ್ನು ನೀಡಿತ್ತು. ಮಣಿಪಾಲದ ಕೆಎಂಸಿ ಗ್ರೀನ್ಸ್‌ನಿಂದ ಬೆಳ್ಳಂಬೆಳಗ್ಗೆ ಓಟ ಪ್ರಾರಂಭಗೊಂಡು ಅಲ್ಲಿಯೇ ಸಮಾಪನಗೊಂಡಿತು. ಕಾರ್ಯಕ್ರಮವು ಶಿಸ್ತುಬದ್ಧವಾಗಿ ನಡೆಯಿತು. ಓಟದ ಬಳಿಕ ಎಲ್ಲರಿಗೂ ರಿಲ್ಯಾಕ್ಸ್ ಆಗಲು ಮ್ಯೂಸಿಕ್ ಹಾಕಲಾಗಿದ್ದು, ವಿದ್ಯಾರ್ಥಿಗಳು, ಮಕ್ಕಳ ಜೊತೆ ಹಿರಿಯರೂ ಕುಣಿದಾಡಿದರು. ಬಳಿಕ ಗಣ್ಯರ ಉಪಸ್ಥಿತಿಯಲ್ಲಿ ಮಣಿಪಾಲ ಗ್ರೀನ್ಸ್‌ನಲ್ಲಿ ವಿಜೇತ ಓಟಗಾರರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ಮೂಡಬಿದಿರೆಯ ಆಳ್ವಾಸ್‌ನವರು ಹೆಚ್ಚಿನ ಬಹುಮಾನವನ್ನು ಪಡೆದುಕೊಂಡರು.
ಹಾಫ್ ಮ್ಯಾರಥಾನ್ ರೂಟ್
(21 ಕಿ.ಮೀ.) ಓಟಗಾರರು ಮಣಿಪಾಲ ಕೆಎಂಸಿ ಗ್ರೀನ್ಸ್, ಕಂಟ್ರಿ ಇನ್ ಆ್ಯಂಡ್ ಸೂಟ್ಸ್ ಸರ್ಕಲ್, ಸಿಂಡಿಕೇಟ್ ಸರ್ಕಲ್, ಮತ್ತೆ ತಿರುಗಿ ಕಂಟ್ರಿ ಇನ್ ಸರ್ಕಲ್‌ನಲ್ಲಿ ಎಡಕ್ಕೆ ತಿರುಗಿ ಪೆರಂಪಳ್ಳಿ ರಸ್ತೆ, ವೈನ್ ಆ್ಯಂಡ್ ಸ್ಪಿರಿಟ್, ಲೇಡಿ ಆಫ್ ಫಾತಿಮಾ ಚರ್ಚ್, ಅಂಬಾಗಿಲು ಕಲ್ಸಂಕ ರಸ್ತೆ, ಯೂಟರ್ನ್ ಆಗಿ ಮತ್ತೆ ಪೆರಂಪಳ್ಳಿ ಮಾರ್ಗವಾಗಿ ಕಂಟ್ರಿ ಇನ್ ಸರ್ಕಲ್ ಮೂಲಕ ಕೆಎಂಸಿ ಗ್ರೀನ್ಸ್‌ಗೆ ಬಂದರು.
10 ಕಿ.ಮೀ. ಓಟದವರು ಮಣಿಪಾಲ ಕೆಎಂಸಿ ಗ್ರೀನ್ಸ್, ಕಂಟ್ರಿ ಇನ್ ಆ್ಯಂಡ್ ಸೂಟ್ಸ್ ಸರ್ಕಲ್, ಸಿಂಡಿಕೇಟ್ ಸರ್ಕಲ್, ಮತ್ತೆ ತಿರುಗಿ ಕಂಟ್ರಿ ಇನ್ ಸರ್ಕಲ್‌ಗೆ ಬಂದು ಎಡಕ್ಕೆ ತಿರುಗಿ ಪೆರಂಪಳ್ಳಿ ರಸ್ತೆ, ಲೇಡಿ ಆಫ್ ಫಾತಿಮಾ ಚರ್ಚ್ ಮುಂದೆ ಹೋಗಿ ಯೂಟರ್ನ್ ಆಗಿ ಮತ್ತೆ ಕಂಟ್ರಿ ಇನ್ ಸರ್ಕಲ್ ಮೂಲಕ ಕೆಎಂಸಿ ಗ್ರೀನ್ಸ್‌ಗೆ ಸಾಗಿ ಬಂದರು. 5 ಕಿ.ಮೀ. ಓಟದವರು ಮಣಿಪಾಲ ವಿ.ವಿ., ಕಂಟ್ರಿ ಇನ್ ಸರ್ಕಲ್, ಸಿಂಡಿಕೇಟ್ ಸರ್ಕಲ್ ಅನ್ನು ಹಾದು ಸೋನಿಯಾ ಕ್ಲಿನಿಕ್‌ನಿಂದ ಅನಂತ ನಗರದ ಬಳಿಕ ಎಡಕ್ಕೆ ತಿರುಗಿ ಪ್ರಸನ್ನ ಗಣಪತಿ ದೇವಸ್ಥಾನದ ಅನಂತರ ಎಡಕ್ಕೆ ತಿರುಗಿ ದಶರಥನಗರ, ಹೊಟೇಲ್ ಸಿಗ್ಮಾ, ಎಂಜೆಸಿ, ಮಾಧವಕೃಪಾ ಶಾಲೆ, ಉಡುಪಿ ಮಣಿಪಾಲ ಮುಖ್ಯರಸ್ತೆ ಹಾದು ಮಣಿಪಾಲ ವಿ.ವಿ. ಎದುರು ಬಂದರು. 3 ಕಿ.ಮೀ. ಓಟದವರು ಮಣಿಪಾಲ ವಿ.ವಿ., ಕಂಟ್ರಿ ಇನ್ ಸರ್ಕಲ್, ಸಿಂಡಿಕೇಟ್ ಸರ್ಕಲ್‌ನ ಎಡಕ್ಕೆ ತಿರುಗಿ ಉಡುಪಿ ಮಣಿಪಾಲ ಮುಖ್ಯರಸ್ತೆಯ ಮೂಲಕ ಮಣಿಪಾಲ ವಿ.ವಿ. ಎದುರು ಬಂದು ಓಟವನ್ನು ಮುಗಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Mangaluru: ಇ ರಿಕ್ಷಾಗಳಿಗೆ ಮಹಿಳಾ ಸಾರಥಿ ಪ್ರಯೋಗ ವಿಫಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.