ಮಣಿಪಾಲ – ಪರ್ಕಳ ಚತುಷ್ಪಥ ವರ್ಷದೊಳಗೆ: ರಘುಪತಿ ಭಟ್
Team Udayavani, Jun 30, 2018, 8:27 AM IST
ಉಡುಪಿ: ರಾಷ್ಟ್ರೀಯ ಹೆದ್ದಾರಿ 169ಎಯ (ಉಡುಪಿ-ತೀರ್ಥಹಳ್ಳಿ) ಮಣಿಪಾಲ-ಪರ್ಕಳ ರಸ್ತೆ ಚತುಷ್ಪಥಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದ್ದು ಕಾಮಗಾರಿ ವರ್ಷದೊಳಗೆ ಪೂರ್ಣಗೊಳಿಸಲು ಷರತ್ತು ವಿಧಿಸಲಾಗಿದೆ. ಇದು 99.86 ಕೋ.ರೂ ವೆಚ್ಚದ ಯೋಜನೆ ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ಶುಕ್ರವಾರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕರಾವಳಿ ಜಂಕ್ಷನ್‌ನಿಂದ ಕಡಿಯಾಳಿವರೆಗೆ ಚತುಷ್ಪಥ ಕಾಂಕ್ರೀಟ್ ರಸ್ತೆ ಇದೆ. ಕಡಿಯಾಳಿಯಿಂದ ಮಣಿಪಾಲದವರೆಗೆ 30 ಮೀ. ಅಗಲದ ರಸ್ತೆಯಾಗಲಿದೆ. ಭೂ ಸ್ವಾಧೀನಕ್ಕೆ ಪ್ರತ್ಯೇಕ ಅನುದಾನ ಮೀಸಲಿಡಲಾಗಿದೆ ಎಂದರು.
ಪರ್ಕಳದಲ್ಲಿ ಹೊಸ ಮಾರ್ಗ
ಪರ್ಕಳ ಭಾಗದಲ್ಲಿ ಗದ್ದೆ ಪ್ರದೇಶದಲ್ಲಿ ಸುಸಜ್ಜಿತ ಹೆದ್ದಾರಿ ನಿರ್ಮಾಣವಾಗಲಿದೆ. ಈಗ ಇರುವ ರಸ್ತೆಗೂ ಕಾಂಕ್ರೀಟ್ ಹಾಕಲಾಗುತ್ತದೆ. ಭೂಮಿಗೆ ಗರಿಷ್ಠ ಪರಿಹಾರಕ್ಕೆ ಸೂಚಿಸಲಾಗಿದೆ. ಈ ಕುರಿತು 15ದಿನದಲ್ಲಿ ಸಭೆ ನಡೆಸಲಾಗುವುದು. ಸಾಧ್ಯವಾದರೆ ಆತ್ರಾಡಿವರೆಗೂ ಚತುಷ್ಪಥವಾಗಲಿದೆ ಎಂದರು.
ಪ್ರತ್ಯೇಕ ಸೇತುವೆ
ಇಂದ್ರಾಳಿಯಲ್ಲಿ ಈಗ ಇರುವ ರೈಲ್ವೆ ಸೇತುವೆಯೊಂದಿಗೆ ಮಣಿಪಾಲ ಕಡೆಗೆ ಹೋಗುವುದಕ್ಕಾಗಿಯೇ ಇನ್ನೊಂದು ಹೊಸ ಸೇತುವೆ ನಿರ್ಮಾಣವಾಗಲಿದೆ. ಕಲ್ಸಂಕ ಜಂಕ್ಷನ್‌ನಲ್ಲಿ ಸಂಚಾರ ಸುವ್ಯವಸ್ಥೆಗಾಗಿ ಟ್ರಾಫಿಕ್ ಸಿಗ್ನಲ್ ಮತ್ತಿತರ ಕೆಲಸಗಳಿಗೆ ಪ್ರತ್ಯೇಕ ಅನುದಾನ ನಿಗದಿಪಡಿಸಲಾಗಿದೆ. ರಸ್ತೆಗಳು ಚರಂಡಿ, ಪುಟ್‌ಪಾತ್‌ಗಳನ್ನು ಕೂಡ ಒಳಗೊಂಡಿರುತ್ತವೆ ಎಂದರು.
ಆದಿಉಡುಪಿ-ಮಲ್ಪೆ ಶೀಘ್ರ ಮಂಜೂರಾತಿ
ಆದಿಉಡುಪಿ-ಮಲ್ಪೆ ಬಂದರು ಗೇಟ್‌ವರೆಗೆ ಕಾಂಕ್ರೀಟ್ ಮಾಡಿ ಚತುಷ್ಪಥಗೊಳಿಸುವ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಈ ಬಾರಿಯ ಬಜೆಟ್‌ನಲ್ಲಿ ಘೋಷಣೆಯಾಗುವ ನಿರೀಕ್ಷೆ ಇದೆ. ಇದಕ್ಕೆ ಪೂರ್ಣಪ್ರಮಾಣದಲ್ಲಿ ಭೂಸ್ವಾಧೀನದ ಆವಶ್ಯಕತೆ ಇದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.