Manipal ಫೋಟೊಬಯೊಮಾಡ್ಯುಲೇಶನ್ ಸಮ್ಮೇಳನ ಪೂರ್ವ ಸಭೆ
Team Udayavani, Sep 14, 2023, 12:45 AM IST
ಮಣಿಪಾಲ: ಮಾಹೆ, ಫೋಟೊ ಬಯೊಮಾಡ್ಯುಲೇಶನ್ ಥೆರಪಿಯ ಜಾಗತಿಕ ಸಂಘಟನೆ ಮತ್ತು ಭಾರತೀಯ ಪಾದಚಿಕಿತ್ಸೆ ಸಂಘಟನೆ ಕರ್ನಾಟಕ ವಿಭಾಗದ ಆಶ್ರಯದಲ್ಲಿ ಡಯಾಬಿಟಿಕ್ ಪಾದ ಪ್ರಮಾಣ ಮಾಪನ ಮತ್ತು ನಿಭಾವಣೆ ಸಮ್ಮೇಳನ “ವಾಲ್ಟ್ಕಾನ್-2023’ನ ಪೂರ್ವಭಾವಿ ಸಭೆಯು ಮಂಗಳವಾರ ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ಕಾಲೇಜಿನಲ್ಲಿ ನಡೆಯಿತು.
ಕೆಎಂಸಿ ಡೀನ್ ಡಾ| ಪದ್ಮರಾಜ್ ಹೆಗ್ಡೆ ಕಾರ್ಯಾಗಾರ ಉದ್ಘಾಟಿಸಿ, ಫೊಟೊಬಯೊಮಾಡ್ಯುಲೇಶನ್ ಮತ್ತು ಪೋಡಿಯಾಟ್ರಿ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದಿರುವ ಪ್ರಾಯೋಗಿಕ ಬೆಳವಣಿಗಳನ್ನು ವಿವರಿಸಿದರು. ಆರೋಗ್ಯ ವಿಜ್ಞಾನ ವಿಭಾಗದ ಉದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳ ಸಾಧ್ಯತೆ ಈ ಕಾರ್ಯಾಗಾರ ಮುಂದಿಟ್ಟಿದೆ ಎಂದರು.
ನೇರವಾದ ತರಬೇತಿ, ಸಂವಾದ ಕಲಾಪಗಳ ಮೂಲಕ ಈ ಕಾರ್ಯಾಗಾರ ನವೀನ ತಾಂತ್ರಿಕತೆ, ತಂತ್ರಜ್ಞಾನ, ಸೂಕ್ತ ಪ್ರಯೋಗಗಳಿಗೆ ತೆರೆದುಕೊಳ್ಳುವ ಅವಕಾಶವನ್ನು ಕೂಡ ನೀಡಿದೆ.
ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಡಾ| ಆನಂದ್ ವೇಣುಗೋಪಾಲ್, ಮಾಹೆ ಬೇಸಿಕ್ ಮೆಡಿಕಲ್ ಸೈನ್ಸ್ ಮುಖ್ಯಸ್ಥ ಡಾ| ಉಲ್ಲಾಸ್ ಕಾಮತ್, ಡಯಾಬಿಟಿಕ್ ತಜ್ಞ ಡಾ| ರಜನೀಶ್ ಸಕ್ಸೇನಾ, ಇಂಡಿಯನ್ ಪೋಡಿಯಟ್ರಿ ಸಂಘಟನೆ ಅಧ್ಯಕ್ಷ ಡಾ| ಎಪಿಎಸ್ ಸೂರಿ ಉಪಸ್ಥಿತರಿದ್ದರು. ಐಪಿಎ ಕರ್ನಾಟಕ ವಿಭಾಗದ ಅಧ್ಯಕ್ಷ ಡಾ| ಜಿ. ಅರುಣ್ ಮಯ್ಯ ಸ್ವಾಗತಿಸಿ, ಮುಖೇಶ್ ಕುಮಾರ್ ಸಿನ್ಹಾ ವಂದಿಸಿದರು. ಕಾರ್ಯಾಗಾರದಲ್ಲಿ ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮ ಹೊಂದಿರುವ ಅಮೆರಿಕ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಇರಾನ್ ದೇಶದ 200 ಉನ್ನತ ದರ್ಜೆ ವಿಶ್ವವಿದ್ಯಾನಿಲಯಗಳ ಪ್ರತಿನಿಧಿಗಳು ಪಾಲ್ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.