ಮಣಿಪಾಲ ರಸ್ತೆ ಹೊಂಡಮಯ: ವಾಹನ ಸಂಚಾರ ದುಸ್ತರ

ಹಳೆ ಸಿಂಡಿಕೇಟ್‌ ಸರ್ಕಲ್‌ ;ಬ್ಲೂ ಡಾಟ್‌ ಅಂಗಡಿ, ಮೋರ್‌ ಸ್ಟೋರ್‌ ಮುಂಭಾಗ ; ಇಂದ್ರಾಳಿ ರೈಲ್ವೇ ಸೇತುವೆ ಸಮೀಪ

Team Udayavani, Aug 8, 2019, 5:27 AM IST

070819ASTRO03

ಮಣಿಪಾಲ ಹಳೆ ಸಿಂಡಿಕೇಟ್‌ ಸರ್ಕಲ್‌ ಬಳಿ ರಸ್ತೆ ಪೂರ್ತಿ ಹೊಂಡಮಯವಾಗಿರುವುದು.

ಉಡುಪಿ: ತೀರ್ಥಹಳ್ಳಿ- ಮಲ್ಪೆ ರಾ.ಹೆ. 169ಎಯ ಮಣಿಪಾಲದ ಮಾರ್ಗದ ರಸ್ತೆಯಲ್ಲಿ ಭಾರೀ ಪ್ರಮಾಣದ ಹೊಂಡಗಳು ನಿರ್ಮಾಣವಾಗಿವೆ.

ಎಲ್ಲೆಲ್ಲಿ ಹೊಂಡ?
ಮಣಿಪಾಲದುದ್ದಕ್ಕೂ ಸೂಜಿಮೊನೆ ಇಡಲಾಗದಷ್ಟು ಹೊಂಡಗಳು ನಿರ್ಮಾಣವಾಗಿವೆ. ಹಲವು ಕಡೆ ಸರೋವರ ಸದೃಶ್ಯವಾಗಿದೆ. ಮಣಿಪಾಲದ ಸಿಂಡಿಕೇಟ್‌ ಸರ್ಕಲ್‌, ಮೋರ್‌ ಸ್ಟೋರ್‌ ಎದುರುಗಡೆ ರಸ್ತೆ, ವುಡ್‌ಲ್ಯಾಂಡ್‌ ಬಿಲ್ಡಿಂಗ್‌ ಎದುರು, ಇಂದ್ರಾಳಿ ರೈಲ್ವೇ ಸೇತುವೆಯ ಸಮೀಪದಲ್ಲಿ ದೊಡ್ಡ ಗಾತ್ರದ ಹೊಂಡಗಳು ನಿರ್ಮಾಣವಾಗಿವೆ.

ಹೊಂಡದಲ್ಲಿ ಕೆಸರು ನೀರು ತುಂಬಿದೆ. ಇದರ ನಡುವಿನಿಂದ ಪಾದಚಾರಿಗೆ ರಸ್ತೆ ದಾಟುವುದೂ ದುಸ್ತರ. ಇನ್ನೂ ರಾ.ಹೆ. 66ರ ಕರಾವಳಿ ಬೈಪಾಸ್‌ನಲ್ಲಿ ಇದೇ ಸಮಸ್ಯೆ. ಶಾರದಾ ಹೊಟೇಲ್‌ ಎದುರು ಭಾಗದ ಸರ್ವಿಸ್‌ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಕುಂದಾಪುರ-ಉಡುಪಿ ಮಾರ್ಗವಾಗಿ ತೆರಳುವ ವಾಹನ ಸವಾರರು ತೊಂದರೆಗೆ ಸಿಲುಕಿದ್ದಾರೆ.

ವಾಹನ ಸಂಚಾರ ದುಸ್ತರ
ಮಣಿಪಾಲ ಮಲ್ಪೆ ಮಾರ್ಗದ ಸಂಚಾರ ವಾಹನ ಸವಾರರಿಗೆ ದುಸ್ತರವಾಗಿದೆ. ಉಡುಪಿ, ಮಣಿಪಾಲ, ಪರ್ಕಳ, ತೀರ್ಥಹಳ್ಳಿ ಶಿವಮೊಗ್ಗ, ಕಾರ್ಕಳ ಸೇರಿದಂತೆ ನೂರಾರು ಹಳ್ಳಿಗಳನ್ನು ಪಟ್ಟಣಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. ಈ ಮಾರ್ಗವಾಗಿ ಪ್ರತಿನಿತ್ಯ ಬಸ್‌, ಲಘು ವಾಹನಗಳು, ದ್ವಿಚಕ್ರ ವಾಹನಗಳು ಸಾವಿರಾರು ಸಂಖ್ಯೆಯಲ್ಲಿ ಓಡಾಡುತ್ತವೆ. ರಸ್ತೆಯಲ್ಲಿ ನಿರ್ಮಾಣವಾಗಿರುವ ಹೊಂಡಗಳಿಂದ ಈ ಮಾರ್ಗದಲ್ಲಿ ವಾಹನ ಸವಾರರು ಸಂಚರಿಸಲು ಭಯಭೀತರಾಗಿದ್ದಾರೆ.

ಗಲಾಟೆ -ತಕರಾರು
ವಾಹನ ಸವಾರರು ನಿರ್ದಿಷ್ಟ ದಿಕ್ಕಿನಿಂದ ರಾ.ಹೆ. 169ಎ ಮಾರ್ಗವಾಗಿ ಓಡಾಡುವುದು ಕಷ್ಟಕರವಾಗಿದೆ. ಹೀಗಾಗಿ ವಾಹನಗಳು, ಆಟೋಗಳು ಹೊಂಡಗಳಿಲ್ಲದ ರಸ್ತೆಯಲ್ಲಿ ಸಂಚರಿಸಲು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಾಗುವುದರಿಂದ ನಿತ್ಯ ಜಗಳ, ತಂಟೆ ತಕರಾರುಗಳು ನಡೆಯುತ್ತಿವೆ. ಅಲ್ಲದೇ ಅಪಘಾತಗಳು ಸಂಭವಿಸುತ್ತಿದೆ. ಹೊಂಡಗಳ ರಾಶಿಯಿಂದ ವಾಹನ‌ ಸವಾರರಿಗೆ ದೊಡ್ಡ ಸಂಕಟ ಎದುರಾಗಿದೆ. ಅಲ್ಲದೇ ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಜನರು, ಬೈಸಿಕಲ್‌ ಸವಾರರು ಓಡಾಡುತ್ತಾರೆ.

ದುರಂತದ ಸಂಕೇತ!
ಮಣಿಪಾಲದ ರಸ್ತೆಯಲ್ಲಿ ನಿರ್ಮಾಣವಾದ ಹೊಂಡಗಳು ಮುಂದಾಗುವ ದುರಂತಗಳ ಬಗ್ಗೆ ಎಚ್ಚರಿಕೆ ನೀಡುತ್ತಿವೆ. ಎರಡು ವರ್ಷದ ಹಿಂದೆ ಮಣಿಪಾಲ ಬಸ್‌ ನಿಲ್ದಾಣ ಸಮೀಪ ಬೈಕ್‌ ಸವಾರ ಹೊಂಡಗಳನ್ನು ತಪ್ಪಿಸಲು ಹೋಗಿ ಮಗುವನ್ನು ಕಳೆದುಕೊಂಡ ಘಟನೆ ಸ್ಥಳೀಯರು ಮರೆತಿಲ್ಲ. ಇಂತಹ ಘಟನೆ ಮರುಕಳಿಸುವ ಮೊದಲು ಸ್ಥಳೀಯಾಡಳಿತ ಹಾಗೂ ಜನಪ್ರತಿನಿಧಿಗಳು ಎಚ್ಚರಿಕೆ ವಹಿಸಬೇಕಾಗಿದೆ.

ಹೊಂಡ ತಪ್ಪಿಸಲು
ಹೋಗಿ ಅಪಘಾತ
ಮಣಿಪಾಲ- ಉಡುಪಿ ಮಾರ್ಗವಾಗಿ ಸಂಚರಿಸುವುದು ಕಷ್ಟವಾಗುತ್ತಿದೆ. ವಾಹನ ಸವಾರರು ರಸ್ತೆಯಲ್ಲಿನ ದೊಡ್ಡ ಹೊಂಡ ತಪ್ಪಿಸಲು ಹೋಗಿ ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ.
-ಪ್ರಕಾಶ್‌, ವಾಹನ ಸವಾರ, ಮಣಿಪಾಲ

ಚಿತ್ರ: ಆಸ್ಟ್ರೋಮೋಹನ್‌

ಟಾಪ್ ನ್ಯೂಸ್

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.