ಮಣಿಪಾಲ: ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ
ಮಣಿಪಾಲದ ಸ್ಕೂಲ್ ಆಫ್ ಲೈಫ್ ಸೈನ್ಸ್: ವಿಜ್ಞಾನ ದಿನ
Team Udayavani, Feb 28, 2020, 5:47 AM IST
ಮಣಿಪಾಲ: ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಮಣಿಪಾಲದ ಸ್ಕೂಲ್ ಆಫ್ ಲೈಫ್ ಸೈನ್ಸ್ ಗುರುವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಮಾಹೆ ಕುಲಪತಿ ಡಾ| ಎಚ್. ವಿನೋದ ಭಟ್ ಚಾಲನೆ ನೀಡಿದರು.
ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ತರಬೇತಿಗೆ ಆಗಮಿಸಿದ ಪ್ರೌಢಶಾಲಾ ವಿದ್ಯಾರ್ಥಿಗಳು ರಚಿಸಿದ ಸುಮಾರು 50 ವಿಜ್ಞಾನ ಮಾದರಿಗಳ ವಸ್ತುಪ್ರದರ್ಶನ ಆರಂಭವಾಗಿದ್ದು, ಫೆ. 28ರಂದು ಜಿಲ್ಲೆಯ ವಿವಿಧೆಡೆಗಳ ವಿದ್ಯಾರ್ಥಿಗಳು ರಚಿಸಿದ ವಿಜ್ಞಾನ ಮಾದರಿಗಳ ಪ್ರದರ್ಶನ ನಡೆಯಲಿದೆ. ಸಿ.ವಿ. ರಾಮನ್ ಅವರ ಭಾವಚಿತ್ರವಿರುವ ಫಲಕವನ್ನು ಅನಾವರಣಗೊಳಿಸಿ ಪ್ರದರ್ಶನವನ್ನು ಉದ್ಘಾಟಿಸಲಾಯಿತು.
ಗಮನದ ಸೆಳೆದ ಕರೋನಾ
ಪ್ರಸ್ತುತ ಜಾಗತೀಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕರೋನ ವೈರಸ್ ತುತ್ತಾದ ವ್ಯಕ್ತಿಯಲ್ಲಿ ಕಾಣಿಸಿವ ಲಕ್ಷಣ ಹಾಗೂ ಮುಂಜಾಗೃತ ಕ್ರಮಗಳ ಕುರಿತು ಮಾದರಿಗಳು ನೋಡುಗರ ಗಮನ ಸೆಳೆಯಿತು. ಸೂಕ್ಷ್ಮಾಣು ಜೀವಿಗಳು, ಅವುಗಳಿಂದ ಉಂಟಾಗುವ ಕಾಯಿಲೆ, ಕಿಣ್ವಗಳು, ಪ್ಲಾಸ್ಮಾ, ಆಮ್ಲಜನಕ ಉತ್ಪಾದನೆ, ಸೈಕ್ಲೋಸಿಸ್, ಮಿದುಳು, ಹೈಡ್ರಾಲಿಕ್ಸ್, ಜೆನೆಟಿಕ್ಸ್, ಭೌತ ಮತ್ತು ರಸಾಯನಶಾಸ್ತ್ರಕ್ಕೆ ಸಂಬಂಧಿಸಿದ ಮಾದರಿಗಳು ಪ್ರದರ್ಶನದಲ್ಲಿದ್ದವು. ತರಬೇತಿ ಕಾರ್ಯಾಗಾರ ವಿಜ್ಞಾನ ದಿನದ ಅಂಗವಾಗಿ ಸಂಸ್ಥೆಯಲ್ಲಿ ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 5 ದಿನಗಳ ವಿಜ್ಞಾನ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ಸಂದರ್ಭ ಅವರಿಗೆ ವಿಜ್ಞಾನದ ಕೌತುಕ, ಲ್ಯಾಬೋರೇಟರಿ ಸಂಶೋಧನೆ, ಜೆನೆಟಿಕ್ಸ್ ಇತ್ಯಾದಿಗಳ ಮಾಹಿತಿ, ಪ್ರಾತ್ಯಕ್ಷಿಕೆ ನೀಡಲಾಯಿತು.
ಚೀನ ಮಾದರಿ ಅಂತಸ್ತು ಕೃಷಿ
ನೀರಿನ ಮಿತವ್ಯಯದೊಂದಿಗೆ ವಿಶಿಷ್ಟ ಕ್ರಮದಲ್ಲಿ ಮಾಡಲಾಗುವ ಚೀನ ಮಾದರಿಯ ಅಂತಸ್ತು ಕೃಷಿಯ ಮಾದರಿ ಪ್ರದರ್ಶನದಲ್ಲಿ ಹೆಚ್ಚು ಆಕರ್ಷಣೀಯವಾಗಿತ್ತು. ಬಾಟಲ್‌ಗಳನ್ನು ಉಪಯೋಗಿಸಿ ಇಲ್ಲಿ ಅಂತಸ್ತು ಕೃಷಿಯನ್ನು ಬಿಂಬಿಸಲಾಗಿದ್ದು, ಮೇಲೆ ಹಾಕಿದ ನೀರನ್ನು ಗಿಡಗಳು ಬೇಕಾದಷ್ಟು ಬಳಸಿ ಕೆಳ ಅಂತಸ್ತಿನ ಗಿಡಗಳಿಗೆ ಬಿಟ್ಟುಕೊಡುವ ರೀತಿ ಇದರಲ್ಲಿ ತತ್ವವನ್ನು ಬಿತ್ತರಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.