ಮಣಿಪಾಲದ ವಿಜ್ಞಾನಿ ಅಂಟಾರ್ಟಿಕಾ ಅಧ್ಯಯನ
Team Udayavani, Mar 23, 2018, 9:50 AM IST
ಉಡುಪಿ: ಮಣಿಪಾಲ ಎಂಐಟಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ| ಕೆ.ಬಾಲಕೃಷ್ಣ ಅವರು ಅವರು ಅಧ್ಯಯನಕ್ಕಾಗಿ 95 ದಿನಗಳ ಕಾಲ ಅಂಟಾರ್ಟಿಕಾದಲ್ಲಿ ಕಳೆದು ಅಪೂರ್ವ ಸಾಧನೆ ಮಾಡಿದ್ದಾರೆ. 37ನೆಯ ಭಾರತೀಯ ವಿಜ್ಞಾನಿಗಳ ಪಯಣದಲ್ಲಿ 40 ವಿಜ್ಞಾನಿಗಳೊಂದಿಗೆ ತೆರಳಿದ್ದ ತಂಡದಲ್ಲಿ ಬಾಲಕೃಷ್ಣ ಒಬ್ಬರಾಗಿದ್ದಾರೆ. ಡೀಮ್ಡ್ ಖಾಸಗಿ ವಿ.ವಿ.ಯಿಂದ ಆಯ್ಕೆಯಾದ ಏಕೈಕ ವಿಜ್ಞಾನಿ ಆಗಿದ್ದಾರೆ. ಭೂವಿಜ್ಞಾನ ಸಚಿವಾಲಯದ ನ್ಯಾಶನಲ್ ಸೆಂಟರ್ ಫಾರ್ ಅಂಟಾರ್ಟಿಕಾ ಆ್ಯಂಡ್ ಓಶಿಯನ್ ರಿಸರ್ಚ್ (ಎನ್‌ಸಿಎಒಆರ್) ಈ ಅಧ್ಯಯನ ಪ್ರವಾಸವನ್ನು ಆಯೋಜಿಸಿತ್ತು. ಅಂಟಾರ್ಟಿಕಾದ ಭಾರತೀ ಸ್ಟೇಶನ್ ಇಂಟರ್‌ನೆಟ್, ಆಹಾರ, ಮೂಲ ಸೌಲಭ್ಯಗಳನ್ನು ವಿಜ್ಞಾನಿಗಳಿಗೆ ಒದಗಿಸಿತ್ತು.
‘ಇದು ಅದ್ಭುತ ಮತ್ತು ಮರೆಯಲಾಗದ ಅನುಭವವನ್ನು ತಂದಿತ್ತಿದೆ. ಇಲ್ಲಿ -10 ಡಿಗ್ರಿ ಉಷ್ಣಾಂಶ ಹೊಂದಿದ್ದರೂ ಅನಂತರ ನಮ್ಮ ಸಂಶೋಧನ ಅಧ್ಯಯನಕ್ಕೆ ತೊಂದರೆಯಾಗಲಿಲ್ಲ. ನಾವು 100 ಮಣ್ಣು ಮಾದರಿಗಳನ್ನು ಸಂಗ್ರಹಿಸಿದ್ದೇವೆ. ಇದನ್ನು ಮಣಿಪಾಲ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಪ್ರಯೋಗಾಲಯದಲ್ಲಿ ಪರಿಶೀಲನೆಗೆ ಒಳಪಡಿಸುತ್ತೇವೆ’ ಎಂದು ಬಾಲಕೃಷ್ಣ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.