ಮಣಿಪಾಲ ಎಸ್‌ಒಸಿ ವಿದ್ಯಾರ್ಥಿಗೆ ರಾಷ್ಟ್ರೀಯ ಪ್ರಶಸ್ತಿ
Team Udayavani, May 25, 2017, 2:58 PM IST
ಉಡುಪಿ: ಮಣಿಪಾಲ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಕಮ್ಯುನಿಕೇಶನ್‌ನ (ಎಸ್‌ಒಸಿ) ಸ್ನಾತಕೋತ್ತರ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ ಕ್ಲಿಫರ್ಡ್ ಚೇತನ್ ಆ್ಯಂಬ್ಲಿರ್ ಅವರು ಕಮ್ಯುನಿಟಿ ರೇಡಿಯೋ ವೀಡಿಯೋ ಚಾಲೆಂಜ್-“ಕಮ್ಯುನಿಟಿ ರೇಡಿಯೋ ಫಾರ್ ಸಸ್ಟೈನೇಬಲ್ ಡೆವಲಪ್‌ಮೆಂಟ್’ ವಿಷಯದ ಕುರಿತಾಗಿ ಮಾಡಿದ “ಅರಳಿದ ಬದುಕು’ ಕನ್ನಡ ಕಿರುಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಕಾಮನ್‌ವೆಲ್ತ್ ಎಜುಕೇಶನಲ್ ಮೀಡಿಯಾ ಸೆಂಟರ್ ಫಾರ್ ಏಶಿಯಾ ಮತ್ತು ಅಪೀಜಯ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಶನ್ (ಎಐಎಂಸಿ) ವತಿಯಿಂದ ಹೊಸದಿಲ್ಲಿಯ ಇಂಡಿಯಾ ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಪ್ರಶಸ್ತಿ ಪ್ರದಾನಿಸಲಾಯಿತು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಇಎಂಸಿಎ ನಿರ್ದೇಶಕ ಡಾ| ಶಾಹಿದ್ ರಸೂಲ್, ಎಐಎಂಸಿ ನಿರ್ದೇಶಕ ಪ್ರೊ| ಅಶೋಕ್ ಓಗ್ರಾ, ಲೋಕಸಭಾ ಟಿವಿಯ ಎಡಿಟರ್ ಇನ್-ಚೀಫ್ ಆಶಿಶ್ ಜೋಶಿ, ಐಐಎಂಸಿ ಡೈರೆಕ್ಟರ್ ಜನರಲ್ ಕೆ.ಜಿ. ಸುರೇಶ್ ಮತ್ತಿತರರಿದ್ದರು.
“ಸ್ಪರ್ಧಾ ವಿಜೇತರು’
ಪ್ರಥಮ: ಚೆನ್ನೈ ಸತ್ಯಭಾಮಾ ವಿ.ವಿ.ಯ ಅತುಲ್‌ರಾಜ್ ಅವರ ಮಲಯಾಲಂ ಭಾಷೆಯ “ಒತ್ತಲ್’ ಚಿತ್ರ, ದ್ವಿತೀಯ: ಜಾರ್ಖಂಡ್‌ನ ಸೆಂಟ್ರಲ್ ಯುನಿವರ್ಸಿಟಿಯ ಶ್ರೇಯಾನ್ಸ್ ಓಝಾ ಅವರ “ಎಕ್ ಪೆಹೆಲ್’ ಚಿತ್ರ, ತೃತೀಯ:ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಶನ್‌ನ ಕ್ಲಿಫರ್ಡ್ ಚೇತನ್ ಆ್ಯಂಬ್ಲಿರ್ ಅವರ “ಅರಳಿದ ಬದುಕು’ ಚಿತ್ರ.
“ಮಲ್ಲಿಗೆ ಕೃಷಿ ಬದುಕಿನ ಚಿತ್ರ
‘ಚೇತನ್ ಆ್ಯಂಬ್ಲಿರ್ ಅವರ “ಅರಳಿದ ಬದುಕು’ ಶಂಕರಪುರದ ಮಲ್ಲಿಗೆ ಬೆಳೆಗಾರರ ಕುರಿತು ನಿರ್ಮಿಸಿದ 4 ನಿಮಿಷದ ಕನ್ನಡ ಕಿರು ಚಿತ್ರವಾಗಿತ್ತು. ಚಿತ್ರದಲ್ಲಿ ಶ್ರೇಯಾ ಆ್ಯಂಬ್ಲಿರ್ ಅವರು ಮಲ್ಲಿಗೆ ಮಾರಾಟಗಾರಿ¤ಯಾಗಿ, ಶಶಿಕಲಾ ಕೋಟ್ಯಾನ್ ಅವರ ತಾಯಿಯಾಗಿ, ರತಿ ನಾಯರ್ ಮತ್ತು ಶೋಭಾ ಪ್ರಭಾಕರ್ ಗ್ರಾಹಕರಾಗಿ ಅಭಿನಯಿಸಿದ್ದಾರೆ. ಗಿರೀಶ್ ತಂತ್ರಿ ಸಂಗೀತ ನೀಡಿದ್ದಾರೆ. ಆ್ಯಂಡ್ನೂ ಲೋಬೋ ಮತ್ತು ಶ್ಯಾಮ್ ಭಟ್ ಕಥೆ ನೀಡಿದ್ದಾರೆ. ಸ್ಕ್ರಿಪ್ಟ್, ನಿರ್ದೇಶನವನ್ನು ಚೇತನ್ ಆ್ಯಂಬ್ಲಿರ್ ನಿರ್ವಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.