ಮಣಿಪಾಲ ಸಿಂಡ್ ಸರ್ಕಲ್- ಇಂದ್ರಾಳಿ ಮಾರ್ಗ
ಸುಗಮ ಸಂಚಾರಕ್ಕೆ ವಾಹನ ಸವಾರರಿಗೆ ಜಲ್ಲಿ ಕಿರಿಕಿರಿ
Team Udayavani, Oct 15, 2019, 5:33 AM IST
ಉಡುಪಿ: ರಾ.ಹೆ. 169ಎ ಪರ್ಕಳ -ಕಲ್ಸಂಕ ಮಾರ್ಗದ ರಸ್ತೆಯಲ್ಲಿನ ಜಲ್ಲಿ ಕಲ್ಲುಗಳು ಸುಗಮ ವಾಹನ ಸಂಚಾರಕ್ಕೆ ಅಡಚಣೆಯುಂಟು ಮಾಡುತ್ತಿದೆ. ಈ ಮಾರ್ಗದಲ್ಲಿ ದ್ವಿಚಕ್ರ ವಾಹನಗಳು ಸತತವಾಗಿ ಸಂಚರಿಸಿದರೆ, ಕೆಲವೇ ದಿನದಲ್ಲಿ ವಾಹನಗಳು ಗುಜರಿಗೆ ಹಾಗೂ ಸವಾರರು ಆಸ್ಪತ್ರೆಯ ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಗುಂಡಿಗಳಿಗೆ ಜಲ್ಲಿ ಕಲ್ಲು
ಪರ್ಕಳ -ಮಣಿಪಾಲ ಮಾರ್ಗದ ಸಿಂಡಿಕೇಟ್ ಸರ್ಕಲ್, ಐನಾಕ್ಸ್, ರೈಲ್ವೇ ಸೇತುವೆ ಸಮೀಪದ ಬೃಹತ್ ಗಾತ್ರದ ಗುಂಡಿಗಳನ್ನು ಮಳೆಗಾಲದಲ್ಲಿ ಜಲ್ಲಿ ಕಲ್ಲು ಬಳಸಿ ಮುಚ್ಚಲಾಗಿತ್ತು.
ಇದೀಗ ಅತೀಯಾದ ವಾಹನ ಸಂಚಾರದಿಂದ ರಸ್ತೆ ತುಂಬಾ ಜಲ್ಲಿ ಕಲ್ಲುಗಳು ಎದ್ದು ನಿಂತಿವೆ. ದ್ವಿಚಕ್ರ ವಾಹನ ಸವಾರರು ಕೊಂಚ ಎಚ್ಚರ ತಪ್ಪಿದರೂ ಬೈಕ್ ಸ್ಕಿಡ್ ಆಗುವುದು ಖಚಿತ.
ಟೈರ್ ಪಂಕ್ಚರ್- ಖರ್ಚಿಗೆ ದಾರಿ!
ರಸ್ತೆಯಲ್ಲಿ ಜಲ್ಲಿ ಕಲ್ಲುಗಳು ಎದ್ದಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ದ್ವಿಚಕ್ರ ವಾಹನಗಳು ಪಲ್ಟಿ (ಸ್ಕಿಡ್) ಹೊಡೆಯತ್ತಿದೆ. ವಾಹನಗಳ ಟೈರ್ ಪಂಕ್ಚರ್ ಆಗುತ್ತಿದ್ದು ಸಮಸ್ತೆಗೆ ಕಾರಣವಾಗಿದೆ.
ಆಸ್ಪತ್ರೆಗೆ ದಾರಿ !
ಈ ಮಾರ್ಗದಲ್ಲಿ ಸಂಚರಿಸುವ ಸವಾರರು ಸವಾರರು ಮೈ ಕೈ ನೋವು, ಉಸಿರಾಟದ ಸಮಸ್ಯೆ, ಕಣ್ಣು ಉರಿ ತೋರಿಸಿಕೊಳ್ಳಲು ಆಸ್ಪತ್ರೆಯ ದಾರಿ ಹಿಡಿದಿದ್ದಾರೆ.
ಮಳೆಗಾಲದಲ್ಲಿ ರಾ.ಹೆ. 169 ಪರ್ಕಳ- ಕಲ್ಸಂಕ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಪರ್ಕಳ- ಟೈಗರ್ ಸರ್ಕಲ್ ಮಾರ್ಗದಲ್ಲಿ ಕಾಮಗಾರಿಯನ್ನು ಪ್ರಾರಂಭವಾಗಿದೆ. ಇಂದ್ರಾಳಿಯಲ್ಲಿ ಹೊಸ ರೈಲ್ವೇ ಬ್ರಿಡ್ಜ್ ನಿರ್ಮಾಣವಾಗಬೇಕು. ಅದರ ಕಾಮಗಾರಿ ಸಂಪೂರ್ಣ ರೈಲ್ವೇ ಇಲಾಖೆ ಮಾಡಬೇಕಾಗಿದೆ. ಇನ್ನೂ ಐನಾಕ್ಸ್, ಸಿಂಡಿಕೇಟ್ ಸರ್ಕಲ್ ಬಳಿಯ ಎರಡು ಕಡೆಗಳಲ್ಲಿ ಪಕ್ಕ ರಸ್ತೆ ನಿರ್ಮಾಣವಾದರೆ ಈ ಮಾತ್ರ ಸಮಸ್ಯೆಗೆ ಮುಕ್ತಿ ಸಿಗಲಿದೆ.
ಬೈಕ್ ಪಲ್ಟಿ ಹೊಡೆಯುತ್ತಿದೆ
ಸಿಂಡಿಕೇಟ್ ಸರ್ಕಲ್, ಐನಾಕ್ಸ್, ಇಂದ್ರಾಳಿ ಮಾರ್ಗದಲ್ಲಿ ಹಾಕಿರುವ ಜಲ್ಲಿ ಕಲ್ಲುಗಳಿಂದ ಬೈಕ್ ಪಲ್ಟಿ ಹೊಡೆಯುತ್ತಿದೆ. ಈ ಮಾರ್ಗದಲ್ಲಿ ಸಂಚರಿಸಿದರೆ ಬೆನ್ನು ನೋವು ಕಾಣಿಸಿಕೊಳ್ಳುತ್ತಿದೆ.
-ರವೀಂದ್ರ ನಾಯಕ್,
ಪರ್ಕಳ ಬೈಕ್ ಸವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.